Big breaking: ಅತ್ಯಾ*ಚಾರ ಕೇಸ್​​ನಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ -ಮಹತ್ವದ ತೀರ್ಪು

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಆಗಿದೆ. ಅತ್ಯಾ*ಚಾರ ಆರೋಪ ಪ್ರಕರಣದ ವಿಚಾರಣೆ ನಡೆಸ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ ಇವತ್ತು ಮಹತ್ವದ ತೀರ್ಪು ಪ್ರಕಟಿಸಿದೆ. ಕೋರ್ಟ್​ ತನ್ನ ತೀರ್ಪಿನಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಸ್ಪಷ್ಟಪಡಿಸಿದೆ.

author-image
Ganesh
prajwal revanna case

ಪ್ರಜ್ವಲ್ ರೇವಣ್ಣ

Advertisment

    ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಆಗಿದೆ. ಅತ್ಯಾ*ಚಾರ ಆರೋಪ ಪ್ರಕರಣದ ವಿಚಾರಣೆ ನಡೆಸ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ ಇವತ್ತು ಮಹತ್ವದ ತೀರ್ಪು ಪ್ರಕಟಿಸಿದೆ. ಕೋರ್ಟ್​ ತನ್ನ ತೀರ್ಪಿನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದಿದೆ. ಪ್ರಜ್ವಲ್ ರೇವಣ್ಣ ಅಪರಾಧಿ ಎಂದಿರುವ ಕೋರ್ಟ್​, ನಾಳೆ ಶಿಕ್ಷೆಯ ಪ್ರಮಾಣ ನಿರ್ಧಾರವಾಗಲಿದೆ.  

    ಬಿಗ್​ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ ಮಾಜಿ ಸಂಸದನಿಗೆ ಶಾಕ್ ಆಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್​ಗಳು ದಾಖಲಾಗಿದ್ದವು. ಈ 4 ಕೇಸ್​ಗಳ ಪೈಕಿ ಒಂದು ಪ್ರಕರಣದ ತೀರ್ಪು ಮಾತ್ರ ಪ್ರಕಟವಾಗಿದೆ. ಮನೆ ಕೆಲಸದಾಕೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್​ ತೀರ್ಪು ಪ್ರಕಟಿಸುವ ಮುನ್ನ, ಕೋರ್ಟ್​ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿತ್ತು.

    ಇದನ್ನೂ ಓದಿ:ಅಮೆರಿಕಾದ ಹೊಸ ಆಮದು ಸುಂಕ ಆಗಸ್ಟ್ 7 ರಿಂದ ಜಾರಿ ಎಂದ ಡೋನಾಲ್ಡ್ ಟ್ರಂಪ್‌

    ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಗೂಗಲ್ ಮ್ಯಾಪ್​​ ಅನ್ನು ಸಾಕ್ಷಿಯಾಗಿ ಪರಿಗಣಿಸಿಸಬಹುದೇ? ಸ್ಯಾಮ್​ಸಂಗ್ ಜೆ 4 ಮೊಬೈಲ್ ಸೀಜ್ ಮಾಡಿರುವ ಬಗ್ಗೆಯೂ ವಿವರಣೆ ಕೇಳಿತ್ತು. ಕೆಲ ಕಾಲ ವಿಚಾರಣೆಯನ್ನು ಮುಂದೂಡಿದ್ದ ಕೋರ್ಟ್​, ಇದೀಗ ತೀರ್ಪನ್ನು ಪ್ರಕಟಿಸಿದೆ. 

    ಪ್ರಜ್ವಲ್​​ಗೆ ಹಿನ್ನಡೆ..

    ಅಪರಾಧಿ ಅಂತಾ ಸಾಬೀತಾದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ  ದೊಡ್ಡ ಹಿನ್ನಡೆ ಆಗಿದೆ. ತೀರ್ಪು ನೀಡಿರುವ ಕೋರ್ಟ್​, ಶಿಕ್ಷೆಯ ಪ್ರಮಾಣವನ್ನ ನಾಳೆ ತಿಳಿಸಲಿದೆ. ಅಂದ್ರೆ ಶಿಕ್ಷೆಯ ಪ್ರಮಾಣದ ಬಗ್ಗೆಯೂ ಕೋರ್ಟ್​​​ ವಾದ- ಪ್ರತಿವಾದವನ್ನ ಆಲಿಸಲಿದೆ. ಗರಿಷ್ಠ ಶಿಕ್ಷೆ ವಿಧಿಸಬೇಕು ಅಂತ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡಿಸುವ ಸಾಧ್ಯತೆ ಇದೆ. ಕಡಿಮೆ ಶಿಕ್ಷೆ ನೀಡಿ ಅಂತ ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡುವ ಸಾಧ್ಯತೆಯೂ ಇದೆ. 

    ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

    Prajwal Revanna
    Advertisment