ನವೆಂಬರ್ ಕ್ರಾಂತಿಯನ್ನ ಕಟ್ಟಿಹಾಕಲು ಸಿಎಂ ಸಿದ್ದರಾಮಯ್ಯ, ಜಸ್ಟ್​​ ಟೀಸರ್​​ ತೋರಿಸಿದ್ದಾರೆ. ಪುತ್ರನ ಮೂಲಕ ಉರುಳಿಸಿದ ದಾಳ, ಭವಿಷ್ಯದ ಅಸಲಿ ಆಟದ ರಹಸ್ಯವನ್ನ ಹೇಳ್ತಿದೆ. ಪಕ್ಷದೊಳಗೆ ಒಳಬೇಗುದಿ ಬೂದಿ ಮುಚ್ಚಿದ್ದು, ಈ ಆಂತರಿಕ ದಂಗೆ ಮಟ್ಟಹಾಕಲು ರಾಹುಲ್​​ ಗಾಂಧಿ ಆಗಮನದ ಸುದ್ದಿ ಹರಡಿದೆ. ಅದಕ್ಕೂ ಮೊದಲೇ ಡೆಲ್ಲಿಗೆ ಹಾರಿದ ಡಿಕೆಶಿ, ಹೈಕಮಾಂಡ್​ಗೆ ರಿಪೋರ್ಟ್​ ಒಪ್ಪಿಸ್ತಿದ್ದಾರೆ. ಅತ್ತ ಪುನಾರಚನೆಯಾದ್ರೆ ಸಿದ್ದರಾಮಯ್ಯ ಐದು ವರ್ಷ ಫಿಕ್ಸ್​ ಅಂತ ರಾಜಣ್ಣ, ಬೆಟ್ಟಿಂಗ್​​ ಮಾಡಿದ್ದಾರೆ.
ಇದನ್ನೂ ಓದಿ:ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್.. ಆಗಿದ್ದೇನು..?
ಅಧಿಕಾರ ಹಸ್ತಾಂತರ ಲೆಕ್ಕಾಚಾರದ ಮಧ್ಯೆ ರಾಹುಲ್​​​ ಗಾಂಧಿ, ನವೆಂಬರ್​​​ 20ರಂದು ಕರ್ನಾಟಕ ಪ್ರವಾಸಕ್ಕೆ ಡೇಟ್​​​ ಫಿಕ್ಸ್​​ ಆಗಿದೆ. ನವೆಂಬರ್ ಕ್ರಾಂತಿ ಚರ್ಚೆ ಮಧ್ಯೆಯೇ ರಾಹುಲ್ ಭೇಟಿ ಅಚ್ಚರಿ ಮತ್ತು ಕುತೂಹಲದ ಘಟ್ಟಕ್ಕೆ ಕರೆದೊಯ್ತಿದೆ..
ರಾಹುಲ್ ಆಗಮನದತ್ತ ಹಸ್ತ ಚಿತ್ತ!
- ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮನಕ್ಕೆ ದಿನಾಂಕ ಫಿಕ್ಸ್​
- ನ.20ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ ಖಚಿತ
- ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಬೀಳಲಿದ್ಯಾ?
- ಸಂಪುಟ ಪುನಾರಚನೆ, ಭವಿಷ್ಯದ ನಾಯಕತ್ವ ನಿರ್ಧಾರ
- ನ.20ರಂದು 100 ಕಾಂಗ್ರೆಸ್ ಕಚೇರಿಗಳ ಶಂಕು ಸ್ಥಾಪನೆ
- ಕಚೇರಿ ಶಂಕು ಸ್ಥಾಪನೆಗೆ ನಿವೇಶನ ಖರೀದಿಗೆ ಸೂಚನೆ
- ಸಚಿವರು, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಫರ್ಮಾನು
ರಾಹುಲ್​​​ ಆಗಮನಕ್ಕೆ ತಿಂಗಳು ಮೊದಲೇ ಸಿದ್ದರಾಮಯ್ಯ ನವೆಂಬರ್​​​ ಮಧ್ಯಂತರ ಯಾತ್ರೆ ಮಾಹಿತಿ ಸಿಗುತ್ತಲೇ ಡಿಸಿಎಂ ಡಿಕೆಶಿ, ದಿಢೀರ್​​​ 10 ಜನಪಥ್​​ ಅಂಗಳ ತಲುಪಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಗೊತ್ತಾಗಿದೆ. ತುಮಕೂರಿನಲ್ಲಿ ಮಾಜಿ ಸಚಿವ ರಾಜಣ್ಣ, ಮತ್ತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪುನಾರಚನೆ ಮೇಲೆ ಸಿಎಂ ಕುರ್ಚಿ ಭವಿಷ್ಯ ನಿಂತಿದೆ. ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವ್ರೇ ಸಿಎಂ. ಸಿದ್ದರಾಮಯ್ಯಗೆ ಸಿಕ್ಕರೆ ಅವ್ರೆ 5 ವರ್ಷ ಅಂತ ಅಸಲೀ ಸತ್ಯ ರಿವೀಲ್​​ ಮಾಡಿದ್ದಾರೆ.
ಇದನ್ನೂ ಓದಿ:3-4 ತಿಂಗಳ ಹಿಂದೇ ಹೇಳಿದ್ರು.. ಸಂಪುಟ ಪುನಾರಚನೆ ಬಗ್ಗೆ CM ಸಿದ್ದರಾಮಯ್ಯ ಏನಂದ್ರು?
ಫಾಲೋವಿಂಗ್ ದಿ ಆರ್ಡರ್!
ನಿನ್ನೆ ಕೃಷ್ಣಬೈರೇಗೌಡ ಸಚಿವ ಸ್ಥಾನ ತ್ಯಾಗದ ಅಸ್ತ್ರ ಪ್ರಯೋಗ ಆಗುತ್ತಲೇ ಇನ್ನಷ್ಟು ಸಚಿವರು ಅದೇ ಹಾದಿ ಹಿಡಿದಿದ್ದಾರೆ. ಸತೀಶ್​​ ಸಹ 30 ತಿಂಗಳ ಒಪ್ಪಂದ ನಿಜ ಅಂತ ಒಪ್ಪಿದ್ರೆ ಪ್ರಿಯಾಂಕ್​​ ಎಲ್ಲವನ್ನ ಹೈಕಮಾಂಡ್​​ ತೀರ್ಮಾನಕ್ಕೆ ಬಿಟ್ಟು, ತ್ಯಾಗವಲ್ಲ, ಫಾಲೋವಿಂಗ್ ದಿ ಆರ್ಡರ್​​ ಅಂತ ವ್ಯಾಖ್ಯಾನಿಸಿದ್ರು. ಪುನಾರಚನೆ ಓಕೆ? ಕೃಷ್ಣಬೈರೇಗೌಡರ ತ್ಯಾಗ ಯಾಕೆ ಅಂತ ನವಲಗುಂದದ ಕೋನರೆಡ್ಡಿ ಪ್ರಶ್ನೆ ಎತ್ತಿದ್ದಾರೆ.
ಕಾಂಗ್ರೆಸ್​​ಗೆ ಪಕ್ಷಾಂತರವಾಗಿ ಬಂದ ಸವದಿಗೆ ಮಂತ್ರಿ ಆಸೆ ಮರಿಚಿಕೆ ಆಗಿದೆ. ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ ಅಂತ ಖುಷ್​​​ ಆಗಿದ್ದಾರೆ. ಒಟ್ಟಾರೆ, ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಸಿಎಂ ಕುರ್ಚಿ ಕದನ ಹೊಸದಲ್ಲ. ನಾಲ್ಕು ಗೊಡೆಯೊಳಗಿನಿಂದ ರಟ್ಟಾದ ಪವರ್​​ ಶೇರಿಂಗ್​​​ ರಹಸ್ಯದಂತೆ ಆ ಕಾಲವೇ ಕೂಡಿ ಬಂದಿದೆ. ಹೀಗಾಗಿ ಅಸಲೀ ಗೇಮ್​​ ಈಗ ಶುರುವಾಗಿದ್ದು, ಬೃಹನ್ನಾಟಕದ ಕ್ಲೈಮ್ಯಾಕ್ಸ್​ಗೆ ಇಡೀ ರಾಜ್ಯ ಎದುರು ನೋಡ್ತಿದೆ.
ಇದನ್ನೂ ಓದಿ: ಕ್ಯಾಬಿನೆಟ್ ಪುನರ್ ರಚನೆಯ ಸುಳಿವು ನೀಡಿದ ಸಚಿವ ಕೃಷ್ಣ ಭೈರೇಗೌಡ : ಮೊದಲೇ ಬೇರೆಯವರಿಗೂ ಅವಕಾಶ ನೀಡುವ ಚರ್ಚೆಯಾಗಿತ್ತು ಎಂದ ಸಚಿವ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us