/newsfirstlive-kannada/media/media_files/2025/11/29/siddaramiah-dk-shivakumar-1-2025-11-29-11-39-50.jpg)
ಬೆಂಗಳೂರು: ಅಧಿಕಾರ ಹಂಚಿಕೆ ಗೊಂದಲ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದರು. ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಇಬ್ಬರು ನಾಯಕರು ಬೆಳಗಿನ ಉಪಹಾರ ಸೇವಿಸುತ್ತ ಮಾತುಕತೆ ನಡೆಸಿದರು. ಅದಾದ ಬಳಿಕ ಇಬ್ಬರು ನಾಯಕರು ಸುದ್ದಿಗೋಷ್ಟಿ ನಡೆಸಿ ಜಂಟಿ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಏನು ಹೇಳಿದರು..?
ಕೆಲವು ದಿನಗಳಿಂದ ಅನಗತ್ಯವಾಗಿ ಗೊಂದಲ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಗೊಂದಲ ನಿರ್ಮಾಣವಾಗಿದೆ. ಆ ಸಂಬಂಧ ನಾವಿಬ್ಬರೇ ಕುಳಿತು ಮಾತಾಡಿದೆವು. ಮುಂದಿನ ಚುನಾವಣೆ ನಮಗೆ ಬಹಳ ಮುಖ್ಯ. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಚರ್ಚಿಸಿದೆವು. ಕಾಂಗ್ರೆಸ್​ ಅನ್ನ ಮತ್ತೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಿದೆವು. ಕಳೆದ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದೆವೋ ಅದೇ ರೀತಿ ಮುಂದೆಯೂ ಒಟ್ಟಿಗೆ ಇರುತ್ತೇವೆ. ನನಗೆ, ಡಿಕೆಶಿಗೆ ಯಾವುದೇ ವ್ಯತ್ಯಾಸ ಇಲ್ಲ. ಇಂದಿಗೂ ಎಂದೆಂದಿಗೂ ವ್ಯತ್ಯಾಸ ಇಲ್ಲ, ಒಟ್ಟಿಗೆ ಹೋಗುತ್ತೇವೆ.
ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಸುಳ್ಳು ಆರೋಪಗಳನ್ನು ಮಾಡುವುದು ಬಿಜೆಪಿ, ಜೆಡಿಎಸ್ ಚಾಳಿ. ಬಹಳ ಸಮರ್ಥವಾಗಿ ನಾವು ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನ ನಾವು ಮಾಡಿದ್ದೇವೆ. ನಾವು 142 ಜನ ಶಾಸಕರು ಇದ್ದೇವೆ. ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಸಾಧ್ಯವೇ ಇಲ್ಲ. ಬಿಜೆಪಿ, ಜೆಡಿಎಸ್ ಇಬ್ಬರೂ ಸೇರಿದರೂ 82 ಆಗಬಹುದು. ಅದಕ್ಕಿಂತಲೂ ಹೆಚ್ಚಿನ ಶಾಸಕರು ಅವರ ಬಳಿ ಇಲ್ಲ. ಅವರು ಅಸೆಂಬ್ಲಿಯಲ್ಲಿ ಏನೇ ಆರೋಪ ಮಾಡಿದರೂ ಸಮರ್ಥವಾಗಿ ಎದುರಿಸುತ್ತೇವೆ.
ಇದನ್ನೂ ಓದಿ:ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ -ಸಿದ್ದು, ಡಿಕೆಶಿ ಜಂಟಿ ಹೇಳಿಕೆ LIVE UPDATES
/filters:format(webp)/newsfirstlive-kannada/media/media_files/2025/11/29/dk-shivakumar-siddaramaiah-1-2025-11-29-10-15-12.jpg)
ಹೈಕಮಾಂಡ್ ಏನು ಹೇಳಲಿದೆಯೋ ಅದಕ್ಕೆ ನಾವು ಬದ್ಧ. ನಾವಿಬ್ಬರೂ ಇದಕ್ಕೆ ಬದ್ಧರಾಗಿದ್ದೇವೆ. ಅಸೆಂಬ್ಲಿ ಇರುವ ಕಾರಣ ಇಬ್ಬರಿಗೂ ಗೊಂದಲ ತಿಳಿಗೊಳಿಸಿ ಎಂದು ಹೈಕಮಾಂಡ್ ಹೇಳಿತ್ತು. ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ. ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಕೆಲವು ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿದೆ. ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ. ನಾನು ಮತ್ತು ಡಿಕೆಶಿ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದರು.
ಡಿಕೆ ಶಿವಕುಮಾರ್ ಏನು ಹೇಳಿದರು..?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. ಜನರು ನಮ್ಮ ಮೇಲೆ ವಿಶ್ವಾಸ ಕೊಟ್ಟು ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ವಿರೋಧ ಪಕ್ಷದ ವಿರುದ್ಧ ಪ್ರತಿತಂತ್ರವನ್ನ ರೂಪಿಸಿದ್ದೇವೆ. ರಾಜಕೀಯವಾಗಿ ಇಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಇಬ್ಬರೂ ಒಟ್ಟಿಗೆ ಹೋಗುತ್ತೇವೆ. ನಾನು ಯಾವ ಗುಂಪಿಗೂ ಅವಕಾಶ ನೀಡಿಲ್ಲ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ಶ್ರೇಯಾಂಕನೂ ಅಲ್ಲ, ಮಂದಾನನೂ ಅಲ್ಲ.. ಆರ್​ಸಿಬಿಯಲ್ಲೀಗ ಹೊಸ ಕ್ರಷ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us