ಶಿವಮೊಗ್ಗದಲ್ಲಿ ಅಪರೂಪದ ವಿದ್ಯಮಾನ: ಒಂದೇ ವೇದಿಕೆಯಲ್ಲಿ BL ಸಂತೋಷ್ - ಡಿ.ಕೆ.ಶಿವಕುಮಾರ್..!

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿಗೆ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ಬಿ.ಎಲ್. ಸಂತೋಷ್ ಹಾಗೂ ಡಿ.ಕೆ. ಶಿವಕುಮಾರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಆತ್ಮೀಯವಾಗಿ ಹರಟಿದ್ದು ಎಲ್ಲರ ಗಮನ ಸೆಳೆದಿದೆ.

author-image
Ganesh Kerekuli
BL Santosh and DK Shivakumar
Advertisment

ಶಿವಮೊಗ್ಗ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿಗೆ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ಸದಾ ಕಾಲ ರಾಜಕೀಯವಾಗಿ ಪರಸ್ಪರ ಟೀಕೆ-ಪ್ರತಿಟೀಕೆಗಳಲ್ಲಿ ತೊಡಗಿಕೊಳ್ಳುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಆತ್ಮೀಯವಾಗಿ ಹರಟಿದ್ದು ಎಲ್ಲರ ಗಮನ ಸೆಳೆಯಿತು.

ತರಳಬಾಳು ಹುಣ್ಣಿಮೆ ವೇದಿಕೆಯಲ್ಲಿ ಸಮಾಗಮ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ 'ತರಳಬಾಳು ಹುಣ್ಣಿಮೆ' ಮಹೋತ್ಸವದ 'ಸರ್ವಧರ್ಮ ಸಮನ್ವಯ ಸಭೆ' ಈ ಇಬ್ಬರು ಧ್ರುವತಾರೆಗಳ ಭೇಟಿಗೆ ವೇದಿಕೆಯಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಎಲ್. ಸಂತೋಷ್ ಆಗಮಿಸಿದ್ದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ:ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ವ್ಯಕ್ತಿಯ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ.. ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !

BL Santosh and DK Shivakumar (1)

10 ನಿಮಿಷಗಳ ಕಾಲ ಆತ್ಮೀಯ ಚರ್ಚೆ

ವೇದಿಕೆಗೆ ಡಿ.ಕೆ. ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ, ಬಿ.ಎಲ್. ಸಂತೋಷ್ ಅವರು ಎದ್ದು ನಿಂತು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಸುಮಾರು 10 ನಿಮಿಷಗಳ ಕಾಲ ಇಬ್ಬರೂ ನಾಯಕರು ಅಕ್ಕಪಕ್ಕದಲ್ಲೇ ಕುಳಿತು ನಗುನಗುತ್ತಾ ಸಮಾಲೋಚನೆ ನಡೆಸಿದರು. ರಾಜಕೀಯ ಜಿದ್ದಾಜಿದ್ದಿನ ನಡುವೆಯೂ ವೈಯಕ್ತಿಕ ಸ್ನೇಹ ಮತ್ತು ಶಿಷ್ಟಾಚಾರವನ್ನು ಮೆರೆದ ಈ ದೃಶ್ಯ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು.

BL Santosh and DK Shivakumar (2)

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಭದ್ರಾವತಿ

ಸಾಮಾನ್ಯವಾಗಿ ಬಿ.ಎಲ್. ಸಂತೋಷ್ ಮತ್ತು ಡಿ.ಕೆ. ಶಿವಕುಮಾರ್ ಅತಿ ವಿರಳವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಸಾರ್ವಜನಿಕವಾಗಿ ಇಷ್ಟು ಆತ್ಮೀಯವಾಗಿ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ವಧರ್ಮ ಸಮನ್ವಯ ಸಭೆಯ ಆಶಯಕ್ಕೆ ತಕ್ಕಂತೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಬ್ಬರು ನಾಯಕರು ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ತರಳಬಾಳು ಜಗದ್ಗುರುಗಳ ಸನ್ನಿಧಿಯಲ್ಲಿ ನಡೆದ ಈ ಅಪರೂಪದ ಭೇಟಿ, ಸೌಹಾರ್ದಯುತ ರಾಜಕಾರಣಕ್ಕೆ ಹೊಸ ಮುನ್ನುಡಿ ಬರೆದಂತಿದೆ.

ಇದನ್ನೂ ಓದಿ:ಬರೀ ಟ್ವೀಟ್ ಮಾಡಬೇಡಿ, ಬಹಿರಂಗ ಚರ್ಚೆಗೆ ಬನ್ನಿ; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar B.L. Santosh
Advertisment