/newsfirstlive-kannada/media/media_files/2025/10/06/ishan-umran-rutu-2025-10-06-10-25-51.jpg)
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್​ ಇಂಡಿಯಾವನ್ನ ಪ್ರಕಟಿಸಿರೋ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಹಲವು ಸಂದೇಶಗಳನ್ನ ರವಾನಿಸಿದೆ. ಕೊಹ್ಲಿ, ರೋಹಿತ್​ಗೆ ಪರೋಕ್ಷವಾಗಿ ಎಚ್ಚರಿಕೆಯನ್ನ ರವಾನಿಸಿರೋ ಕಮಿಟಿ, ಇದೇ ವೇಳೆ ಹಲವು ಯುವ ಆಟಗಾರರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನೂ ನೀಡಿದೆ. ಒಂದು ಕಾಲದಲ್ಲಿ ಫ್ಯೂಚರ್​ ಸ್ಟಾರ್​ ಅನಿಸಿಕೊಂಡಿದ್ದವರು ಈಗ ತಂಡಕ್ಕೆ ಬೇಡವಾಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಏಕದಿನ, ಟಿ20 ಸರಣಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಟಫ್​ ಕಾಲ್​ಗಳನ್ನ ತೆಗೆದುಕೊಂಡಿರುವ ಸೆಲೆಕ್ಷನ್​​ ಕಮಿಟಿ ಅಳೆದುತೂಗಿ ಲೆಕ್ಕಾಚಾರ ಹಾಕಿ ಬಲಿಷ್ಟವಾದ ತಂಡವನ್ನ ಸೆಲೆಕ್ಟ್​ ಮಾಡಿದೆ. ಇದೇ ವೇಳೆ ಹಲವು ಆಟಗಾರರ ಕರಿಯರ್​ಗೂ ಕೊನೆ ಮೊಳೆ ಜಡಿದಿದೆ. ಅದ್ರಲ್ಲೂ ಪ್ಯೂಚರ್​ ಸ್ಟಾರ್ಸ್​ ಎನಿಸಿಕೊಂಡಿದ್ದ ಕೆಲ ಯುವ ಆಟಗಾರರ ಪಾಲಿಗೆ ಟೀಮ್​ ಇಂಡಿಯಾ ಡೋರ್​ ಕ್ಲೋಸ್​ ಸಂದೇಶ ರವಾನೆಯಾಗಿದೆ.
‘ಗಾಂಚಾಲಿ’ ಕಿಶನ್​ಗೆ ಜಾಗವೇ ಇಲ್ಲ
2023ರ ವಿಶ್ವಕಪ್​ ಅಂತ್ಯವರೆಗೆ ಇಶಾನ್​ ಕಿಶನ್​ ಮೂರೂ ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ರು. ಆ ಬಳಿಕ ಬಿಸಿಸಿಐ ಬಾಸ್​ಗಳಿಗೆ ಸೆಡ್ಡು ಹೊಡೆದು ಯಡವಟ್ಟು ಮಾಡಿಕೊಂಡ್ರು. ಸೌತ್​ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ವಾಪಾಸ್ಸಾದ ಕಿಶನ್​, ಡೊಮೆಸ್ಟಿಕ್​ ಕ್ರಿಕೆಟ್​ ಆಡು ಅಂದ್ರೆ ಐಪಿಎಲ್​ಗೆ ಸಿದ್ಧತೆ ನಡೆಸಿ ಗಾಂಚಾಲಿ ತೋರಿಸಿದ್ರು. ಆ ಬಳಿಕ ಕಿಶನ್​ ಪಾಲಿಗೆ ಟೀಮ್​ ಇಂಡಿಯಾದ ರೋರ್​ ಓಪನ್​ ಆಗೇ ಇಲ್ಲ. ಇದೀಗ ಪಂತ್​ ಇಂಜುರಿಯಿಂದಾಗಿ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಿತ್ತು. ದೃವ್​ ಜುರೇಲ್​ಗೆ ಮಣೆ ಹಾಕಿರೋ ಆಯ್ಕೆ ಸಮಿತಿ, ಕಿಶನ್​​ಗೆ ಇಂಡಿಯನ್​ ಟೀಮ್​ ಡೋರ್ ಪರ್ಮನೆಂಟಾಗಿ ಕ್ಲೋಸ್​ ಎಂಬ ಸಂದೇಶ ರವಾನಿಸಿದೆ.
ಇದನ್ನೂ ಓದಿ: 6, 6, 6, 6, 6, 6, 6; ಪ್ರಭಾಸಿಮ್ರಾನ್ ಸಿಡಿಲಬ್ಬರದ ಶತಕ.. ಟೀಮ್ ಇಂಡಿಯಾ ಜಯಭೇರಿ
ಗಾಯಕ್ವಾಡ್​ ಡೊಮೆಸ್ಟಿಕ್​​ಗೆ ಸೀಮಿತ
2021ರಲ್ಲಿ ಟೀಮ್​ ಇಂಡಿಯಾ ಋತುರಾಜ್​ ಗಾಯಕ್ವಾಡ್​ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದಾಗ ಫ್ಯೂಚರ್​ ಸ್ಟಾರ್​ ಎಂದೇ ಬಿಂಬಿತವಾಗಿದ್ರು. ನಾಯಕನಾಗಿಯೂ ಏಷ್ಯನ್​ ಗೇಮ್​ನಲ್ಲಿ ತಂಡವನ್ನ ಮುನ್ನಡೆಸಿದ್ರು. ಸಿಕ್ಕ ಅವಕಾಶದಲ್ಲಿ ಮಿಂಚುವಲ್ಲಿ ಫೇಲ್​ ಆದ್ರು. ಇನ್​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ ಗಾಯಕ್ವಾಡ್​ 2024ರ ಜಿಂಬಾಬ್ವೆ ಪ್ರವಾಸದ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ. ಆ ನಂತರದ ಋತುರಾಜ್​ನ ಆಯ್ಕೆಗೆ ಪರಿಗಣಿಸಿಯೇ ಇಲ್ಲ. ಡೊಮೆಸ್ಟಿಕ್​ನಲ್ಲಿ ಡಿಸೆಂಟ್​ ಪರ್ಫಾಮೆನ್ಸ್​ ನೀಡಿದ್ರೂ ಆಸ್ಟ್ರೇಲಿಯಾ ಪ್ರವಾಸದಿಂದಲೂ ಗಾಯಕ್ವಾಡ್​ನ ಹೊರಗಿಡಲಾಗಿದೆ. ಇದರರ್ಥ ಋತುರಾಜ್ ಆಟ ಏನಿದ್ರೂ ಡೊಮೆಸ್ಟಿಕ್​ಗೆ ಸೀಮಿತ ಅನ್ನೋದೆ ಆಗಿದೆ.
ಪರಾಗ್​ ಪಾಲಿಗೆ ಇಂಜುರಿ ವಿಲನ್
2024ರ ಐಪಿಎಲ್​​ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ರಿಯಾನ್​ ಪರಾಗ್​​ಗೆ ಕಳೆದ ವರ್ಷ ಟೀಮ್​ ಇಂಡಿಯಾ ಡೋರ್​​ ಓಪನ್​ ಆಗಿತ್ತು. ಶ್ರೀಲಂಕಾ ಪ್ರವಾಸದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿದ್ದ ಪರಾಗ್​, ಇಂಪ್ರೆಸ್ಸಿವ್​ ಪರ್ಫಾಮೆನ್ಸ್​​ ನಿಡುವಲ್ಲಿ ವಿಫಲರಾಗಿದ್ರು. ನಂತರದ ಬಾಂಗ್ಲಾದೇಶ ಪ್ರವಾಸದಲ್ಲಿ ಚಾನ್ಸ್​ ಸಿಕ್ಕಿತ್ತು. ಆದ್ರೆ, ದುರಾದೃಷ್ಟ ಇಂಜುರಿಗೆ ತುತ್ತಾಗಿ ಹೊರಬಿದ್ರು. ಆ ಬಳಿಕ ಟೀಮ್​ ಇಂಡಿಯಾದ ಡೋರ್​​ ರಿಯಾನ್​ ಪರಾಗ್​ಗೆ ಓಪನ್​​ ಆಗಿಲ್ಲ. ಐಪಿಎಲ್​ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲೂ ವೈಫಲ್ಯ ಕಂಡಿರೋ ಪರಾಗ್​ಗೆ ಮತ್ತೆ ಇಂಡಿಯನ್​ ಟೀಮ್​ ಡೋರ್​ ಓಪನ್​​ ಆಗೋದು ಅನುಮಾನವೇ.
ಬಿಷ್ನೋಯ್​ಗೆ​​ ಸ್ಥಾನ ಸಿಗೋದು ಕನಸೇ
ಐಪಿಎಲ್​ ಟೂರ್ನಿಯಲ್ಲಿ ಮಿಂಚಿ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ರವಿ ಬಿಷ್ನೋಯ್​​, ಟಿ20 ಫಾರ್ಮೆಟ್​ನ ಖಾಯಂ ಪ್ಲೇಯರ್​​ ಅನಿಸಿದ್ರು. ಬರೋಬ್ಬರಿ 42 ಟಿ20 ಪಂದ್ಯಗಳನ್ನ ಆಡಿದ್ದ ಬಿಷ್ನೋಯ್​​, ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಆಗಿದ್ರು. ಗೌತಮ್​ ಗಂಭೀರ್​​ ಹೆಡ್​​ಕೋಚ್​ ಆದ ಬಳಿಕ ಬಿಷ್ನೋಯ್​​ ಆಟಕ್ಕಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ. ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಫೇಲ್​ ಆದ ಬಳಿಕ ಕಳೆದೇ ಹೋಗಿದ್ದಾರೆ. ಕುಲ್​​​ದೀಪ್​ ಯಾದವ್​ ಕಮ್​​ಬ್ಯಾಕ್​ ರವಿ ಬಿಷ್ನೋಯ್​ ಪಾಲಿಗೆ ತಂಡದ ಡೋರ್​​ ಕ್ಲೋಸ್​ ಮಾಡಿದೆ.
ಮಲ್ಲಿಕ್​​ ಕರಿಯರ್​ಗೆ ಕೊನೆ ಮೊಳೆ
150+ ಕಿಲೋ ಮೀಟರ್​​ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ದ ಉಮ್ರಾನ್​ ಮಲ್ಲಿಕ್​ ಭಾರತೀಯ ಕ್ರಿಕೆಟ್​ ವಲಯದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ರು. ಶರವೇಗದ ದಾಳಿಗೆ ಎಲ್ಲರೂ ಇಂಪ್ರೆಸ್​ ಆಗಿದ್ರು. ಐಪಿಎಲ್​ನಲ್ಲಿ ಮಿಂಚಿ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ರು. ಬಂದಷ್ಟೇ ವೇಗವಾಗಿ ಕಳೆದುಹೋದ್ರು. ಕಳೆದ ಐಪಿಎಲ್​ ಟೂರ್ನಿಯನ್ನೂ ಆಡದ ಉಮ್ರಾನ್​ ಮಲ್ಲಿಕ್​ ಸದ್ಯ ಅಡ್ರೆಸ್​​ಗೆ ಇಲ್ಲದಂತಾಗಿದ್ದಾರೆ. ಸದ್ಯ ತಂಡದಲ್ಲಿರೋ ಪೈಪೋಟಿಯನ್ನ ನೋಡಿದ್ರೆ, ಉಮ್ರಾನ್​ ಮಲ್ಲಿಕ್​ ಪಾಲಿಗೆ ಟೀಮ್​ ಇಂಡಿಯಾದಲ್ಲಿ ಮುಂದೆ ಚಾನ್ಸ್​ ಸಿಗೋದು ಅನುಮಾನವೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ