ಬಿಜೆಪಿ ಯಾವೊಬ್ಬ ಎಂಪಿ 10 ರೂಪಾಯಿ ಅನುದಾನ ಕೊಡಿಸಿಲ್ಲ ಎಂದು ಬಿಜೆಪಿಯ ಸಂಸದರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 80% ನಮ್ಮ ಅನುದಾನ, ಕೇಂದ್ರ 20% ಅನುದಾನ ನೀಡಿದೆ. ಕೇಂದ್ರ 50% ನೀಡಬೇಕಿತ್ತು, ಆದ್ರೆ 20% ಅನುದಾನ ನೀಡಿದೆ. ಎಲ್ಲಾ ಭೂಮಿ ಸ್ವಾಧೀನ ಪ್ರಕ್ರಿಯೆ ಮಾಡಿರೋದು ನಾವು. ಕೆಲವರು ಬಿಜೆಪಿ ಅವರು ಮಾಡಿದ್ದಾರೆ ಅಂತ ಹೇಳುತ್ತಾರೆ ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಹಳದಿ ಮಾರ್ಗ ಉದ್ಘಾಟನೆಗಾಗಿ ಜಟಾಪಟಿ.. ತೇಜಸ್ವಿ ಸೂರ್ಯ vs ಡಿಕೆ ಶಿವಕುಮಾರ್
ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆ ವಿಚಾರವಾಗಿ ಕ್ರೆಡಿಟ್ ವಾರ್ ನಡೆದಿತ್ತು. ಅದರಲ್ಲೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕೆಲವು ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಡಿಕೆ ಶಿವಕುಮಾರ್ ಕೂಡ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ, ಇಂದು ಮತ್ತೆ ಡಿಕೆಶಿ ಕೌಂಟರ್ ನೀಡಿದ್ದಾರೆ.
ಈ ಹಿಂದೆ ಮಾತನ್ನಾಡಿದ್ದ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯಗೆ ಅನುಭವ ಇಲ್ಲ, ಆತುರದಲ್ಲಿ ಇಂತಹ ನಿರ್ಧಾರ ಮಾಡಬಾರದು ಎಂದಿದ್ರು.. ಈ ಮಾತಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೆಹಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.. ನಾನು ಈ ತಲೆಮಾರಿನ ಹುಡುಗ.. ಎಲ್ಲ ಕೆಲಸವು ವೇಗವಾಗಿ ಆಗಬೇಕು ಎನ್ನುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದ್ದರು.
ಇದನ್ನೂ ಓದಿ:ಸ್ಟೇಜ್ ಮೇಲೆ ಮೋದಿಗೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ; ಅದಕ್ಕೆ ಪ್ರಧಾನಿಗಳು ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ