/newsfirstlive-kannada/media/media_files/2025/11/29/siddaramaiah-2-2025-11-29-07-56-57.jpg)
ಇದು ಕ್ರಾಂತಿಯಲ್ಲ. ಕರುನಾಡ ಪಟ್ಟದಾಟಕ್ಕೆ ನಡೆಯುತ್ತಿರುವ ಮಹಾಕ್ರಾಂತಿ. ಈ ಮಹಾಕ್ರಾಂತಿಗೆ ಈಗ ಮುಹೂರ್ತ ಫಿಕ್ಸ್​ ಆಗಿದೆ. ಅಂತು ಪಟ್ಟದಾಟಕ್ಕೆ ಹೈಕಮಾಂಡ್ ಹೈವೋಲ್ಟೇಜ್ ಮುಹೂರ್ತಕ್ಕೆ ಕೌಂಟ್​ಡೌನ್​​ ಶುರು ಆಗಿದೆ. ಇದ್ರ ಮಧ್ಯೆ ಸಿದ್ದು-ಡಿಕೆ ನಡುವಿನ ಸಮರ ಸಂಧಾನಕ್ಕೆ ಇವತ್ತು ಬ್ರೇಕ್‌ಫಾಸ್ಟ್ ಸಭೆ ನಡೆಯಲಿದೆ. ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವು ಕೊಟ್ಟಿದ್ದಾರೆ.
ಬ್ರೇಕ್‌ಫಾಸ್ಟ್ ಮೀಟ್!
ಕುರ್ಚಿ ಗೊಂದಲದ ಬಗ್ಗೆ ಭಾನುವಾರ ಅಂದ್ರೆ ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಡಬಲ್ ಮೀಟಿಂಗ್ ಆಯೋಜನೆ ಆಗಿದೆ. ಇದ್ರ ಮಧ್ಯೆ ಸಂಡೆ ಕ್ಲೈಮ್ಯಾಕ್ಸ್​ಗೆ ಇವತ್ತು ಸಿಎಂ ಸಿದ್ದರಾಮಯ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಇವತ್ತು ಬೆಳಗ್ಗೆ 9.30ಕ್ಕೆ ಡಿಕೆಶಿಯನ್ನ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್​​ಗೆ ಆಹ್ವಾನಿಸಿದ್ದಾರೆ. ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಉಪಹಾರ ಮೀಟಿಂಗ್ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಈ ಬ್ರೇಕ್​ಫಾಸ್ಟ್ ಮೀಟಿಂಗ್ ಭಾರೀ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್! : ಇಬ್ಬರ ನಡುವೆ ರಾಜೀ ಸಂಧಾನ ಸೂತ್ರ ಏರ್ಪಡುತ್ತಾ?
ಹೈಕಮಾಂಡ್ ಸೂಚನೆನಾ?
ಹೈಕಮಾಂಡ್​ನಿಂದಲೇ ಬ್ರೇಕ್​​ಫಾಸ್ಟ್​​ ಮೀಟಿಂಗ್​​ಗೆ ಸೂಚನೆ ಬಂದಿದೆ ಎಂಬ ಸುಳಿವು ಸಿಕ್ಕಿದೆ. ಹೈಕಮಾಂಡ್​​ ಕಟ್ಟಪ್ಪಣೆ ಬೆನ್ನಲ್ಲೆ ಸಿದ್ದರಾಮಯ್ಯ, ಡಿಕೆಶಿಗೆ ಆಮಂತ್ರಣ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಯಕತ್ವ ಸಮಸ್ಯೆಯನ್ನ ನೀವಿಬ್ಬರೇ ಕೂತು ಬಗೆಹರಿಸಿಕೊಳ್ಳಿ ಅಂತ ಇಬ್ಬರಿಗೂ ಕರೆ ಮಾಡಿ ಭೇಟಿಯಾಗಿ ಚರ್ಚಿಸಿ. ಪರಸ್ಪರ ಚರ್ಚೆಯ ಬಳಿ ಒಂದು ತೀರ್ಮಾನಕ್ಕೆ ಬನ್ನಿ ಅಂತ ಖುದ್ದು ಹೈಕಮಾಂಡ್ ನಾಯಕರೇ ಸೂಚಿಸಿದ್ದಾರೆಂಬ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಹೇಳಿಕೆಯಲ್ಲಿ ಹೈಕಮಾಂಡ್​​ ಸೂಚನೆ ಇದೆ ಎಂಬ ಪದವನ್ನ ಉಲ್ಲೇಖಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
‘ನಿಲುವಿನಲ್ಲಿ ಬದಲಾವಣೆ ಇಲ್ಲ’
ಹೈಕಮಾಂಡ್ ಅವರಿಗೂ (ಡಿಕೆಶಿ) ಫೋನ್ ಮಾಡಿದ್ದರು. ನನಗೂ ಫೋನ್ ಮಾಡಿದ್ದರು. ಅದಕ್ಕಾಗಿ ನಾನು ಅವನಿಗೆ ಬ್ರೇಕ್ಫಾಸ್ಟ್ಗೆ ಕರೆದಿದ್ದೇನೆ. ಅಲ್ಲಿ ಬಂದಾಗ ಚರ್ಚೆ ಮಾಡುತ್ತೇನೆ. ನನ್ನ ಸ್ಟ್ಯಾಂಡ್ನಲ್ಲಿ ಯಾವುದೇ ಬದಲಾವಣೆ ಇಲ್ಲ.
ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ. ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ಹೇಳಿದ್ದಾರೆ. ಹೈಕಮಾಂಡ್‌ನವರು ನವದೆಹಲಿಗೆ ಕರೆದರೆ ಹೋಗುತ್ತೇನೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಇದಷ್ಟೇ ಅಲ್ಲ.. ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವಿಗೆ ಬದ್ಧನಾಗಿದ್ದೇನೆ. ತಾವು ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸಿಎಂ ಮತ್ತೆ ದೃಢಪಡಿಸಿದ್ದಾರೆ. ಜೊತೆಗೆ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇನೆ ಅಂತಲೂ ತಿಳಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಸಂಜೆ ಡೆಲ್ಲಿಗೆ ಪಯಣ ಬೆಳೆಸಬೇಕಿತ್ತು. ಆದ್ರೆ, ಏಕಾಏಕಿ ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿ ಪ್ರವಾಸ ರದ್ದುಗೊಳಿಸಿದ್ದಾರೆ. ಸಿಎಂ ಬ್ರೇಕ್​ಫಾಸ್ಟ್‌ಗೆ​​ ಆಹ್ವಾನ ನೀಡಿರೋದ್ರಿಂದ ಡಿಕೆಶಿ ಟ್ರಿಪ್​​ ಕ್ಯಾನ್ಸಲ್​​ ಆಗಿದೆ. ಸಿಎಂ-ಡಿಸಿಎಂ ನಡುವೆ ಇವತ್ತು ಸಂಧಾನವೋ? ಸಮರವೋ ಅನ್ನೋದು ಬ್ರೇಕ್‌ಫಾಸ್ಟ್ ಮುಗಿದ ಬಳಿಕ ಗೊತ್ತಾಗಲಿದೆ. ನಾಳೆ ಪವರ್ ಶೇರಿಂಗ್ ಫೈಟ್‌ಗೆ ಕ್ಲೈಮ್ಯಾಕ್ಸ್ ಬೀಳೋದು ಪಕ್ಕಾ ಆಗಿದೆ.
ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us