/newsfirstlive-kannada/media/post_attachments/wp-content/uploads/2025/07/BASAVARAJ-RAYAREDDY.jpg)
ಕೊಪ್ಪಳದ ತುಂಗಭದ್ರೆಯ ತೀರದಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ಯಾವುದೇ ಕಡಿವಾಣ ಇಲ್ಲದೇ ಬಿಂದಾಸ್​ ಆಗಿ ನಡೀತಿದೆ. ಆದ್ರೂ ಅಧಿಕಾರಿಗಳು ಅಕ್ರಮಕ್ಕೆ ಬ್ರೇಕ್​ ಹಾಕದೇ ಕೈ ಕಟ್ಟಿ ಕುಳಿತಿದ್ದಾರೆ.. ಈ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿಯವರೇ ಸಿಎಂಗೆ ಪತ್ರ ಬರೆದು ಬೆಳಕು ಚೆಲ್ಲಿದ್ದರು..
ಇದನ್ನೂ ಓದಿ:ತನ್ನ ತಂದೆಯ ಜೊತೆ ಪತ್ನಿಗೆ ಅಫೇರ್ ಆರೋಪ : 33 ವರ್ಷದ ಮಗ ನಿಗೂಢ ಸಾವು, ತಂದೆ ನಿವೃತ್ತ ಡಿಜಿಪಿ ಮೇಲೆ ಅನುಮಾನ
ಕೊಪ್ಪಳದಲ್ಲಿ ಮರಳು ದಂಧೆಕೋರರಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ. ಇದ್ರಿಂದ ರಾಜ್ಯದ 400 ಕೋಟಿಗೂ ಹೆಚ್ಚು ರಾಯಧನ ದೋಚುತ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದರು.. ಅಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಅಂತ ಆಗ್ರಹಿಸಿದ್ದರು.. ಎರಡು ದಿನಗಳ ಹಿಂದೆ ಪತ್ರ ಬರೆದಿದ್ದ ರಾಯರೆಡ್ಡಿ ವಿರುದ್ಧ ಸದ್ಯ ಅಧಿಕಾರಿ ವರ್ಗ ತಿರುಗಿಬಿದ್ದಿದೆ..
ರಾಯರೆಡ್ಡಿಗೆ ಅಧಿಕಾರಿಗಳಿಂದ 20 ಪ್ರಶ್ನೆಗಳು
ಕೊಪ್ಪಳದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ.. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಿಎಂಗೆ ಪತ್ರ ಬರೆದಿರುವುದು ಗೊತ್ತಾಗಿ, ಕೊಪ್ಪಳ ಅಧಿಕಾರಿಗಳ ವರ್ಗ ಮತ್ತೊಂದು ಪತ್ರವನ್ನು ಬರೆದಿದೆ. ಅದರಲ್ಲಿ ರಾಯರೆಡ್ಡಿಗೆ 20 ಪ್ರಶ್ನೆಗಳನ್ನು ಕೇಳಿದೆ. ಆ ಪತ್ರ ಜಾಲತಾಣದಲ್ಲಿ ಅಪ್​ಲೋಡ್ ಆಗಿದ್ದು ಪತ್ರದಲ್ಲಿ ‘ಇಂದ’ ಎಂಬಲ್ಲಿ ಕೊಪ್ಪಳ ಅಧಿಕಾರಿಗಳ ವೃಂದ ಅಂತ ಬರೆಯಲಾಗಿದೆ. ಆದರೆ, ಆ ಪತ್ರಕ್ಕೆ ಯಾವುದೇ ಅಧಿಕಾರಿಯ ಸಹಿ ಇಲ್ಲ. ಈ ಪತ್ರದಲ್ಲಿ ರಾಯರೆಡ್ಡಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ರಾಯರೆಡ್ಡಿಗೆ ಪತ್ರ.. 20 ಪ್ರಶ್ನೆ?
- ನಿಮ್ಮ ಅಕ್ರಮಗಳಿಗೆ ಬೆಂಬಲ ಕೊಡದಿರೋದು ಇದಕ್ಕೆ ಕಾರಣವೇ?
- ತಮ್ಮ ಬೆಂಬಲಿಗರ ಅಕ್ರಮಗಳಿಗೆ ಅಡ್ಡಿಯಾಗಿದ್ದಕ್ಕೆ ಈ ಪತ್ರನಾ?
- ತಮ್ಮ ಪ್ರತಿಷ್ಠೆಗಾಗಿ ಕೆಳಮಟ್ಟದ ಅಧಿಕಾರಿಗಳ ಮೇಲೆ ದರ್ಪವೇ?
- ಸಿಎಂ ಆರ್ಥಿಕ ಸಲಹೆಗಾರರಾಗಿ ರಾಜಧನಕ್ಕೆ ವಿನಾಯ್ತಿ ಸರಿನಾ?
- ಶಾಸಕರೇ ನಿಮ್ಮ ಆಪ್ತರ ಮರಳು ಪಾಯಿಂಟ್‌ಗಳಿವೆ, ಇಲ್ಲವೇ?
- ಶಿರೂರಿನ ಮರಳು ಪಾಯಿಂಟ್​ನಲ್ಲಿ ಉಲ್ಲಂಘನೆ ಆಗಿಲ್ಲವೇ?
- ದಂಧೆಯಿಂದ ರಾಜಧನ ನಷ್ಟ ಮಾಡಿ ಸರ್ಕಾರಕ್ಕೆ ನಷ್ಟ ಮಾಡ್ತಿಲ್ವಾ?
- ನಿಮ್ಮ ಒಣಪ್ರತಿಷ್ಠೆಗೆ ಮಹಿಳಾ ನೌಕರರ ಮೇಲೂ ಆರೋಪವೇಕೆ?
- ಮರಳು ವಾಹನ ಸೀಜ್ ಮಾಡಿದ್ದಾಗ ನೀವು ಕರೆ ಮಾಡ್ತಿರಲಿಲ್ವಾ?
- ಅಧಿಕಾರ ಬಳಸಿ ಧಮ್ಕಿ ಹಾಕಿ ವಾಹನಗಳನ್ನು ಬಿಡಿಸಿರಲಿಲ್ವೇ?
- ಪೊಲೀಸರು ದಂಧೆಗೆ ಸಾಥ್ ಕೊಡ್ತಿರೋದು ನಿಮಗೆ ಕಾಣ್ತಿಲ್ಲವೇ?
ಮರಳು ಮಾಫಿಯಾ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಮಾಡಿರುವ ಆರೋಪವನ್ನೇ ಅಸ್ತ್ರ ಮಾಡಿಕೊಂಡು... ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಮರಳು ದಂಧೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಂಬಲದ ನೆರಳಲ್ಲಿ ಎಗ್ಗಿಲ್ಲದೇ ನಡೀತಿರೋದು ಯಾರಿಗೂ ಗೊತ್ತಿರದ ವಿಷಯ ಏನಲ್ಲ. ಸದ್ಯ ಅಧಿಕಾರಿಗಳು ಮತ್ತು ಶಾಸಕ ರಾಯರೆಡ್ಡಿ ನಡೆ ಬಗ್ಗೆ ನೇರವಾಗಿ ಪ್ರಶ್ನೆಗಳನ್ನು ಎತ್ತಿದ್ದು ಅಧಿಕಾರಿಗಳ ಪ್ರಶ್ನೆಗಳಿಗೆ ರಾಯರೆಡ್ಡಿ ಉತ್ತರ ಕೊಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್​ನಲ್ಲಿ ಇವತ್ತು ಭಾರೀ ಬೆಳವಣಿಗೆ.. ಏನೆಲ್ಲ ನಡೆಯಿತು.?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ