/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ನವೆಂಬರ್ ಮೊದಲ ವಾರ ಕಳೆದೇ ಹೋಯ್ತು.. ಅರ್ಧವಾರ್ಷಿಕ ಪರೀಕ್ಷೆ ಕಳೆದು ರಜೆ ಮುಗಿಸಿ ಬರೋದ್ರೊಳಗೆ ನವೆಂಬರ್​ ಕ್ರಾಂತಿ ಆಗಿಯೇ ಬಿಡುತ್ತೆ ಅಂತ ಗೌಜು-ಗದ್ದಲ ಸೃಷ್ಟಿಸಿತ್ತು.. ಕಾಂಗ್ರೆಸ್​ ಪಾಳಯದಲ್ಲಿ ಕ್ರಾಂತಿ ಕವನ ಮೊಳಗುವ ಲಕ್ಷಣಗಳೇ ಕಾಣಿಸ್ತಿಲ್ಲ. ಈ ಮಧ್ಯೆ ಕಬ್ಬು ಬೆಳೆಯುವ ರೈತರ ಕ್ರಾಂತಿ ದಿಲ್ಲಿಯಲ್ಲೂ ಚರ್ಚೆ ಆಗಿದೆ. ರಾಜ್ಯ ಸರ್ಕಾರಕ್ಕೂ ಇಕ್ಕಟ್ಟು ಬಿಕ್ಕಾಟ್ಟಾಗಿದೆ.
ಸಂಕ್ರಾಂತಿಗೆ ಶಿಫ್ಟ್ ಆಯ್ತಾ ಕ್ರಾಂತಿ?
ಯಾವ ಕ್ರಾಂತಿನೂ ಇಲ್ಲ.. ಬರೀ ಭ್ರಾಂತಿ.. ಇದು ರಾಜ್ಯ ಕಾಂಗ್ರೆಸ್ ಕ್ರಾಂತಿಗೀತೆ ಸಂಬಂಧ ಕೇಳಿಬರ್ತಿದ್ದ ಅಣಿಮುತ್ತುಗಳು. ಈ ಸುಂದರ ಸ್ವಪ್ನ ಈಗ ಕನಸಾಗಿಯೇ ಉಳಿದಿದೆ.. ನವೆಂಬರ್ ಕ್ರಾಂತಿ ಆಗುತ್ತೆ ಅಂತ ಕ್ರಾಂತಿಯ ಜನಕರು ಗುನುಗಿದ್ದೇ ಗುನುಗಿದ್ದು.. ಆದ್ರೆ, ನವೆಂಬರ್ ಕ್ರಾಂತಿ ಗ್ಯಾರಂಟಿ ಆಗೋದೇ ಇಲ್ಲ ಅಂತ ಕಾಂಗ್ರೆಸ್​ ಪಕ್ಷದ ಉನ್ನತ ಮೂಲಗಳ ಮಾಹಿತಿ ನ್ಯೂಸ್​​ಫಸ್ಟ್​​ಗೆ ಲಭ್ಯ ಆಗಿದೆ.. ನವೆಂಬರ್​​ನಲ್ಲಿ ಯಾವ ಕ್ರಾಂತಿನೂ ನಡೆಯಲ್ಲ.. 2026ರ ಜನವರಿ 15 ಸಂಕ್ರಮಣಕ್ಕೆ ಕಾಂಗ್ರೆಸ್​​ನಲ್ಲೂ ಸಂಕ್ರಮಣ ಆಗಬಹುದು ಅಂತ ಜಾತಕ ನೋಡಲಾಗ್ತಿದೆ.. ಹಾಗಿದ್ರೆ, ಹಸ್ತ ಮನೆಯಲ್ಲಿ ನವೆಂಬರ್ ಕ್ರಾಂತಿ ಯಾಕೆ ನಡೆಯಲ್ಲ ಅನ್ನೋದಕ್ಕೆ ಒಂದಷ್ಟು ಕಾರಣಗಳು ಪುಷ್ಠಿ ನೀಡ್ತಿವೆ..
ಜನವರಿಗೆ ‘ಕ್ರಾಂತಿ’ ಸಂಕ್ರಮಣ!?
- ನವೆಂಬರ್​ ಬಂದಾಗಿದೆ, ಕಬ್ಬು ಬೆಳೆಗಾರರ ಪ್ರತಿಭಟನೆ ಜೋರಾಗಿದೆ.
- ಇತ್ತ ಜಾತಿಗಣತಿ ನಡೆದಿದ್ದು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸೂಚಿಸಬೇಕಿದೆ
- ಈ ಬೆಳವಣಿಗೆ 15 ದಿನ ಬೇಕು.. ವಿದೇಶದಿಂದ ರಾಹುಲ್ ಬರಬೇಕು
- ಅಷ್ಟರಲ್ಲಿ ಈ ತಿಂಗಳು ಮುಗಿದು ಡಿಸೆಂಬರ್ ಆರಂಭವಾಗಿರುತ್ತದೆ
- ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ
- ಚಳಿಗಾಲದ ಅಧಿವೇಶನ ಮುಗಿಯೋವರೆಗೆ ಕ್ರಾಂತಿ ಮುಂದೂಡಿಕೆ
- ಅಧಿವೇಶನ ಮುಗಿದ ಬಳಿಕ ಶೂನ್ಯ ಮಾಸ ಶುರು, ಕ್ರಾಂತಿ ಆಗಲ್ಲ
- ಹೀಗಾಗಿ ಸಂಕ್ರಾಂತಿಗೆ ಕ್ರಾಂತಿ ನಿರೀಕ್ಷೆ ಎಂಬ ಖಚಿತ ಮಾಹಿತಿ ಲಭ್ಯ
ದಳಪತಿ ವ್ಯಂಗ್ಯ!
ಕಾಂಗ್ರೆಸ್​​ನ ಕ್ರಾಂತಿ ವದಂತಿಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.. ಕ್ರಾಂತಿನೂ ಆಗಲ್ಲ ವಾಂತಿನು ಆಗಲ್ಲ. ಸಿಎಂ-ಡಿಸಿಎಂ ಏನು ಮಾತಾಡಿಕೊಂಡಿದ್ದಾರೋ ಗೊತ್ತಿಲ್ಲ.. ಇನ್ನು ಸಿಎಂ ಮಾಡು ಡಿಕೆಶಿ ದೇವರ ಬಳಿ ಕೇಳ್ತಿದ್ದಾರೆ.. ನೋಡೋಣ ಏನಾಗುತ್ತೆ ಎಂದಿದ್ದಾರೆ.. ಒಟ್ಟಾರೆ, ನವೆಂಬರ್ ಕ್ರಾಂತಿಯ ಕಾರ್ಮೋಡ ಬಹುತೇಕ ಕರಗಿದ ಲಕ್ಷಣಗಳು ಗೋಚರಿಸಿವೆ.. ಆದ್ರೆ, ಸಂಕ್ರಾಂತಿಗೆ ಕ್ರಾಂತಿ ಆಗಬಹುದು ಎನ್ನಲಾಗ್ತಿದೆ.. ಮತ್ತೊಂದು ಮೂಲದ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆಗೆ ಕೈ ಹಾಕಿದ್ರೆ ವ್ಯತಿರಿಕ್ತ ಪರಿಣಾಮ ಆಗಬಹುದು, ಹೀಗಾಗಿ ರಾಜ್ಯ ಬಜೆಟ್ ಆದ ನಂತರವಷ್ಟೇ ಕ್ರಾಂತಿ ಆಗಬಹುದು ಎನ್ನಲಾಗಿದೆ.. ಇತ್ತ ಅಧಿಕಾರ ಸೂತ್ರ ನಂಬಿ ಕೂತಿರುವ ಡಿಸಿಎಂ ಡಿಕೆಶಿ ಏನೇ ಪಟ್ಟುಗಳನ್ನು ಪ್ರಯೋಗಿಸಲಿ, ಏನೇ ದಾಳ ಉರುಳಿಸಿದ್ರೂ ನೋ ಯೂಸ್​ ಅನ್ನೋಂಗಾಗಿದೆ.. ಸದ್ಯ ಕ್ರಾಂತಿ ತಣ್ಣಗಾಗ್ತಿರೋದು ಮಾತ್ರ ಉಕ್ಕೇರುವ ಕಡಲು ಶಾಂತವಾದಂತೆ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us