/newsfirstlive-kannada/media/media_files/2025/08/01/darshan-puttanaiah-2025-08-01-08-11-36.jpg)
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಶಾಸಕ ಅಂದರೆ ಆತ ಜನ ಸೇವಕ. ಈ ಮಾತನ್ನ ಅರಿತಿರುವ ಮಂಡ್ಯ ಜಿಲ್ಲೆಯ ಶಾಸಕ ಈ ಹಿಂದೆ ವಿದೇಶದಲ್ಲಿ ಕಲಿತ ವಿದ್ಯೆಯನ್ನ ಸದ್ಭಳಕೆ ಮಾಡಿಕೊಂಡು ಜನರ ಕಷ್ಟ-ಕಾರ್ಪಣ್ಯ ಆಲಿಸ್ತಿದ್ದಾರೆ.
ಜನರಿಗೆ ವರವಾಗ್ತಿದೆ ದರ್ಶನ್​​​ ಪುಟ್ಟಣ್ಣಯ್ಯರ ಮೂಲ ವೃತ್ತಿ!
ದರ್ಶನ್ ಪುಟ್ಟಣ್ಣಯ್ಯ.. ಮೇಲುಕೋಟೆ ರೈತ ಸಂಘದ ಶಾಸಕ.. ತಂದೆ ರೈತ ಹೋರಾಟಗಾರ.. ವಿಧಾನಸೌಧದಲ್ಲಿ ರೈತರ ಧ್ವನಿ ಆಗಿದ್ದವರು.. ಈಗ ಅವರ ಹಾದಿಯಲ್ಲಿ ರೈತ ಸಂಘಟನೆ ಮೂಲಕ ದರ್ಶನ್​​​ ರಾಜಕೀಯ ಪ್ರವೇಶ ಪಡೆದ್ರು.. ದರ್ಶನ್ ಪುಟ್ಟಣ್ಣಯ್ಯ ವಿದೇಶದಲ್ಲಿ ಇದ್ದವರು, ಇವರಿಗೆ ರೈತರ ಕಷ್ಟ ಏನು ಗೊತ್ತು ಅಂತ ಪ್ರಶ್ನಿಸಿದವರೆ ಹೆಚ್ಚು.. ಈಗ ಚಿತ್ರಣವೇ ಬದಲಾಗಿದೆ.
ರಾಜ್ಯದಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಎಂಬ ವಿನೂತನ ಯೋಜನೆ ಯೋಜನೆ ಜಾರಿ ಆಗಿದೆ. ಆ ಕಾರ್ಯಕ್ರಮವನ್ನ ನಿರಂತರವಾಗಿ ಸದ್ಭಳಕೆ ಮಾಡಿಕೊಳ್ತಿದ್ದಾರೆ ದರ್ಶನ್ ಪುಟ್ಟಣ್ಣಯ್ಯ. ತಮ್ಮ ಕ್ಷೇತ್ರದ ಆರೇಳು ಪಂಚಾಯಿತಿಗಳಲ್ಲಿ ಈ ಯೋಜನೆಯನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.. ರಾಜ್ಯದಲ್ಲೇ ಮೊದಲು ಎಂಬಂತೆ ವಿಶೇಷ ಮೊಬೈಲ್ ಆಪ್ ಸಿದ್ಧಪಡಿಸಿದ್ದಾರೆ.. ಆ ಆಪ್ ಮೂಲಕ ಕ್ಷೇತ್ರದ ಮತದಾರರ ಸಮಸ್ಯೆಗಳನ್ನ ಪಟ್ಟಿ ಮಾಡಿ, ಪರಿಹರಿಸುವ ಕೆಲಸ ಮಾಡ್ತಾ ಮಾದರಿ ಹೆಜ್ಜೆ ಇರಿಸಿದ್ದಾರೆ.
ಒಟ್ಟಾರೆ ಸಮಸ್ಯೆಗಳ ಪಟ್ಟಿ ಹಿಡಿದು ಜನ್ರು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆಯೋದು ಸಹಜ. ಆದ್ರೆ, ಮೇಲುಕೋಟೆ ಶಾಸಕರು ಮನೆ ಬಾಗಿಲಿಗೆ ತೆರಳಿ ಮೊಬೈಲ್ ಆಪ್ ಮೂಲಕ ಜನರ ಸಮಸ್ಯೆಗಳಿಗೆ ಕಿವಿ ಆಗ್ತಿರೋದು ವಿಶೇಷ.. ಈ ಜನಪರ ಕಾಳಜಿಗೆ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಈ ಪ್ರಯೋಗ ರಾಜ್ಯಾದ್ಯಂತ ವಿಸ್ತರಿಸಿದ್ರೆ ಉತ್ತಮ.
ಇದನ್ನೂ ಓದಿ: ಪೆಹಲ್ಗಾಮ್ ಉಗ್ರರು ಪಾಕಿಸ್ತಾನದವ್ರು ಎಂಬುದಕ್ಕೆ ಸಾಕ್ಷ್ಯ ಕೊಟ್ಟ ಅಮಿತ್ ಶಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us