/newsfirstlive-kannada/media/media_files/2025/10/05/chahal-2025-10-05-16-01-45.jpg)
ಯುಜುವೇಂದ್ರ ಚಹಲ್​​-ಧನಶ್ರೀ ವರ್ಮಾ ಡಿವೋರ್ಸ್​ ಆಗಿ ತಿಂಗಳುಗಳೇ ಉರುಳಿವೆ. ಪ್ರೀತಿಸಿ ಮದುವೆಯಾದ ಜೋಡಿ ದೂರಾಗಿ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದೆ. ದಾಂಪತ್ಯ ಜೀವನ ಮುರಿದು ಬಿದ್ರೂ ಇಬ್ಬರ ನಡುವಿನ ಕಿತ್ತಾಟ ಮಾತ್ರ ನಿಂತಿಲ್ಲ. ಇದೀಗ ಧನಶ್ರೀ ವರ್ಮಾ ಹೊಸ ಬಾಂಬ್​ ಹಾಕಿದ್ದಾರೆ. ಯುಜುವೇಂದ್ರ ಚಹಲ್​ ಮದುವೆಯಾದ 2ನೇ ತಿಂಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಎಂಬ ಸ್ಪೋಟಕ ಆರೋಪ ಮಾಡಿದ್ದಾರೆ.
ದೂರಾದ ಮೇಲೂ ಆರೋಪ, ಪ್ರತ್ಯಾರೋಪ.!
ಯುಜುವೇಂದ್ರ ಚಹಲ್​ -ಧನಶ್ರೀ ವರ್ಮಾ.. ಭಾರತೀಯ ಕ್ರಿಕೆಟ್​​ ಹಾಗೂ ಬಾಲಿವುಡ್​ ನಡುವೆ ಬೆಸುಗೆ ಬೆಸೆದಿದ್ದ ಕ್ಯೂಟ್​​ ಕಪಲ್​. ಚಹಲ್ ಹಾಗೂ ಧನಶ್ರೀ ಬಹುಕಾಲ ಪ್ರೀತಿಸಿ ವಿವಾಹವಾದ ಬಳಿಕ ಆರಂಭದಲ್ಲಿ ಖುಷಿ ಖುಷಿಯಾಗೇ ಇದ್ರು. ಆದ್ರೆ, ಅದೇನಾಯ್ತೋ ಗೊತ್ತಿಲ್ಲ. 4 ವರ್ಷಕ್ಕೆ ಸಂಸಾರದಲ್ಲಿ ಬಿರುಗಾಳಿಯೆದ್ದು, ನಾನೊಂದು ತೀರ, ನೀನೊಂದು ತೀರ ಎಂಬಂತಾದ್ರು. 2020ರ ಅಂತ್ಯದಲ್ಲಿ ಶುರುವಾದ ಇಬ್ಬರ ದಾಂಪತ್ಯ ಪಯಣ ಅಂತ್ಯವಾಗಿ ತಿಂಗಳುಗಳೇ ಉರುಳಿವೆ. ಪರಸ್ಪರ ದೂರಾಗಿ ಪ್ರತ್ಯೇಕ ಜೀವನವೂ ಆರಂಭವಾಗಿದೆ. ಇಬ್ಬರ ನಡುವಿನ ಕಿತ್ತಾಟ ಮಾತ್ರ ನಿಂತಿಲ್ಲ. ಇದೀಗ ಚಹಲ್​ ವಿಚಾರದಲ್ಲಿ ಧನಶ್ರೀ ವರ್ಮಾ ಹೊಸ ಬಾಂಬ್​ ಹಾಕಿದ್ದಾರೆ.
ಮದುವೆಯಾದ 2ನೇ ತಿಂಗಳಲ್ಲೇ ರೆಡ್​​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ.!
ಕೊರೊನಾ ಟೈಮ್​ನಲ್ಲಿ ಡ್ಯಾನ್ಸ್​ ಕಲಿಯೋಕೆ ಅಂತಾ ಧನಶ್ರೀ ವರ್ಮಾ ಬಳಿ ಚಹಲ್​​ ಡಾನ್ಸ್​​ ಕ್ಲಾಸ್​ ಸೇರಿದ್ರು. ಆರಂಭದಲ್ಲಿ ಗುರುಶಿಷ್ಯರಾಗಿದ್ದ ಇಬ್ರೂ ಬಳಿಕ ಗೆಳೆಯರಾದ್ರು. ಆನಂತರ ಗೆಳೆತನ ಪ್ರೇಮಕ್ಕೆ ತಿರುಗಿ ಹಲವು ತಿಂಗಳು ಡೇಟಿಂಗ್​ ನಡೆಸಿ 2020ರ ಅಗಸ್ಟ್​ನಲ್ಲಿ ವಿವಾಹವಾದ್ರು. ವಿವಾಹವಾದ 2 ತಿಂಗಳಿಗೆ ಚಹಲ್​ ಧನಶ್ರೀಗೆ ಮೋಸ ಮಾಡಿದ್ರಂತೆ. ನನ್ನ ಕೈಯಲ್ಲೇ ರೆಡ್​​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಅಂತಾ ರೈಸ್​ & ಫಾಲ್​ ಶೋನಲ್ಲಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ಮುಂದುವರೆಯಲ್ಲ ಇದೊಂದು ತಪ್ಪು ನಿರ್ಧಾರ ಎಂದು ಎಂದು ನಿನಗೆ ಮೊದಲು ಯಾವಾಗ ಅನಿಸಿತು. ಮೊದಲ ವರ್ಷದಲ್ಲೇ. 2ನೇ ತಿಂಗಳಲ್ಲೇ ಆತ ಸಿಕ್ಕಿಬಿದ್ದಿದ್ದ.
‘ಶುಗರ್​​ ಡ್ಯಾಡಿ’ ಸಂದೇಶಕ್ಕೆ ತಿರುಗೇಟು​ ಕೊಟ್ಟಿದ್ದ ಧನಶ್ರೀ.!
ಧನಶ್ರೀ ಹಾಗೂ ಚಹಲ್ ನಡುವಿನ ಡಿವೋರ್ಸ್ ವೇಳೆ ಚರ್ಚೆಯ ಕೇಂದ್ರ ಬಿಂದುವಾಗಿದ್ದು, be your own sugar daddy ಎಂಬ ಬರಹವಿದ್ದ ಟೀ ಶರ್ಟ್.! ಈ ಟಿ ಶರ್ಟ್​ ಧರಿಸಿ ಚಹಲ್​ ಕೋರ್ಟ್​ ಹಾಲ್​ಗೆ ಅಂದು ಬಂದಿದ್ರು. ಇದ್ರ ಬಗ್ಗೆ ಕೆಲ ದಿನಗಳ ಹಿಂದೆ ಮಾತನಾಡಿದ್ದ ಚಹಲ್​​ ಇದು ಧನಶ್ರೀಗೆ ನೀಡಿದ್ದ ಸಂದೇಶ ಎಂದಿದ್ರು.
ನಾನು ಯಾವುದೇ ನಾಟಕ ಮಾಡಲು ಬಯಸಲಿಲ್ಲ. ನಾನು ಒಂದು ಸಂದೇಶವನ್ನ ನೀಡಲು ಬಯಸಿದ್ದೆ. ನಾನು ಅದನ್ನು ಟೀ ಶರ್ಟ್ ಮೂಲಕ ನೀಡಿದ್ದೇನೆ.
ಚಹಲ್​ ನೀಡಿದ್ದ ಈ ಶುಗರ್​ ಡ್ಯಾಡಿ ಸಂದೇಶಕ್ಕೂ ಧನಶ್ರೀ ವರ್ಮಾ ಕೆಲ ದಿನಗಳ ಹಿಂದೆ ತಿರುಗೇಟು ಕೊಟ್ಟಿದ್ರು. ಅಂತಾ ನಿರ್ಧಿಷ್ಟ ದಿನದಂದು ನೀವು ಹೇಗೆ ವರ್ತಿಸ್ತಿರಿ ಅನ್ನೋದು ಮುಖ್ಯ. ಸಂಸಾರದಲ್ಲಿ ಒಳ್ಳೆಯದಿನ, ಕೆಟ್ಟ ದಿನ ಎರಡೂ ಬರ್ತವೆ. ಪ್ರಬುದ್ಧರಾಗಿರಬೇಕು. ಹೇಳಲೇಬೇಕು ಅಂದಿದಿದ್ರೆ, ಮೆಸೇಜ್​ ಮಾಡಬಹುದಿತ್ತಲ್ವಾ. ವ್ಯಕ್ತಿತ್ವಕ್ಕೆ ಇದೇ ಉದಾಹರಣೆ ಎಂದಿದ್ರು. ಇದೇ ವೇಳೆ ಇದು ಸಂಭ್ರಮಿಸೋ ವಿಚಾರ ಅಲ್ಲ ಎಂದು ಖಡಕ್​ ಮಾತುಗಳಲ್ಲಿ ಹೇಳಿದ್ರು.
‘ಸಂಭ್ರಮಿಸೋ ವಿಷಯವಲ್ಲ’
‘ವಿಚ್ಛೇದನ ಎಂಬುದು ಯಾವತ್ತೂ ಸಂಭ್ರಮಿಸಬೇಕಾದ ವಿಷಯವಲ್ಲ. ಅದು ಒಂದು ದುಃಖದಾಯಕ ಮತ್ತು ಭಾವನಾತ್ಮಕ ಸಂಗತಿ. ಇದು ಕೇವಲ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ, ನಿಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಕುಟುಂಬವನ್ನೂ ಒಳಗೊಂಡಿರುತ್ತದೆ ಎಂಬುದನ್ನು ಜನ ಮರೆಯಬಾರದು’.
ಧನಶ್ರೀ ವರ್ಮಾ, ಚಹಲ್​ ಮಾಜಿ ಪತ್ನಿ
ಹೊಂದಾಣಿಕೆಯ ಕೊರತೆಯೇ ಕಾರಣ ಎಂದಿದ್ದ ಚಹಲ್​​.!
ಧನಶ್ರೀಗಿನ್ನ ಮುನ್ನವೇ ಡಿವೋರ್ಸ್​ ವಿಚಾರದಲ್ಲಿ ಯುಜುವೇಂದ್ರ ಚಹಲ್​ ತುಟಿಬಿಚ್ಚಿದ್ರು. ಡಿವೋರ್ಸ್​​ ವಿಚಾರದಲ್ಲಿ ಹಲವು ಸುದ್ದಿಗಳು ಹರಿದಾಡಿದ್ವು. ಕೆಲ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ ಚಹಲ್​​ ನಿಜವಾದ ಕಾರಣ ಏನು ಅನ್ನೋದನ್ನ ತಿಳಿಸಿದ್ರು.
ಇದನ್ನೂ ಓದಿ: ಪ್ರೀತಿಯ ತಂಗಿಯ ಮದುವೆಗೆ ಹೋಗಲೇ ಇಲ್ಲ ಯಂಗ್​ ಕ್ರಿಕೆಟರ್​ ಅಭಿಷೇಕ್ ಶರ್ಮಾ.. ಕಾರಣ?
ನಮ್ಮ ನಡುವೆ ಹೊಂದಾಣಿಕೆ ಇರಲಿಲ್ಲ. ಒಬ್ಬರು ಸಿಟ್ಟಾದರೆ, ಇನ್ನೊಬ್ಬರು ಸಮಾಧಾನಪಡಿಸಬೇಕು. ಇಬ್ಬರ ಸ್ವಭಾವವೂ ಹೊಂದಿಕೆ ಆಗುವುದಿಲ್ಲ. ನಾನು ಭಾರತಕ್ಕಾಗಿ ಆಡುತ್ತಿದ್ದೆ, ಅವಳು ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಳು. ಒಂದೆರಡು ವರ್ಷಗಳ ಕಾಲ ಇದು ಹೀಗೆ ನಡೆಯಿತು.
ಚಹಲ್​-ಧನಶ್ರೀ ಪರಸ್ಪರ ಇಷ್ಟಪಟ್ಟಿದ್ದು ಆಯ್ತು. ಎಲ್ಲರನ್ನ ಒಪ್ಪಿಸಿ ವಿವಾಹವಾಗಿದ್ದು ಆಯ್ತು. ಆ ದಾಂಪತ್ಯ ಜೀವನದ ಹಳಿ ಅರ್ಧಕ್ಕೆ ತಪ್ಪಿದ್ದೂ ಆಯ್ತು. ಇದೀಗ ಪ್ರತ್ಯೇಕ ಹಾದಿಯಲ್ಲಿ ಸಾಗ್ತಿದ್ರೂ, ಒಬ್ಬರ ಮೇಲೆ ಇನ್ನೊಬ್ಬರ ಆರೋಪ-ಪ್ರತ್ಯಾರೋಪ ನಿಂತಿಲ್ಲ. ಇದನ್ನ ನಿಲ್ಲಿಸಿದ್ರೆ ಮಾತ್ರ ಮುಂದಿನ ಜೀವನವನ್ನಾದ್ರೂ ಸರಿಯಾದ ಹಳಿಗೆ ಬರಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ