ಜೀವನದಲ್ಲಿ ಅವಕಾಶಗಳು ಬರೋದು ಒಂದೇ ಬಾರಿ ಅಂತಾರೆ. ಕಾಂಗ್ರೆಸ್​​ನಲ್ಲಿ ಕ್ರಾಂತಿಗೀತೆ, ಸಿಎಂ ಬದಲಾವಣೆ ಕದನ ಕಿಚ್ಚಿನ ನಡುವೆ ದಲಿತಾಸ್ತ್ರ ಪ್ರಯೋಗ ಆಗಿದೆ. ದಶಕದ ಕೂಗು ಧ್ವನಿ ಏರಿಸಿದ್ದು ದಲಿತ ನಾಯಕರಲ್ಲಿ ಹುಮ್ಮಸ್ಸು ಚಿಗುರಿದೆ.
ರಾಜ್ಯ ಕಾಂಗ್ರೆಸ್​​​ನಲ್ಲಿ ಕ್ರಾಂತಿ-ಭ್ರಾಂತಿ ವದಂತಿಗಳ ನಡುವೆ ಪಿಚ್​​​ನಲ್ಲಿ ತಿರುವು ಕಾಣಿಸಿಕೊಂಡಿದೆ. ಅಧಿಕಾರ ಹಂಚಿಕೆ ಸೂತ್ರದ ಮರ್ಮ ಇನ್ನೂ ನಿಗೂಢ. ಇದೇ ಸೂತ್ರ ನಂಬಿ ಕೂತಿರುವ ಟ್ರಬಲ್ ಶೂಟರ್​ ಡಿಕೆಶಿ, ಕುರ್ಚಿ ಪಟ್ಟ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಈ ನಡುವೆ ಅಹಿಂದ ದಾಳ ಉರುಳಿದ್ದೇ ತಡ ದಲಿತ ಸಿಎಂ ಕೂಗು ಕೂಡ ಮಾರ್ಧನಿಸಿದೆ. ಹಸ್ತ ಗೂಡಲ್ಲಿ ಕಂಪನ ಸೃಷ್ಟಿಸಿದೆ.
ದಲಿತ ನಾಯಕರ ಕ್ಲೋಸ್​ ಡೋರ್ ಮೀಟಿಂಗ್​!
ರಾಜ್ಯ ಕಾಂಗ್ರೆಸ್​​ನಲ್ಲಿ​ ದಲಿತಾಸ್ತ್ರ ಪ್ರಯೋಗ ಆಗಿದ್ದು ದಲಿತ ಸಮುದಾಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮನೆಯಲ್ಲಿ ಮತ್ತೋರ್ವ ದಲಿತ ನಾಯಕ, ಗೃಹಸಚಿವ ಡಾ.ಜಿ.ಪರಮೇಶ್ವರ್ ಗುಪ್ತ್ ಗುಪ್ತ್ ಸಭೆ ನಡೆಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಹೊತ್ತು ಸುದೀರ್ಘ, ಕ್ಲೋಸ್​ ಡೋರ್ ಮೀಟಿಂಗ್​ ನಡೆಸಿದ್ದು ನಾಯಕತ್ವ ಬದಲಾವಣೆ ಸನ್ನಿವೇಶ ಬಂದ್ರೆ ನಿಭಾಯಿಸಬೇಕಾದ ಪಾತ್ರಗಳ ಬಗ್ಗೆ ಚರ್ಚಿಸಿದ್ದಾರೆ. ಇಡೀ ಸಮುದಾಯ ಒಗ್ಗಟ್ಟು ಪ್ರದರ್ಶಿಸುವ ಸಂದೇಶ ನೀಡುವ ಕುರಿತು ಒಮ್ಮತಕ್ಕೆ ಬಂದಿದ್ದಾರೆನ್ನಲಾಗಿದೆ.
ಸಭೆ ಬಳಿಕ ಜೋಡೆತ್ತುಗಳಂತೆ ಹೊರಬಂದ ಗೃಹಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಹೆಚ್​.ಸಿ.ಮಹದೇವಪ್ಪ ಬೇರೆಯದ್ದೇ ಕಥೆ ಹೇಳಿದ್ರು. ನಿಮಗೆ ಹೇಳೋಕೆ ಆಗದೇ ಇರೋದನ್ನೇ ಮಾತಾಡಿಕೊಂಡ್ವಿ ಅಂತ ಕುತೂಹಲ ಹೆಚ್ಚಿಸಿದ್ರು. ಇನ್ನು ದಲಿತ ನಾಯಕರು ಸಿಎಂ ಆಗಲು ಸಮರ್ಥರು ಎಂಬ ಸಂದೇಶ ಸಾರಿದ್ದಾರೆ.
ಸಚಿವ ಹೆಚ್.ಸಿ ಮಹದೇವಪ್ಪ ಮಾಡಿದ್ದು ಮತ್ತೊಂದು ವ್ಯಾಖ್ಯಾನ.. ದಲಿತರಿಗೆ ಸಿಎಂ ಪಟ್ಟ ಕೊಡಿ ಅನ್ನೋ ರೀತಿ ಸನ್ನಿವೇಶ ಈಗಿಲ್ಲ ಅಂದ್ರು.. ಆ ಸನ್ನಿವೇಶ ಬಂದಾಗ ಎಲ್ಲಿ, ಏನು ಮಾತನಾಡಬೇಕೋ ಮಾತಾಡ್ತೀವಿ ಅಂತ ಕ್ವೆಶ್ಚನ್ ಮಾರ್ಕ್ ಇಟ್ಟಿದ್ದಾರೆ.
ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ದಲಿತ ಸಿಎಂ ವಿಚಾರ ಸದ್ಯಕ್ಕಿಲ್ಲ ಅಂದ್ರೆ, ಅತ್ತ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೆ.ಹೆಚ್.ಮುನಿಯಪ್ಪ ಸಿಎಂ ಆಗೋ ಆಸೆ ಏನೂ ಇಲ್ಲ. ಆದ್ರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಸಿಎಂ ಆಸೆ ಹೊರಹಾಕಿದ್ದಾರೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಸುಳಿವು ಕೊಟ್ಟ ಸಚಿವ ಚಲುವರಾಯಸ್ವಾಮಿ : ಒಳ್ಳೆಯ ರೀತಿ ತೀರ್ಮಾನ ಆಗುತ್ತೆ ಎಂದ ಚಲುವರಾಯಸ್ವಾಮಿ
ಒಟ್ಟಾರೆ ರಾಜ್ಯ ರಾಜಕೀಯದ ಆಟದ ಮೈದಾನದಲ್ಲಿ ಪಳಗಿದ ಹುಲಿಗಳು ಸಿಎಂ ಪಟ್ಟಕ್ಕಾಗಿ ಬಿಗಿಪಟ್ಟುಗಳನ್ನು ಪ್ರಯೋಗಿಸ್ತಿವೆ. ಒಂದ್ವೇಳೆ ನವೆಂಬರ್ ಕ್ರಾಂತಿ ಆದ್ರೆ ಉಕ್ಕೇರುವ ಕಡಲ ಅಲೆಗಳಂತೆ ರಾಜ್ಯ ರಾಜಕಾರಣ ಕದಡಿ ಹೋಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us