/newsfirstlive-kannada/media/media_files/2025/08/01/r-ashwin-2025-08-01-13-11-51.jpg)
ಆರ್ ಅಶ್ವಿನ್
ಅಶ್ವಿನ್ ರಿಟೈರ್ಮೆಂಟ್ ಬಳಿಕ ಪ್ರತಿಯೊಬ್ಬರಿಗೂ ಒಂದು ಪ್ರಶ್ನೆ ಸಹಜವಾಗೇ ಕಾಡಿತ್ತು. ಅದೇ ಆಫ್ ಅಶ್ವಿನ್ ಜಾಗವನ್ನು ತುಂಬೋದ್ಯಾರು? ಇದೀಗ ಆ ಜಾಗವನ್ನು ಸಮರ್ಥವಾಗಿ ನಾನ್ ತುಂಬಬಲ್ಲೇ ಅನ್ನೋದನ್ನ ವಾಷಿಂಗ್ಟನ್ ಸುಂದರ್ ನಿರೂಪಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸಿರೀಸ್ನಲ್ಲಿ ಟೀಮ್ ಇಂಡಿಯಾ ಸಾಲಿಡ್ ಆಟವಾಡ್ತಿದೆ. ಈ ಸರಣಿಯಲ್ಲಿ ಟಾಪ್ ಆರ್ಡರ್ನಿಂದ ಹಿಡಿದು ಲೋವರ್ ಆರ್ಡರ್ ತನಕ ಎಲ್ಲರನ್ನೂ ಫ್ಯಾನ್ಸ್ ಕೊಂಡಾಡ್ತಿದ್ದಾರೆ. ಈ ಮಹತ್ವದ ಸರಣಿಯಲ್ಲಿ ತೆರೆ ಹಿಂದಿನ ರಿಯಲ್ ಹೀರೋ ವಾಷ್ಟಿಂಗ್ಟನ್ ಸುಂದರ್.
ಇದನ್ನೂ ಓದಿ: ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದ ಕೊಹ್ಲಿಯ ಅಣ್ಣ.. ವಿರಾಟ್ ವಿರುದ್ಧವೂ ನಿಗಿನಿಗಿ ಕೆಂಡ.. ಆಗಿದ್ದೇನು?
ಮೊದಲ ಟೆಸ್ಟ್ ಪಂದ್ಯದಲ್ಲಿ ಬೆಂಚ್ಗೆ ಸೀಮಿತವಾಗಿದ್ದ ಸುಂದರ್, ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ರು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಳ್ತಿರುವ ವಾಷಿಂಗ್ಟನ್, ಅಂಡರ್ ರೇಟೆಟ್ ಮ್ಯಾಚ್ ವಿನ್ನರ್ ಮತ್ತು ಆಪತ್ಕಾಲದ ಆಪತ್ಬಾಂಧವ ಎಂಬ ಭರವಸೆ ಹುಟ್ಟಿಹಾಕಿದ್ದಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಮ್ಯಾಂಚೆಸ್ಟರ್ ಟೆಸ್ಟ್.
ಸುಂದರ್ ಮ್ಯಾಜಿಕಲ್ ಪರ್ಫಾಮೆನ್ಸ್
ಮ್ಯಾಂಚೆಸ್ಟರ್ನಲ್ಲಿ ವಾಷಿಂಗ್ಟನ್ ಸುಂದರ್ ಆಕ್ಷರಶಃ ನೀಡಿದ್ದು ಮ್ಯಾಜಿಕಲ್ ಪರ್ಫಾಮನ್ಸ್. 188 ರನ್ಗೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್ಗೆ ಇಳಿದ ವಾಷ್ಟಿಂಗ್ಟನ್ ಸುಂದರ್, ನಿಜಕ್ಕೂ ದಿಟ್ಟ ಹೋರಾಟ ನಡೆಸಿದ್ರು. ತಾಳ್ಮೆಯ ಜೊತೆ ಜೊತೆಗೆ ಅಟ್ಯಾಕಿಂಗ್ ಬ್ಯಾಟಿಂಗ್ ನಡೆಸಿದ ಪರಿ ನಿಜಕ್ಕೂ ವಂಡರ್ಫುಲ್..
ಸಂಕಷ್ಟದ ಸಮಯದಲ್ಲಿ ಎದುರಾಳಿಗಳ ತಾಳ್ಮೆಯ ಪರೀಕ್ಷಿಸಿದ ಸುಂದರ್, 206 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಒಳಗೊಂಡ ಅಜೇಯ 101 ರನ್ ಗಳಿಸಿದರು. ಈ ಅದ್ಬುತ ಇನ್ನಿಂಗ್ಸ್ ಇಂಗ್ಲೆಂಡ್ ಗೆಲುವಿನ ಆಸೆಯನ್ನೇ ನುಚ್ಚುನೂರು ಮಾಡಲಿಲ್ಲ. ಟೀಮ್ ಇಂಡಿಯಾಗೆ ಆಪತ್ಕಾಲದ ಆಪತ್ಬಾಂಧವ ಅನ್ನೋದನ್ನ ಸಾರಿ ಸಾರಿ ಹೇಳಿತ್ತು.
ಇದನ್ನೂ ಓದಿ: ಜನರ ಕಷ್ಟ-ಕಾರ್ಪಣ್ಯಕ್ಕೆ ವಿನೂತನ ಮುನ್ನುಡಿ ಬರೆದ ದರ್ಶನ್ ಪುಟ್ಟಣ್ಣಯ್ಯ.. ಏನದು..?
/filters:format(webp)/newsfirstlive-kannada/media/media_files/2025/08/01/washington-sundar-2025-08-01-13-21-42.jpg)
ಮ್ಯಾಂಚೆಸ್ಟರ್ ಪಂದ್ಯದಲ್ಲೇ ಅಲ್ಲ. ಬರ್ಮಿಂಗ್ಹ್ಯಾಮ್, ಮ್ಯಾಂಚೆಸ್ಟರ್ನಲ್ಲೂ ತಂಡಕ್ಕೆ ಬ್ಯಾಟಿಂಗ್ನಲ್ಲಿ ಕಾಣಿಕೆ ನೀಡಿದ್ದ ಸುಂದರ್, ಅಗತ್ಯ ಬಿದ್ದಾಗ ವಿಕೆಟ್ ಬೇಟೆಯಾಡಿ ತಂಡಕ್ಕೆ ಬ್ರೇಕ್ ಥ್ರೂ ನೀಡಿದ್ದಾರೆ. 3 ಪಂದ್ಯಗಳಿಂದ 7 ವಿಕೆಟ್ ಕಬಳಿಸಿರುವ ಸುಂದರ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಸುಂದರ್
ಸುಂದರ್ ಆಡಿರುವ 12 ಪಂದ್ಯಗಳ 22 ಇನ್ನಿಂಗ್ಸ್ಗಳಿಂದ 44.68ರ ಬ್ಯಾಟಿಂಗ್ ಅವರೇಜ್ನಲ್ಲಿ 673 ರನ್ ಗಳಿಸಿರುವ ಸುಂದರ್, 32 ವಿಕೆಟ್ ಬೇಟೆಯಾಡಿದ್ದಾರೆ. ಈ ಪ್ರದರ್ಶನ ಸುಂದರ್, ಟೆಸ್ಟ್ ಕ್ರಿಕೆಟ್ನ ಬೆಸ್ಟ್ ಆಲ್ರೌಂಡರ್ ಆಗುವ ಭರವಸೆಯನ್ನೇ ಹುಟ್ಟಿಹಾಕಿದೆ. ಅಶ್ವಿನ್ ಸ್ಥಾನ ತುಂಬಲು ಸಮರ್ಥ ಅನ್ನೋದರ ನಂಬಿಕೆಯನ್ನ ಹುಟ್ಟಿಸಿದೆ. ಇದು ಕೇವಲ ಈ ಟ್ರ್ಯಾಕ್ ರೆಕಾರ್ಡ್ನಿಂದ ಹೇಳ್ತಿರುವ ಮಾತಲ್ಲ. ಈತ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ತೋರಿದ ಹೋರಾಟವೂ ಇದನ್ನೇ ಹೇಳ್ತಿದೆ.
ಭಾರತ ಸಂಕಷ್ಟದ ಸಮಯದಲ್ಲಿ ಸುಂದರ್
2021ರ ಆಸ್ಟ್ರೇಲಿಯಾ ಎದುರಿನ ಡೆಬ್ಯು ಮ್ಯಾಚ್ನಲ್ಲಿ ಟೀಮ್ ಇಂಡಿಯಾ 161 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಶಾರ್ದೂಲ್ ಜೊತೆ ಸೇರಿ 123 ರನ್ಗಳ ಜೊತೆಯಾಟವಾಡಿದ ಸುಂದರ್, ವೈಯಕ್ತಿಕ 62 ರನ್ ಗಳಿಸಿ ತಂಡಕ್ಕೆ ನೆರವಾದರು. ಇದೇ ವರ್ಷ ಇಂಗ್ಲೆಂಡ್ ಎದುರಿನ ಚೆನ್ನೈ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 192 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಅಜೇಯ 85 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಸುಂದರ್, ಅಹ್ಮದಬಾದ್ನಲ್ಲಿ 146 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಮತ್ತೆ ಅಜೇಯ 96 ರನ್ ಗಳಿಸಿ ಚೇತರಿಕೆ ನೀಡಿದರು. ಅಷ್ಟೇ ಅಲ್ಲ.! 2024ರಲ್ಲಿ ಮೆಲ್ಬರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲೂ ಟೀಮ್ ಇಂಡಿಯಾ, 227 ರನ್ಗೆ 7 ವಿಕೆಟ್ ಕಳೆದುಕೊಂಡಿತ್ತು. 50 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
ಇದನ್ನೂ ಓದಿ: ಡಾ.ರಾಜ್ ಕುಟಂಬಕ್ಕೆ ಆಘಾತ; ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ
/filters:format(webp)/newsfirstlive-kannada/media/media_files/2025/08/01/washington-sundar-1-2025-08-01-13-22-08.jpg)
ಸಂಕಷ್ಟದ ಸಮಯದಲ್ಲಿ ಹೋರಾಡುವ ಕಲೆ, ಮನಸ್ಥಿತಿ ಹೊಂದಿರುವ ಸುಂದರ್, ನಿಜಕ್ಕೂ ಟೀಮ್ ಇಂಡಿಯಾಗೆ ಸಿಕ್ಕಿರುವ ಮತ್ತೊಬ್ಬ ಬೆಸ್ಟ್ ಆಲ್ರೌಂಡರ್ ಅಲ್ದೇ ಮತ್ತೇನು? ಆಡಿರುವ 12 ಪಂದ್ಯಗಳಲ್ಲೇ ಮೆಚ್ಯುರಿಟಿ ಆಟವಾಡ್ತಿರುವ ಸುಂದರ್, ಭವಿಷ್ಯದ ಸ್ಟಾರ್ ಆಲ್ರೌಂಡರ್ ಆಗೋದ್ರಲ್ಲಿ ಡೌಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ