ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್​ನ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಸ್ವಾಮೀಜಿಗಳ ಎಂಟ್ರಿ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಡಿ.ಕುಮಾರಸ್ವಾಮಿ, ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ಯಾವ ಮಠಾಧೀಶರ ನೆರವೂ ಕೇಳಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ಜಾತಿ ವಿಚಾರ ಹೇಳಿಕೊಂಡು, ಧಾರ್ಮಿಕ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರಲ್ಲ.
ಧರ್ಮ ಸಂಘರ್ಷ ಮಾಡಬಾರದು
ಇಲ್ಲಿ ಸ್ವಾಮೀಜಿಗಳು ಸೇರಿ, ಎಲ್ಲರಿಗೂ ನಾನು ಹೇಳ್ತೀನಿ. ಒಕ್ಕಲಿಗ, ಕುರುಬ ಮತ್ತು ಇತರ ಸಮಾಜದ ಸ್ವಾಮೀಜಿಗಳು ಚರ್ಚೆ ಮಾಡಿರೋದನ್ನ ನೋಡಿದ್ದೀನಿ. ಅದು ಅವರ ವೈಯಕ್ತಿಕ ಹೇಳಿಕೆ. ಆದರೆ ಧರ್ಮ ಸಂಘರ್ಷ ಮಾಡಬಾರದು ಎಂದು ಸ್ವಾಮೀಜಿಗಳಿಗೆ ಮನವಿ ಮಾಡ್ತೇನೆ. ರಾಜಕಾರಣಿಗಳು ರಾಜಕಾರಣ ಮಾಡಲಿ ಬಿಡಿ. ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಬೇಕು. ಡಿಕೆಶಿ ಅವರು ಹಲವು ಬಾರಿ ವಚನ ಹೇಳ್ತಾರೆ. ಇಲ್ಲಿ ಒಂದು ಜಾತಿ ಸಿಎಂ ಅಲ್ಲ. ಒಂದು ಜಾತಿ ಸಿಎಂ ಅದ್ರೆ ಆ ಜಾತಿ ಅಭಿವೃದ್ಧಿ ಆಗಲ್ಲ.
ಇದನ್ನೂ ಓದಿ: Breakfast Meeting ಸಿದ್ದು, ಡಿಕೆ ಶಿವಕುಮಾರ್ ಕೊಟ್ಟ ಐದು ಸಂದೇಶ ಏನು..?
ಈಗ ಬೃಹದಾಕಾರದ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ನಷ್ಟ ಅವ್ರಿಗೆ ಅಲ್ಲ, ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಅಲ್ಲ. ಕರ್ನಾಟಕ ಜನತೆಗೆ ಮುಜುಗರ ಎಂದು ವಾಗ್ದಾಳಿ ನಡೆಸಿದರು.
ಚರ್ಚೆಯ ಅಗತ್ಯವೇ ಇಲ್ಲ
ಕಾಂಗ್ರೆಸ್ ಪಕ್ಷದ ಸರ್ಕಾರ ಅಲ್ಲ ಇದು. ನಾಡಿನ ಜನತೆ ಕಾಂಗ್ರೆಸ್​ಗೆ 140 ಸ್ಥಾನ ಕೊಟ್ಟು ಅಧಿಕಾರ ಕೊಟ್ಟರು. ಆದರೆ ಇವರು ಕಳೆದ ಎರಡುವರೆ ವರ್ಷದಿಂದ ಮಾಡಿದ್ದು ಏನು? ಬರಿ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇದೆಯಾ? ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಅಂತ ಇದೆಯಾ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us