/newsfirstlive-kannada/media/media_files/2025/10/05/prabhsimran-2025-10-05-22-20-18.jpg)
ಟೀಮ್ ಇಂಡಿಯಾ- ಎ ಹಾಗೂ ಆಸ್ಟ್ರೇಲಿಯಾ- ಎ ತಂಡದ ನಡುವಿನ 3ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಪ್ರಭಾಸಿಮ್ರಾನ್ ಸಿಂಗ್ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಆಸಿಸ್​ ವಿರುದ್ಧ ಟೀಮ್ ಇಂಡಿಯಾ ಕೇವಲ 2 ವಿಕೆಟ್​ಗಳಿಂದ ಗೆದ್ದು ಬೀಗಿದೆ.
ಉತ್ತರಪ್ರದೇಶದ ಕಾನ್ಪರದ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ- ಎ ತಂಡ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿತು. ಓಪನರ್​ಗಳು ವಿಫಲವಾದರೂ ಮಧ್ಯಮ ಕ್ರಮಾಂಕದಲ್ಲಿ ಮೂಡಿ ಬಂದ ಅದ್ಭುತ ಬ್ಯಾಟಿಂಗ್ ಆಸಿಸ್​​​ಗೆ​ ನೆರವಾಯಿತು. ಕೂಪರ್ 64, ಲೈಮ್ ಸ್ಕಾಟ್ 73, ಜಾಕ್​ ಎಡ್ವರ್ಡ್​ 89 ರನ್​ಗಳಿಂದ ಆಸ್ಟ್ರೇಲಿಯಾ ತಂಡ 49.1 ಓವರ್​ನಲ್ಲಿ 316 ರನ್​ಗಳ ಟಾರ್ಗೆಟ್​ ಅನ್ನು ಸೆಟ್ ಮಾಡಿತ್ತು.
ಇದನ್ನೂ ಓದಿ:ಸೆಂಚುರಿ ಸಿಡಿಸಿ ವಿಸಿಲ್ ಹಾಕಿರೋದು ಯಾಕೆ.. ಸತ್ಯ ಬಿಚ್ಚಿಟ್ಟ ಕನ್ನಡಿಗ KL ರಾಹುಲ್​.!
ಈ ಟಾರ್ಗೆಟ್​ ಬೆನ್ನು ಬಿದ್ದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಪ್ರಭಾಸಿಮ್ರಾನ್ ಸಿಂಗ್ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಪ್ರಭಾಸಿಮ್ರಾನ್, 8 ಫೋರ್, 7 ದೊಡ್ಡ ಸಿಕ್ಸರ್​ಗಳಿಂದ 102 ರನ್​ ಬಾರಿಸಿದರು. ಶ್ರೇಯಸ್ ಅಯ್ಯರ್ 62, ರಿಯಾನ್ ಪರಾಗ್ 62 ಬಾರಿಸಿದರು. ಇದರಿಂದ ಟೀಮ್ ಇಂಡಿಯಾ 46 ಓವರ್​ಗೆ 322 ರನ್​ ಗಳಿಸಿ ವಿಜಯ ಸಾಧಿಸಿತು. ಇದರಲ್ಲಿ ಪ್ರಭಾಸಿಮ್ರಾನ್ ಸಿಂಗ್ ರನ್​ಗಳು ತಂಡಕ್ಕೆ ಹೆಚ್ಚು ನೆರವಾದವು.
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಭಾಸಿಮ್ರಾನ್ ಸಿಂಗ್​ ಹೋರಾಟ ಮುಂದುವರೆದಿದ್ದು ಐಪಿಎಲ್​ನಿಂದಲೂ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಭಾರತ ತಂಡದಲ್ಲಿ ಆಡಲು ಒಂದೇ ಒಂದು ಅವಕಾಶಕ್ಕಾಗಿ ಪ್ರಭಾಸಿಮ್ರಾನ್ ಸಿಂಗ್ ಕಾಯುತ್ತಿದ್ದಾರೆ. ಆ ಅದೃಷ್ಟದ ಬಾಗಿಲು ಯಾವಾಗ ಓಪನ್ ಆಗುತ್ತೋ ಎನ್ನುವುದು ಪ್ರಭಾಸಿಮ್ರಾನ್ ಸಿಂಗ್​ಗೆ ಯಕ್ಷ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ