/newsfirstlive-kannada/media/media_files/2025/12/03/parameshwar-and-satish-jarkiholi-2025-12-03-10-21-07.jpg)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್​ನಲ್ಲಿ ‘ಪವರ್ ಶೇರಿಂಗ್’ ವಿಚಾರ ದೊಡ್ಡ ಮೊಟ್ಟದಲ್ಲಿ ಸುದ್ದಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಉಂಟಾಗಿರುವ ಗೊಂದಲ ನಿವಾರಿಸಲು ಹೈಕಮಾಂಡ್​ ಬ್ರೇಕ್​ಫಾಸ್ಟ್​ ಮೀಟಿಂಗ್​ಗೆ ಸಲಹೆ ನೀಡಿತ್ತು.
ಅಂತೆಯೇ ಉಭಯ ನಾಯಕರು ‘ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ನಾವಿಬ್ಬರು ಎಂದೆಂದಿಗೂ ಸಹೋದರರು’ ಎಂಬ ಸಂದೇಶ ಸಾರುತ್ತ ಎರಡೆರಡು ಬಾರಿ ಬ್ರೇಕ್​ಫಾಸ್ಟ್ ಮೀಟಿಂಗ್ ನೆಪದಲ್ಲಿ ಮಾತುಕತೆ ನಡೆಸಿದ್ದಾರೆ. ಮೊದಲ ಬಾರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದರೆ, ಎರಡನೇ ಬಾರಿಗೆ ಡಿಕೆ ಶಿವಕುಮಾರ್ ನಿವಾಸದಲ್ಲಿ ಮಾತುಕತೆಯಾಗಿದೆ.
ಇದನ್ನೂ ಓದಿ: ವಿಪಕ್ಷಗಳ ಕಣ್ಣು ಕುಕ್ಕಿದ ಸಿದ್ದು, ಡಿಕೆಶಿ ವಾಚ್.. ಹೀಗೂ ಉಂಟಾ?
ಇತ್ತ.. ಇಬ್ಬರ ಮಧ್ಯೆ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆದು, ಗೊಂದಲ ಬಗೆಹರಿದರೆ ಒಳ್ಳೆಯದೇ ಅಲ್ಲವೇ ಎಂದಿದ್ದ ನಾಯಕರಿಬ್ಬರು ರಹಸ್ಯ ಮಾತುಕತೆ ನಡೆಸಿರೋದು ಚರ್ಚೆಗೆ ಕಾರಣವಾಗಿದೆ. ಸಿದ್ದು ಮತ್ತು ಡಿಕೆಶಿ ನಡುವೆ ಎರಡು ಸುತ್ತಿನ ಮಾತುಕತೆ ಆಗುತ್ತಿದ್ದಂತೆಯೇ ಸಚಿವರಾದ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೋಳಿ ಅಲರ್ಟ್ ಆಗಿದ್ದಾರೆ.
ಈ ಇಬ್ಬರು ನಾಯಕರು ರಹಸ್ಯ ಮಾತುಕತೆ ನಡೆಸಿರೋ ವಿಚಾರ ಬೆಳಕಿಗೆ ಬಂದಿದೆ. ನಿನ್ನೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ಪರಸ್ಪರ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಇನ್ನು ಜಾರಕಿಹೋಳಿ ಭೇಟಿಗೂ ಮೊದಲು ಪರಮೇಶ್ವರ್, ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ನಂತರ ಜಾರಕಿಹೊಳಿಯನ್ನ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ. ಸತೀಶ್ ಜಾರಕಿಹೊಳಿ ಹಾಗೂ ಡಾ.ಜಿ ಪರಮೇಶ್ವರ್ ನಡೆ ಏನು ಅನ್ನೋದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us