/newsfirstlive-kannada/media/media_files/2025/10/05/harjas_singh_300-2025-10-05-21-46-45.jpg)
ಕ್ರಿಕೆಟ್​ ಸದ್ಯ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹೆಚ್ಚು ಮನ್ನಣೆ ಪಡೆಯುತ್ತಿರುವ ಕ್ರೀಡೆಯಾಗಿದೆ. ಕ್ರಿಕೆಟ್​ನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆಗಳು ರೆಕಾರ್ಡ್​ ಆಗುತ್ತಲೇ ಇವೆ. ಸದ್ಯ ಇಲ್ಲೊಬ್ಬ ಭಾರತದ ಮೂಲದ ಆಸ್ಟ್ರೇಲಿಯಾದ ಬ್ಯಾಟರ್​ ಏಕದಿನ ಪಂದ್ಯದಲ್ಲಿ ಬರೋಬ್ಬರಿ 35 ಸಿಕ್ಸರ್​​ಗಳೊಂದಿಗೆ ತ್ರಿಬಲ್ ಶತಕ ಸಿಡಿಸಿ ವಿಶ್ವ ಕ್ರಿಕೆಟ್​ಗೆ ಬಿಗ್ ಮೆಸೇಜ್ ರವಾನೆ ಮಾಡಿದ್ದಾರೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿಯಲ್ಲಿ ಸಿಡ್ನಿ ಕ್ರಿಕೆಟ್ ಕ್ಲಬ್ ಹಾಗೂ ವೆಸ್ಟರ್ನ್ ಸಬರ್ಬ್ಸ್ ತಂಡಗಳ ನಡುವೆ 50 ಓವರ್​ಗಳ ಪಂದ್ಯ ಪ್ಯಾಟರ್ನ್​ ಪಾರ್ಕ್​ನಲ್ಲಿ ನಡೆಯಿತು. ಈ ವೇಳೆ ವೆಸ್ಟರ್ನ್ ಸಬರ್ಬ್ಸ್ ಟೀಮ್ ಪರ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಭಾರತ ಮೂಲದ ಆಸ್ಟ್ರೇಲಿಯನ್ ಬ್ಯಾಟರ್ ಹರ್ಜಸ್ ಸಿಂಗ್ (Harjas Singh) ಬೃಹತ್​ ರನ್​ಗಳ ಹೊಳೆ ಹರಿಸಿ ದಾಖಲೆಯನ್ನೇ ಬರೆದಿದ್ದಾರೆ.
ಸಿಡ್ನಿ ಕ್ರಿಕೆಟ್ ಕ್ಲಬ್ ಬೌಲರ್​ಗಳಿಗೆ ಬೆವರಿಳಿಸಿದ ಹರ್ಜಸ್ ಸಿಂಗ್ 141 ಎಸೆತಗಳಲ್ಲಿ 12 ಬೌಂಡರಿ ಹಾಗೂ 35 ಬಿಗ್​..ಬಿಗ್​ ಸಿಕ್ಸರ್​ಗಳೊಂದಿಗೆ ಒಟ್ಟು 314 ರನ್​​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಅತ್ಯಧಿಕ ರನ್ ಗಳಿಸಿದ 3ನೇ ಬ್ಯಾಟರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಈ ಮೊದಲು ಫಿಲ್ ಜಾಕ್ವೆಸ್ 321 ರನ್ಸ್, ಮತ್ತು ವಿಕ್ಟರ್ ಟ್ರಂಪರ್ 335 ರನ್​ಗಳನ್ನು ಗಳಿಸಿದ್ದಾರೆ. ಇವರ ನಂತರ ಹರ್ಜಸ್ ಸಿಂಗ್ ತ್ರಿಬಲ್ ಸೆಂಚುರಿ ಬಾರಿಸಿದ 3ನೇ ಬ್ಯಾಟರ್ ಆಗಿದ್ದಾರೆ.
ಭಾರತದ ಮೂಲದ ಹರ್ಜಸ್ ಸಿಂಗ್ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲೇ ಜನಿಸಿದ್ದಾರೆ. ಇವರ ಪೋಷಕರು ಮೂಲತಹ ಭಾರತದ ಚಂಡೀಗಢದವರು ಆಗಿದ್ದು 2000ನೇ ಇಸ್ವಿಯಲ್ಲಿ ಸಿಡ್ನಿಗೆ ವಲಸೆ ಹೋಗಿದ್ದರು. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2024ರ U-19 ವಿಶ್ವಕಪ್ ಫೈನಲ್‌ನಲ್ಲಿ ಹರ್ಜಾಸ್ ಕೂಡ ಮನಮೋಹಕ ಬ್ಯಾಟಿಂಗ್ ಮಾಡಿದ್ದರು. ಈ ಫೈನಲ್​ ಪಂದ್ಯದಲ್ಲಿ 64 ಎಸೆತಗಳಲ್ಲಿ 55 ರನ್​ ಗಳಿಸಿದ್ದೇ ಆಸಿಸ್​ ತಂಡದಲ್ಲಿ ಹೆಚ್ಚು ಗಳಿಸಿದ ಬ್ಯಾಟರ್ ಆಗಿದ್ದರು.
Dead set carnage from Harjas Singh for Wests today. https://t.co/i6CjWS03K1pic.twitter.com/vyTnwzWRma
— Tom Decent (@tomdecent) October 4, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ