/newsfirstlive-kannada/media/media_files/2025/10/03/kl-rahul-2-2025-10-03-13-11-34.jpg)
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಟೀಮ್ ಹೀನಾಯ ಸೋಲು ಅನುಭವಿಸಿದೆ. ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಈ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ ಸಿಡಿಸಿ ವಿಸಿಲ್ ಹಾಕಿದ್ದರು. ಈ ವಿಸಿಲ್ ಯಾಕೆ ಎನ್ನುವುದನ್ನ ರಾಹುಲ್ ರಿವೀಲ್ ಮಾಡಿದ್ದಾರೆ.
ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್​​​ ರಾಹುಲ್​​ ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಕ್ಲಾಸಿಕ್​ ಸೆಂಚುರಿ ಸಿಡಿಸಿದ್ದರು. 12 ಬೌಂಡರಿಗಳನ್ನ ಬಾರಿಸಿದ ಕೆ.ಎಲ್​ ರಾಹುಲ್​ 190ನೇ ಎಸೆತದಲ್ಲಿ ಶತಕ ಪೂರೈಸಿದ್ದರು. ಶತಕದ ಬಳಿಕ ಬಾಯಲ್ಲಿ ಬೆರಳಿಟ್ಟು ವಿಸಿಲ್ ಹಾಕಿ ಸೆಲೆಬ್ರೇಟ್​ ಮಾಡಿದರು. ವಿಶೇಷ ಸೆಲೆಬ್ರೇಷನ್​ನ ಸೀಕ್ರೆಟ್​ನ​ ರಾಹುಲ್ ರಿವೀಲ್​ ಮಾಡಿದ್ದು, ಇದು ನನ್ನ ಮಗಳಿಗಾಗಿ ಮಾಡಿದ ಸೆಲಬ್ರೇಷನ್​. ಈ ಶತಕ ನನ್ನ ಮಗಳಿಗೆ ಅರ್ಪಣೆ ಎಂದು ಹೇಳಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್, 162 ರನ್​ಗೆ ಆಲೌಟ್ ಆಗಿತ್ತು. ಇದರ ಬಳಿಕ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಪರ ಕೆ.ಎಲ್ ರಾಹುಲ್, ಧೃವ್ ಜುರೇಲ್ ಹಾಗೂ ರವೀಂದ್ರ ಜಡೇಜಾರ ಶತಕದ ನೆರವಿನಿಂದ ಭಾರತ ಒಟ್ಟು 448 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಈ ಮೂಲಕ 286 ರನ್​ಗಳ ಹಿನ್ನಡೆಯೊಂದಿಗೆ ದ್ವೀತಿಯ ಇನ್ನಿಂಗ್ಸ್​ ಆರಂಭಿಸಿದ್ದ ವೆಸ್ಟ್ ಇಂಡೀಸ್ 146 ರನ್​​ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಟೀಮ್ ಇಂಡಿಯಾ 140 ರನ್​ಗಳಿಂದ ವಿಜಯ ಸಾಧಿಸಿತು. ಭಾರತದ ಪರ ಜಡೇಜಾ 4 ವಿಕೆಟ್ ಪಡೆದು ಸಂಭ್ರಮಿಸಿದರು. ಮೊಹ್ಮದ್ ಸಿರಾಜ್ ನಾನೇನು ಕಡಿಮೆ ಇಲ್ಲ ಎಂದು 3 ವಿಕೆಟ್ ಕಬಳಿಸಿದರು. ಕುಲ್​ದೀಪ್ ಯಾದವ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಗೆಲುವಿಗೆ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ