/newsfirstlive-kannada/media/media_files/2025/08/30/banu-mushtaq-2025-08-30-08-41-56.jpg)
ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಫ್ತಾಕ್ ಅವರಿಗೆ ಆಹ್ವಾನ ನೀಡಿರುವ ವಿಚಾರವಾಗಿ ಚರ್ಚೆಗಳು ನಿಲ್ಲುತ್ತಿಲ್ಲ. ಈ ಕುರಿತು ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿದೆ.
ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!
ಮತ್ತೊಂದು ಕಡೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕನ್ನಡವನ್ನ ಭುವನೇಶ್ವರಿಯಾಗಿ ನೋಡೋದಕ್ಕೆ ಮುಸಲ್ಮಾನರಿಗೆ ಕಷ್ಟ ಆಗುತ್ತೆ. ಕನ್ನಡವನ್ನ ಭುವನೇಶ್ವರಿಯಾಗಿ ಮಾಡೋ ಮೂಲಕ ದೂರ ಇಟ್ಟಿದ್ದೀರಾ ಅಂತೀರಲ್ಲ ಬಾನು ಮುಸ್ತಾಕ್ ಅವರೇ. ಕಾವೇರಿ ಕೂಡ ದೈವಿ ಸ್ವರೂಪ, ಈ ನೀರಿಂದಾನು ನಿಮ್ಮನ್ನ ಹೊರಗಡೆ ಇಟ್ಟಿದ್ದೇವಾ? ಕಾವೇರಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ? ಇಫ್ತಿಯಾರ್ ಕೂಟಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೋಗಲಿ ಅವರಿಗೆ ಬಿರಿಯಾನಿ ಹಾಕುವ ಮೊದಲು ತಲೆಗೆ ಟೋಪಿ ಹಾಕಿತ್ತೀರಾ. ಮಂಡಿ ಊರಿಸಿ, ಬೊಗಸೆ ಇಟ್ಟು ಪ್ರಾರ್ಥನೆ ಮಾಡಿಸ್ತೀರಿ. ಮುಸ್ತಾಕ್ ಅವರೇ ದಸರಾ ಉದ್ಘಾಟನೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನ. ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಮಲ್ಲಿಗೆ ಮುಡಿದು ಬಂದು ಉದ್ಘಾಟನೆ ಮಾಡಿ ನಮಗೆ ಏನು ತೊಂದರೆ ಇಲ್ಲಾ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ