Advertisment

Breakfast Meeting ಸಿದ್ದು, ಡಿಕೆ ಶಿವಕುಮಾರ್ ಕೊಟ್ಟ ಐದು ಸಂದೇಶ ಏನು..?

ಅಧಿಕಾರ ಹಂಚಿಕೆ ಗೊಂದಲ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದರು. ಬಳಿಕ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

author-image
Ganesh Kerekuli
DK Shivakumar Siddaramaiah (1)
Advertisment

ಅಧಿಕಾರ ಹಂಚಿಕೆ ಗೊಂದಲ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದರು. ಕಾವೇರಿ ನಿವಾಸದಲ್ಲಿ ಇಬ್ಬರು ನಾಯಕರು ಬೆಳಗಿನ ಉಪಹಾರ ಸೇವಿಸುತ್ತ ಮಾತುಕತೆ ನಡೆಸಿದರು. ಅದಾದ ಬಳಿಕ ಇಬ್ಬರು ನಾಯಕರು ಸುದ್ದಿಗೋಷ್ಟಿ ನಡೆಸಿ ಜಂಟಿ ಹೇಳಿಕೆ ನೀಡಿದರು.

Advertisment

ಸುದ್ದಿಗೋಷ್ಟಿಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವ ಸಂದೇಶವನ್ನು ಇಬ್ಬರು ನಾಯಕರು ಜಂಟಿಯಾಗಿ ಹೇಳಿದ್ದಾರೆ. ಇನ್ನು ಇವತ್ತಿನ ಬ್ರೇಕ್​ಫಾಸ್ಟ್ ಮೀಟಿಂಗ್ ಮೂಲಕ ಉಭಯ ನಾಯಕರಯ ಏನು ಸಂದೇಶ ನೀಡಿದರು ಅಂತಾ ನೋಡೋದಾದ್ರೆ..  

ಇದನ್ನೂ ಓದಿ:ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ -ಸಿದ್ದು, ಡಿಕೆಶಿ ಜಂಟಿ ಹೇಳಿಕೆ

1. ಹೈಕಮಾಂಡ್ ಹೇಳಿದ್ದನ್ನು ಕೇಳುವುದು
2. ಅಧಿವೇಶನದಲ್ಲಿ ಸರ್ಕಾರಕ್ಕೆ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ
3. ದೆಹಲಿಯಲ್ಲಿ ಹೈಕಮಾಂಡ್ ಸಭೆ ಕರೆದಾಗ ಹೋಗುವುದು
4. ಗುಂಪುಗಾರಿಕೆಗೆ ಅವಕಾಶ ಕೊಡದಂತೆ ಎರಡೂ ಕಡೆಯಿಂದ ಕ್ರಮ
5. ನಮ್ಮ ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸುವುದು

Advertisment

ಸಿಎಂ ಏನಂದ್ರು..? 

ಹೈಕಮಾಂಡ್ ಏನು ಹೇಳಲಿದೆಯೋ ಅದಕ್ಕೆ ನಾವು ಬದ್ಧ. ನಾವಿಬ್ಬರೂ ಇದಕ್ಕೆ ಬದ್ಧರಾಗಿದ್ದೇವೆ. ಅಸೆಂಬ್ಲಿ ಇರುವ ಕಾರಣ ಇಬ್ಬರಿಗೂ ಗೊಂದಲ ತಿಳಿಗೊಳಿಸಿ ಎಂದು ಹೈಕಮಾಂಡ್ ಹೇಳಿತ್ತು. ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ. ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಕೆಲವು ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿದೆ. ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ. ನಾನು ಮತ್ತು ಡಿಕೆಶಿ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದರು. 

ಡಿಕೆ ಶಿವಕುಮಾರ್ ಏನು ಹೇಳಿದರು..?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. ಜನರು ನಮ್ಮ ಮೇಲೆ ವಿಶ್ವಾಸ ಕೊಟ್ಟು ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ವಿರೋಧ ಪಕ್ಷದ ವಿರುದ್ಧ ಪ್ರತಿತಂತ್ರವನ್ನ ರೂಪಿಸಿದ್ದೇವೆ. ರಾಜಕೀಯವಾಗಿ ಇಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಇಬ್ಬರೂ ಒಟ್ಟಿಗೆ ಹೋಗುತ್ತೇವೆ. ನಾನು ಯಾವ ಗುಂಪಿಗೂ ಅವಕಾಶ ನೀಡಿಲ್ಲ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar karnataka politics Power sharing
Advertisment
Advertisment
Advertisment