/newsfirstlive-kannada/media/media_files/2025/11/27/dk-shivakumar-12-2025-11-27-13-03-42.jpg)
ನಾವು ಸಿಡಿದೇಳುವ ಮುನ್ನ ಡಿ.ಕೆ.ಶಿವಕುಮಾರ್​ಗೆ ಪಟ್ಟ ಕೊಡ್ಬೇಕು ಎಂದು ಒಕ್ಕಲಿಗ ಸಂಘ ವಾರ್ನಿಂಗ್ ಮಾಡಿದೆ. ರಾಜ್ಯ ಒಕ್ಕಲಿಗ ಸಂಘದಿಂದ ಮಹತ್ವದ ಸಭೆ ನಡೆಯಿತು. ಸಭೆ ಬಳಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುವ ಮುನ್ನವೇ ಡಿಕೆಶಿಗೆ ಸಿಎಂ ಸ್ಥಾನ ನೀಡಿ ಎಂದು ಒಕ್ಕಲಿಗರ ಸಂಘ ಆಗ್ರಹಿಸಿದೆ.
ಒಕ್ಕಲಿಗ ಸಂಘದ ನೂತನ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನ್ನಾಡಿ.. 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಡಿಕೆಶಿ ಸಿಎಂ ಆಗಬೇಕು. ಸಿದ್ದರಾಮಯ್ಯನವರೇ, ನೀವೇ ಡಿಕೆ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ. ಡಿಕೆ ಶಿವಕುಮಾರ್ ಹಿಂದೆ ನಡೆದ ಚುನಾವಣೆ ಪ್ರಚಾರದಲ್ಲಿ ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಎಂದಿದ್ದರು. ಅವರಿಗೆ ಮತಗಳನ್ನು ಕೊಟ್ವಿ. ಅಧ್ಯಕ್ಷರಾಗಿ ಶ್ರಮ ಪಟ್ಟು ಊಟ ನಿದ್ದೆ ಇಲ್ಲದೇ ಒದ್ದಾಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆಯೂ ಅಧಿಕಾರ ಅನುಭವಿಸಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ
ಒಳ್ಳೆಯ ಕೆಲ್ಸವನ್ನು ಅವರೂ ಮಾಡಿದ್ದಾರೆ. ಆದರೆ ಅಧಿಕಾರ ಹಂಚಿಕೆಯ ಒಪ್ಪಂದದ ಚರ್ಚೆಯಾಗಿದೆ. ಈಗ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಒಪ್ಪುತ್ತಾರೋ ಅನ್ನೋ ಚರ್ಚೆ ಬರುತ್ತಿದೆ. ಹೀಗಾಗಿ ಡಿಕೆ ಪಟ್ಟ ಕಷ್ಟಕ್ಕೆ ಕೂಲಿ ಕೊಡಿ ಅಂತಾ ಕೇಳೋಕೆ ನಾವು ತಯಾರಾಗಿದ್ದೇವೆ. ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದಾರೆ. ಡಿಕೆಗೆ ಅನ್ಯಾಯ, ಮೋಸ ಆಗಬಾರದು. ಸ್ವಾಮೀಜಿಗಳ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೋರಾಟ ಮಾಡ್ತೀವಿ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಅಹಿಂದ ಸಚಿವರಿಂದ ಹೈಕಮ್ಯಾಂಡ್‌ಗೆ ಮೇಲೆ ಒತ್ತಡ ಹೇರಲು ತೀರ್ಮಾನ : ಹೈಕಮ್ಯಾಂಡ್ ತೀರ್ಮಾನಕ್ಕೆ ಬದ್ದ ಎಂದ ಸಿದ್ದರಾಮಯ್ಯ!
/filters:format(webp)/newsfirstlive-kannada/media/media_files/2025/11/27/l-shrinivas-2025-11-27-13-05-27.jpg)
ಸಿದ್ದರಾಮಯ್ಯ ಅಧಿಕಾರ ಕೊಡೋದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಕೆಶಿಗೆ ಅವಕಾಶ ಕೊಡಲಿ. ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ. ನಮ್ಮ ಜನಾಂಗಕ್ಕೆ ಅನ್ಯಾಯವಾಗಲು ಬಿಡೋದಿಲ್ಲ. ಅನ್ಯಾಯವಾದರೆ ಕೈಕಟ್ಟಿ ಕೂರದೇ KPCC ಅಧ್ಯಕ್ಷರಾಗಿ ದುಡಿದಿದ್ದಾರೆ.
ಎರಡನೇ ಅವಧಿಗೆ ಸಿಎಂ ಆಗ್ತಾರೆ ಅನ್ನೋ ತಾಳ್ಮೆಯಿಂದ ಸುಮ್ಮನಿದ್ದೆವು. ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ನಾವು ಇನ್ನೊಬ್ಬರ ಅವಕಾಶ ಕೇಳುತ್ತಿಲ್ಲ. ನಮ್ಮ ಜನಾಂಗಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಬೇಡಿಕೆ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದು vs ಡಿಕೆಶಿ: ಸ್ವಾಮೀಜಿಗಳ ಎಂಟ್ರಿ..! ಯಾರು ಏನಂದ್ರು..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us