Advertisment

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿದ ಸಚಿವ ಎಂ.ಬಿ.ಪಾಟೀಲ್..! ಏನು ಹೇಳಿದ್ದಾರೆ?

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ ? ತೊಂದರೆ ಆಗಿಲ್ಲವಲ್ಲ, ಹಾಗೆಯೇ ಲಿಂಗಾಯತ ಧರ್ಮ ಕೂಡ ಬೇಕು ಎಂದಿದ್ದಾರೆ.

author-image
Ganesh Kerekuli
MB Patil
Advertisment

ಬೆಂಗಳೂರು: ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ ? ತೊಂದರೆ ಆಗಿಲ್ಲವಲ್ಲ, ಹಾಗೆಯೇ ಲಿಂಗಾಯತ ಧರ್ಮ ಕೂಡ ಬೇಕು ಎಂದಿದ್ದಾರೆ. 

Advertisment

ಮುಂದುವರಿದು.. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ಹಿಂದೆ ಆಟ ಆಡಿದ ಹಾಗೆ ಈಗ ಆಡಲು ಆಗುವುದಿಲ್ಲ. ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು. ಇದನ್ನ ನಾವು ನಿನ್ನೆಯೇ ಹೇಳಿದ್ದೇವೆ.

ಆದರೆ ಇದು ಬಸವ ಧರ್ಮ ಇಂಡಿಕ್ ರಿಲಿಜಿಯನ್, ಇದರಲ್ಲಿ ಪ್ರಶ್ನೆ ಏನಿದೆ? ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದರು. ಆದರೆ ಬಾರಿ ಯಾರ ಆಟಗಳೂ ನಡೆಯುವುದಿಲ್ಲ. ನಾವು ಪಾಸಿಟಿವ್ ಆಗಿ ಹೋಗೋಣ. ನಾವು ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. 

ಇದನ್ನೂ ಓದಿ: ಗಾಂಚಾಲಿಗೆ ಜಾಗ ಇಲ್ಲ..! ಐವರು ಯಂಗ್​ಸ್ಟರ್​ ಕರಿಯರ್​ಗೆ ಬಿತ್ತಾ ಕೊನೆ ಮೊಳೆ..?

Advertisment

ನಿನ್ನೆ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ನಿನ್ನೆ ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಹಿಂದೂ ಧರ್ಮದ ಭಾಗವಲ್ಲ ಅಂತ ದಾವಣಗೆರೆಯಲ್ಲಿ ಮಹಾಸಭಾ ನಿರ್ಣಯ ಮಾಡಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ ಎಂದಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Separate Lingayat religion MB Patil
Advertisment
Advertisment
Advertisment