/newsfirstlive-kannada/media/media_files/2025/08/01/usa-prez-donald-trump-2025-08-01-12-58-18.jpg)
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿವಿಧ ದೇಶಗಳ ಮೇಲಿನ ಅಮದು ಸುಂಕದ ಜಾರಿಯನ್ನು ಒಂದು ವಾರ ಮುಂದೂಡಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ವಿಧಿಸಿರುವ ಅಮದು ಸುಂಕವು ಆಗಸ್ಟ್ 7 ರಿಂದ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ. ವಿವಿಧ ದೇಶಗಳ ಮೇಲೆ ಶೇ.15 ರಿಂದ ಶೇ.41 ರವರೆಗೂ ಆಮದು ಸುಂಕ ವಿಧಿಸಿದ್ದಾರೆ. ಹೊಸ ಸುಂಕವು ಆಗಸ್ಟ್ 7 ರಿಂದ ಜಾರಿಯಾಗುವಂತೆ ಕಾರ್ಯಕಾರಿ ಆದೇಶವನ್ನು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊರಡಿಸಿದ್ದಾರೆ. ಅಮೆರಿಕಾದ ಅಧ್ಯಕ್ಷರಿಗೆ ಇರುವ ಎಮರ್ಜೆನ್ಸಿ ಅಧಿಕಾರವನ್ನು ಬಳಸಿ, ವ್ಯಾಪಾರದ ಕೊರತೆ ಇರುವ ರಾಷ್ಟ್ರಗಳ ಮೇಲೆ ಹೆಚ್ಚಿನ ಅಮದು ಸುಂಕ ವಿಧಿಸಿದ್ದಾರೆ.
ಕೆಲ ದೇಶಗಳ ಮೇಲೆ ಡೋನಾಲ್ಡ್ ಟ್ರಂಪ್ ಪ್ರತೀಕಾರದ ತೆರಿಗೆಯನ್ನ ವಿಧಿಸಿದ್ದಾರೆ. ಬ್ರೆಜಿಲ್ ನಂಥ ದೇಶದ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದ್ದಾರೆ. ಬ್ರೆಜಿಲ್ ಮೇಲೆ ಹೆಚ್ಚುವರಿಯಾಗಿ ಶೇ.10 ರಷ್ಟು ಸುಂಕ ವಿಧಿಸಿದ್ದಾರೆ.
ಇದನ್ನೂ ಓದಿ: ‘I stand with ದರ್ಶನ್ ಸರ್’ ಎಂದ ಧ್ರುವಾ ಸರ್ಜಾ.. ಪ್ರಥಮ್ ವಿರುದ್ಧ ಬೇಸರ
ಇನ್ನೂ ಭಾರತದ ಮೇಲೆ ಶೇ.25 ರಷ್ಟು ಅಮದು ಸುಂಕ ವಿಧಿಸಿರುವ ಡೋನಾಲ್ಡ್ ಟ್ರಂಪ್, ಭಾರತದ ನೆರೆಯ ಪಾಕಿಸ್ತಾನದ ಮೇಲೆ ಪ್ರೀತಿ ತೋರಿದ್ದಾರೆ. ಪಾಕಿಸ್ತಾನದ ಮೇಲೆ ಶೇ.19 ರಷ್ಟು ಅಮದು ಸುಂಕ ವಿಧಿಸಿದ್ದಾರೆ. ಪಾಕಿಸ್ತಾನಕ್ಕೆ ತೈಲ ಪೂರೈಕೆಗೂ ಮುಂದಾಗಿರುವ ಅಮೆರಿಕಾ, ಅಮದು ಸುಂಕ ವಿಧಿಸುವ ವಿಚಾರದಲ್ಲೂ ಪಾಕಿಸ್ತಾನದ ಮೇಲೆ ಮಮತೆ ತೋರಿರುವುದು ಸ್ಪಷ್ಟ. ಭಾರತವು ತನ್ನ ಸ್ನೇಹಿ ರಾಷ್ಟ್ರ ಎಂದು ಹೇಳುತ್ತಲೇ ಹೆಚ್ಚಿನ ಅಮದು ಸುಂಕವನ್ನು ಭಾರತದ ಮೇಲೆ ವಿಧಿಸಿದ್ದಾರೆ.
ಡೋನಾಲ್ಡ್ ಟ್ರಂಪ್ ಯಾವ್ಯಾವ ದೇಶದ ಮೇಲೆ ಎಷ್ಟೆಷ್ಟು ಸುಂಕ ವಿಧಿಸಿದ್ದಾರೆ ಅಂದರೇ..
- ಅಫ್ಘನಿಸ್ತಾನ- ಶೇ.15
- ಅಲ್ಜಿರಿಯಾ- ಶೇ.30
- ಅಂಗೋಲಾ-ಶೇ.15
- ಬಾಂಗ್ಲಾದೇಶ- ಶೇ.20
- ಬೋಲಿವಿಯಾ- ಶೇ.15
- ಭಾರತ- ಶೇ.25
- ಬ್ರೆಜಿಲ್- ಶೇ.10
- ಬ್ರೂನಿ- ಶೇ.25
- ಕಾಂಬೋಡಿಯಾ- ಶೇ.19
- ಕ್ಯಾಮರೂನ್-ಶೇ.15
- ಕೋಸ್ಟರಿಕಾ- ಶೇ15
- ಪಾಕಿಸ್ತಾನ- ಶೇ.19
- ಶ್ರೀಲಂಕಾ- ಶೇ.20
- ನ್ಯೂಜಿಲೆಂಡ್-ಶೇ.15
- ಲಾವೋಸ್-ಶೇ.40
- ಬರ್ಮಾ-ಶೇ.40
- ಸಿರಿಯಾ- ಶೇ.41
ಈ ಪ್ರತೀಕಾರದ ತೆರಿಗೆಯು ಆಗಸ್ಟ್ 7 ರಿಂದ ಜಾರಿಯಾಗುತ್ತೆ ಎಂದು ಶ್ವೇತ ಭವನದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೇ, ಇದು ಅಮದು ಸುಂಕ ಜಾರಿಗೆ ನೀಡುತ್ತಿರುವ ವಿಸ್ತರಣೆಯಲ್ಲ. ಅಮೆರಿಕಾದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಗೆ ಹೊಸ ಸುಂಕ ಜಾರಿಗೆ ಹೆಚ್ಚಿನ ಸಮಯ ಅವಕಾಶ ಬೇಕಾಗಿತ್ತು. ಹೀಗಾಗಿ ಆಗಸ್ಟ್ 7 ರಿಂದ ಜಾರಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಅಮೆರಿಕಾಕಕ್ಕೆ ಬರುವ ಎಲ್ಲ ಗೂಡ್ಸ್ ಗಳ ಮೇಲೆ ಶೇ.10 ರಷ್ಟು ಅಮದು ಸುಂಕ ಎಲ್ಲ ದೇಶಗಳಿಗೂ ಏಕರೀತಿಯಾಗಿ ಅನ್ವಯವಾಗುತ್ತೆ. ಇದು ಏಪ್ರಿಲ್ 2 ರಿಂದಲೇ ಜಾರಿಯಾಗಿದೆ. ಆದರೇ, ಶೇ.10 ರಷ್ಟು ಅಮದು ಸುಂಕವು ಅಮೆರಿಕಾದ ಜೊತೆ ಹೆಚ್ಚಿನ ವ್ಯಾಪಾರ ಮಾಡುವ ರಾಷ್ಟ್ರಗಳಿಗೆ ಅನ್ವಯವಾಗುತ್ತೆ. ಅಂದರೇ, ಅಮೆರಿಕಾವು ಆ ದೇಶಗಳಿಗೆ ಹೆಚ್ಚಿನ ರಫ್ತು ಮಾಡುತ್ತಿದ್ದರೇ, ಅಂಥ ದೇಶಗಳಿಗೆ ಶೇ.10 ರಷ್ಟು ಅಮದು ಸುಂಕ ವಿಧಿಸಲಾಗಿದೆ.
ಆದರೇ, ಅಮೆರಿಕಾದ ಉತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಖರೀದಿಸುವ ಹಾಗೂ ಅಮೆರಿಕಾದ ಜೊತೆ ವ್ಯಾಪಾರ ಕೊರತೆಯನ್ನು ಹೊಂದಿರುವ ರಾಷ್ಟ್ರಗಳ ಮೇಲೆ ಹೊಸದಾಗಿ ಶೇ.15 ರಷ್ಟು ಸುಂಕ ವಿಧಿಸಲಾಗಿದೆ. ಉದಾಹರಣೆಗೆ ಭಾರತ ದೇಶ. ಹೀಗೆ ಸುಮಾರು 40 ದೇಶಗಳ ಮೇಲೆ ಹೊಸ ಶೇ.15 ರಷ್ಟು ಅಮದು ಸುಂಕ ವಿಧಿಸಲಾಗಿದೆ.
ಇನ್ನೂ ಶ್ವೇತ ಭವನವು 26 ದೇಶಗಳ ಗೂಡ್ಸ್ ಮೇಲೆ ಶೇ.15 ಅಮದು ಸುಂಕ ವಿಧಿಸಲು ಗುರುತಿಸಿದೆ. ಈ 26 ದೇಶಗಳು ಅಮೆರಿಕಾದ ಜೊತೆ ಹೆಚ್ಚಿನ ವ್ಯಾಪಾರ ಕೊರತೆಯನ್ನು ಹೊಂದಿವೆ. ಅಂಥ ದೇಶಗಳ ಮೇಲೆ ಶೇ.15 ರಷ್ಟು ಅಮದು ಸುಂಕವನ್ನು ಹೊಸದಾಗಿ ವಿಧಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ