Advertisment

ಪಾಕ್​ ವಿರುದ್ಧ ಭಾರತಕ್ಕೆ ಜಯ.. ಹರ್ಮನ್​ಪ್ರೀತ್ ಪಡೆಗೆ ಗೆಲುವಿನ ನಗೆ, ಫಾತಿಮಾಗೆ ಕಹಿ..ಕಹಿ!

ವಿಶ್ವಕಪ್​ನ ಗ್ರೂಪ್​ ಸ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಭಾರತದ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಪ್ರತಿಕಾ ರಾವಲ್, ಸ್ಮೃತಿ ಮಂದಾನ ಉತ್ತಮ ಆರಂಭ ಪಡೆದರು.

author-image
Bhimappa
TEAM_INDIA
Advertisment

2025ರ ಐಸಿಸಿ ವುಮೆನ್ಸ್​ ವರ್ಲ್ಡ್​​​ಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಹರ್ಮನ್​ಪ್ರೀತ್ ನೇತೃತ್ವದ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. 88 ರನ್​ಗಳ ಅಂತರದಿಂದ ಭಾರತದ ಮಹಿಳಾ ತಂಡ ಗೆಲುವು ದಾಖಲಿಸಿದೆ.  

Advertisment

ಕೊಲಂಬೊದ ಆರ್​​.ಪ್ರೇಮಾದಾಸ್ ಮೈದಾನದಲ್ಲಿ ನಡೆದ ವಿಶ್ವಕಪ್​ನ ಗ್ರೂಪ್​ ಸ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಭಾರತದ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಪ್ರತಿಕಾ ರಾವಲ್, ಸ್ಮೃತಿ ಮಂದಾನ ಉತ್ತಮ ಆರಂಭ ಪಡೆದರು. ಆದರೆ ತಂಡದ ಮೊತ್ತ 48 ರನ್ ಆಗಿದ್ದಾಗ ಸ್ಮೃತಿ ಮಂದಾನ ಔಟ್ ಆದರು. 

ಬಳಿಕ ಕ್ರೀಸ್​​ಗೆ ಬಂದ ಹರ್ಲಿನಾ ಡಿಯೊಲ್ ಉತ್ತಮ ಬ್ಯಾಟಿಂಗ್ ಮಾಡಿ 4 ಫೋರ್, 1 ಸಿಕ್ಸರ್​ನಿಂದ 46 ರನ್​ ಗಳಿಸಿ ಆಡುವಾಗ ಔಟ್ ಆದರು. ಕೇವಲ 4 ರನ್​ಗಳಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ನಾಯಕಿ ಹರ್ಮನ್​​ಪ್ರೀತ್ ಕೌರ್ 19, ಜೆಮಿಯಾ ರಾಡ್ರಿಗಸ್ 32, ದೀಪ್ತಿ ಶರ್ಮಾ 25, ಸ್ನೇಹ ರಾಣ 20, ವಿಕೆಟ್​ ಕೀಪರ್ ರಿಚಾ ಘೋಷ್ 35 ರನ್​ಗಳು. ಈ ಎಲ್ಲರ ಬ್ಯಾಟಿಂಗ್​ ನೆರವಿನಿಂದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 248 ರನ್​ಗಳ ಟಾರ್ಗೆಟ್ ಅನ್ನು ನೀಡಿತ್ತು. 

ಇದನ್ನೂ ಓದಿ:6, 6, 6, 6, 6, 6, 6; ಪ್ರಭಾಸಿಮ್ರಾನ್ ಸಿಡಿಲಬ್ಬರದ ಶತಕ.. ಟೀಮ್ ಇಂಡಿಯಾ ಜಯಭೇರಿ

Advertisment

INDVSPAK

ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನದ ಮಹಿಳಾ ತಂಡ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಏಕೆಂದರೆ 20 ರನ್​ ಅಂತರದಲ್ಲಿ ಇಬ್ಬರು ಓಪನರ್ಸ್​ ಔಟ್​ ಆದರು. ಆದರೆ 3ನೇ ಬ್ಯಾಟರ್​ ಆಗಿ ಕ್ರೀಸ್​ಗೆ ಆಗಮಿಸಿದ ಸಿದ್ರಾ ಅಮಿನ್​ 40 ಓವರ್​ವರೆಗೆ ಇದ್ದು ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆದರೆ ಸಿದ್ರಾ ಅಮಿನ್ 81 ರನ್​ ಗಳಿಸಿ ಆಡುವಾಗ ಹರ್ಮನ್​​ಪ್ರೀತ್​​ಗೆ ಕ್ಯಾಚ್​ ಕೊಟ್ಟು ಹೊರ ನಡೆದರು. ಈ ವಿಕೆಟ್​ನಿಂದ ಪಾಕಿಸ್ತಾನದ ಸೋಲು ಖಚಿತವಾಯಿತು. 

ನಟಾಲಿಯಾ ಪರ್ವೈಜ್ 33 ರನ್​ ಬಿಟ್ಟರೇ ಉಳಿದ ಯಾವ ಆಟಗಾರ್ತಿಯು 14 ರನ್​ಗಳ ಗಡಿ ಕೂಡ ದಾಟಲಿಲ್ಲ. ಇದರಿಂದ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ 88 ರನ್​ಗಳ ಅಂತರದಿಂದ ವಿಜಯ ಸಾಧಿಸಿತು. ಭಾರತದ ಪರ ಕ್ರಾಂತಿ ಗೌಡ 3, ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು. ಸ್ನೇಹಾ ರಾಣ 2 ವಿಕೆಟ್​ ಕಬಳಿಸಿ ಗೆಲುವಿಗೆ ನೆರವಾದರು.     

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
World Cup Women's World Cup Women’s ODI World Cup 2025 India Win Ind vs Pak
Advertisment
Advertisment
Advertisment