ವಿಪಕ್ಷಗಳ ಕಣ್ಣು ಕುಕ್ಕಿದ ಸಿದ್ದು, ಡಿಕೆಶಿ ವಾಚ್.. ಹೀಗೂ ಉಂಟಾ?

ಡಿಕೆಶಿ ನಿವಾಸದಲ್ಲಿ ನಿನ್ನೆ ಸೆಕೆಂಡ್​​​ ಇನ್ನಿಂಗ್ಸ್​​ ಬ್ರೇಕ್​​ಫಾಸ್ಟ್​​ ಆಗಿದೆ.. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟಿಗೆ ಬ್ರೇಕ್​ಫಾಸ್ಟ್​ ಮೀಟಿಂಗ್​​ ಬ್ರೇಕ್​​ ಹಾಕಿದೆ. ಆದ್ರೆ, ಬ್ರೇಕ್‌ಫಾಸ್ಟ್ ಮೀಟ್ ಬಳಿಕ ಸಿಎಂ-ಡಿಸಿಎಂ ಕೈನಲ್ಲಿದ್ದ ವಾಚ್ ಭಾರೀ ಸದ್ದು ಮಾಡ್ತಿದೆ.

author-image
Ganesh Kerekuli
Siddaramaiah DK Shivakumar (3)
Advertisment

ರಾಜ್ಯ ರಾಜಕೀಯದಲ್ಲಿ ಇದೀಗ ನಾಯಕತ್ವ ಬದಲಾವಣೆ ಬದಲಾಗಿ ಬ್ರೇಕ್‌ಫಾಸ್ಟ್ ಮೀಟಿಂಗ್ ಚರ್ಚೆ ಜೋರಾಗಿದೆ. ಅಧಿಕಾರ ಹಂಚಿಕೆ ಚರ್ಚೆಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ 2ನೇ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆದಿದೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿದ್ದರಾಮಯ್ಯ, ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದ್ರೆ, ಬ್ರೇಕ್‌ಫಾಸ್ಟ್ ಮೀಟ್‌ಗಿಂತ ವಿಪಕ್ಷಗಳಿಗೆ ಸಿಎಂ-ಡಿಸಿಎಂ ಕೈಲಿದ್ದ ವಾಚ್‌ ಕಣ್ಣುಕುಕ್ಕಿದೆ. ಲಕ್ಷ ಲಕ್ಷ ಬೆಲೆಯ ವಾಚ್‌ ಕಂಡು ಸಿದ್ದು-ಡಿಕೆಶಿ ವಿರುದ್ಧ ವಾಚ್ ಅಸ್ತ್ರ ಪ್ರಯೋಗಿಸಿವೆ.

ಡಿಕೆಶಿ ನಿವಾಸದಲ್ಲಿ ನಿನ್ನೆ ಸೆಕೆಂಡ್​​​ ಇನ್ನಿಂಗ್ಸ್​​ ಬ್ರೇಕ್​​ಫಾಸ್ಟ್​​ ಆಗಿದೆ.. ಟೇಬಲ್​​​ ಮೇಲಿನ ಮಾತುಕತೆಗೆ ನಾಟಿಕೋಳಿ ಸಾಕ್ಷಿಯಾಗಿದೆ.. ಇಡ್ಲಿ ಜೊತೆಗಿನ ಚರ್ಚೆ ಶಾಂತಿ-ಕ್ರಾಂತಿಯ ಭವಿಷ್ಯ ನಿಗದಿಸಿದೆ.. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟಿಗೆ ಬ್ರೇಕ್​ಫಾಸ್ಟ್​ ಮೀಟಿಂಗ್​​ ಬ್ರೇಕ್​​ ಹಾಕಿದೆ. ಆದ್ರೆ, ಬ್ರೇಕ್‌ಫಾಸ್ಟ್ ಮೀಟ್ ಬಳಿಕ ಸಿಎಂ-ಡಿಸಿಎಂ ಕೈನಲ್ಲಿದ್ದ ವಾಚ್ ಭಾರೀ ಸದ್ದು ಮಾಡ್ತಿದೆ. 

ಇದನ್ನೂ ಓದಿ: ಮಂಗಳೂರಲ್ಲಿ ಇವತ್ತು ಸಿಎಂ.. ಕೆಸಿ ವೇಣುಗೋಪಾಲ್ ಜೊತೆ ಮಾತುಕತೆ ನಿರೀಕ್ಷೆ..!

Siddaramaiah DK Shivakumar (2)

₹43 ಲಕ್ಷದ ವಾಚ್‌ಗಳ ಕಂಡು ವಿಪಕ್ಷಗಳ ಟೀಕಾಸ್ತ್ರ!

ಸಿಎಂ-ಡಿಸಿಎಂ ಬ್ರೇಕ್​​ ಫಾಸ್ಟ್​​​ನಲ್ಲಿ ನಾಟಿ ಕೋಳಿ ಬದಲಿಗೆ ಸಿಎಂ-ಡಿಸಿಎಂ ಕಟ್ಟಿಕೊಂಡಿದ್ದ ಒಂದೇ ಕಂಪನಿಯ ವಾಚ್ ಗಮನ ಸೆಳೆದಿದೆ. ನಿನ್ನೆ ಬೆಳಗ್ಗೆ ನಡೆದ ಬ್ರೇಕ್​ ಫಾಸ್ಟ್​​ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಕಾರ್ಟಿಯರ್ ಎನ್ನುವ ಕಂಪನಿಯ ವಾಚ್ ಧರಿಸಿದ್ದಾರೆ ಅಂತ ಹೇಳಲಾಗ್ತಿದೆ. ಈ ಕಾರ್ಟಿಯರ್ ವಾಚ್​​ನ ಮಾರುಕಟ್ಟೆ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ ಅಂತ ವಿಪಕ್ಷಗಳು ಹೇಳ್ತಿವೆ.

ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಮಾಧ್ಯಮ ಮುಂದೆ ಬಂದಾಗ ಇಬ್ಬರ ಕೈನಲ್ಲೂ ಒಂದೇ ರೀತಿಯ ವಾಚ್ ಕಂಡಿದೆ. ಫೋಟೋನಲ್ಲಿ ಇಬ್ಬರ ಕೈಲಿರೋ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಎನ್ನುವುದು ಗೊತ್ತಾಗಿದೆ.. ಒಟ್ಟಿಗೆ ಬ್ರೇಕ್​ ಫಾಸ್ಟ್ ಮಾತ್ರವಲ್ಲದೇ ಒಂದೇ ಕಂಪನಿಯ ವಾಚ್ ಕಟ್ಟಿದ್ದು ಕಾಣಿಸಿದೆ.. ಉಭಯ ನಾಯಕರು ಬೇಕಂತಲೇ ಸೇಮ್ ವಾಚ್ ಕಟ್ಟಿದ್ರಾ ಅಥವಾ ಕಾಕತಾಳೀಯನಾ? ಅವರವ ಪಾಡಿಗೆ ಅವರು ಧರಿಸಿಕೊಂಡು ಬಂದಿದ್ರಾ ಅನ್ನೋ ಪ್ರಶ್ನೆ ಮೂಡಿದೆ. 

ಇದನ್ನೂ ಓದಿ: ನೆಗೆಟೀವ್ ಟ್ರೋಲ್ ಬಗ್ಗೆ ನನಗೆ ಮೊದಲೇ ಗೊತ್ತಿತ್ತು.. ಜಾನ್ವಿ ಯಾಕೆ ಹೀಗೆ ಹೇಳಿದರು..? VIDEO

Siddaramaiah DK Shivakumar (4)

ವಾಚ್‌ ವಿಶೇಷತೆ ಏನು?

ಸಿಎಂ-ಡಿಸಿಎಂ ಕೈನಲ್ಲಿರೋದು ಕಾರ್ಟಿಯರ್ ಬ್ರ್ಯಾಂಡ್‌ನ ಲಕ್ಷುರಿ ವಾಚ್ ಅನ್ನೋದು ವಿಪಕ್ಷಗಳ ವಾದ. ಅಂದ್ಹಾಗೆ ಈ ವಾಚ್‌ ಸ್ಯಾಂಟೋಸ್ ಡೇ ಕಾರ್ಟಿಯರ್ ಎಡಿಷನ್‌ದಾಗಿದೆ. ಕಾರ್ಟಿಯರ್ ವೆಬ್‌ಸೈಟ್ ಪ್ರಕಾರ ಇದರ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ. ಈ ವಾಚ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನ ಬಳಕೆ ಮಾಡಲಾಗಿದೆ. ಬಹುತೇಕ ಭಾಗದಲ್ಲಿ 750/1000 ಕೇಸ್ ಚಿನ್ನವನ್ನ ಬಳಕೆ ಮಾಡಲಾಗಿದೆ. ಒಪಾನಲೈನ್ ಡೈಯಲ್‌ನಲ್ಲಿ ಬೆಳ್ಳಿಯನ್ನ ಬಳಸಲಾಗಿದೆ. ಇದರ 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಅಲ್ಲದೇ ಕ್ರಿಸ್ಟಲ್​​​​​​​ ಆ್ಯಂಟಿ ರಿಫ್ಲೆಕ್ಟಿವ್ ಗ್ಲಾಸ್ ಹೊಂದಿದ್ದು, ವಾಟರ್ ಪ್ರೂಫ್ ವಾಚ್ ಆಗಿದೆ. ಈ ವಾಚ್‌ಗೆ 8 ವರ್ಷದ ವಾರೆಂಟಿ ನೀಡಲಾಗುತ್ತಿದ್ದು, ಈ ಸಮಯದಲ್ಲಿ ವಾಚ್, ಚೈನ್, ಡೈಯಲ್, ಟೈಮ್‌ನಲ್ಲಿ ಸಣ್ಣ ವ್ಯತ್ಯಾಸವಾದರೂ ರಿಪ್ಲೇಸ್ ಮಾಡಲಾಗುತ್ತದೆ.

ಬೂಟಾಟಿಕೆ ಸಿದ್ದ ಅಂತ ‘ದೋಸ್ತಿ’ಗಳ ಟೀಕಾಪ್ರಹಾರ

ಸಿಎಂ-ಡಿಸಿಎಂ ಕೈನಲ್ಲಿರೋ ವಾಚ್‌ನ ಕಂಡು ಜೆಡಿಎಸ್ ಟೀಕಾಪ್ರಹಾರ ಮಾಡಿದೆ. ಸಮಾಜವಾದಿ ಅಲ್ಲ, ಅಸಲೀಗೆ ದೊಡ್ಡ ಮಜಾವಾದಿ ಅಂತ ದಳಪಡೆ ಗುಡುಗಿದೆ. 

ಬೂಟಾಟಿಕೆ ಸಿದ್ದ!

ಸಿದ್ದರಾಮಯ್ಯ ಹೇಳಿಕೊಳ್ಳುವುದು ನಾನೊಬ್ಬ ಸಮಾಜವಾದಿ. ಅಸಲೀಗೆ ದೊಡ್ಡ ಮಜಾವಾದಿ. ಅಂದು 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಜ್ರ ಖಚಿತ "ಹ್ಯೂಬ್ಲೋಟ್ ವಾಚ್‌" ಕಟ್ಟಿ ಟೀಕೆಗೆ ಗುರಿಯಾಗಿದ್ದ ಮಜಾವಾದಿ, ಇಂದು ಸಹ ಅವರ ಕೈಯಲ್ಲಿ ಚಿನ್ನದಿಂದ ತಯಾರಿಸಿದ ಕಾರ್ಟಿಯರ್‌ ಬ್ರ್ಯಾಂಡ್‌ನ 43 ಲಕ್ಷ ರೂ. ಬೆಲೆ ಬಾಳುವ ಐಷಾರಾಮಿ ವಾಚ್‌. ಸಿದ್ದರಾಮಯ್ಯ ಅವರೇ, ಸಮಾಜವಾದದ ಬಗ್ಗೆ ಬೊಗಳೆ ಭಾಷಣ ಮಾಡಲು ನಿಮಗೆ ಯಾವ ನೈತಿಕತೆ ಇದೆ? 

-ಜಾತ್ಯಾತೀತ ಜನತಾದಳ

‘ಸರಳ’ ಸಮಾಜವಾದಿ!

ಸಿದ್ದರಾಮಯ್ಯನವರೇ.. ಸಮಾಜವಾದದ ನಿಮ್ಮ ವ್ಯಾಖ್ಯಾನ ತುಂಬಾ ಹೆಚ್ಚಿನ ಬೆಲೆಯೊಂದಿಗೆ ಬಂದಂತೆ ತೋರುತ್ತದೆ. ಕರ್ನಾಟಕದ ಜನರು ಬರ ಮತ್ತು ಮೂಲಸೌಕರ್ಯಗಳಿಲ್ಲದೇ ಹೋರಾಡುತ್ತಿದ್ದಾರೆ. ಆದ್ರೆ, ನಮ್ಮ "ಸರಳ ಸಮಾಜವಾದಿ" ಮುಖ್ಯಮಂತ್ರಿ ಸ್ಯಾಂಟೋಸ್ ಡಿ ಕಾರ್ಟಿಯರ್ ವಾಚ್ ಧರಿಸಿ ಪ್ರದರ್ಶನ ಮಾಡ್ತಿದ್ದಾರೆ.

-ಭಾರತೀಯ ಜನತಾ ಪಾರ್ಟಿ

ಹಾಲಿವುಡ್, ಬಾಲಿವುಡ್ ನಟರ, ಉದ್ಯಮಿಗಳ ನೆಚ್ಚಿನ ವಾಚ್​ ಸಿಎಂ-ಡಿಸಿಎಂ ಕೈನಲ್ಲಿರೋದು ದೋಸ್ತಿಗಳ ಕಣ್ಣು ಕುಕ್ಕಿದೆ.. ಆದ್ರೆ, ಈ ವಾಚ್‌ನ ಮೂಲವೇನು? ಈ ವಾಚ್‌ಗಳು ಲಕ್ಷಾಂತರ ರೂಪಾಯಿ ಬೆಲೆಬಾಳುವಂಥದ್ದಾ ಅನ್ನೋದಕ್ಕೆ ಸಿಎಂ-ಡಿಸಿಎಂ ಇಬ್ಬರೂ ಏನ್ ಉತ್ತರ ಕೊಡ್ತಾರೆ ಅನ್ನೋದೆ ಇಂಟ್ರೆಸ್ಟಿಂಗ್.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar BJP JDS Power sharing
Advertisment