/newsfirstlive-kannada/media/media_files/2025/10/17/rivaba_jadeja_new-2025-10-17-23-19-14.jpg)
ಗಾಂಧಿನಗರ: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ನೇತೃತ್ವದ ಸಂಪುಟವನ್ನು ಪುನಾರಚನೆ ಮಾಡಲಾಗಿದೆ. 26 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಹರ್ಷ್ ಸಾಂಘ್ವಿ ಅವರನ್ನು ನೂತನ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಈ ಮೂಲಕ, ಸುಮಾರು ನಾಲ್ಕು ವರ್ಷಗಳ ನಂತರ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಸೃಷ್ಟಿಸಲಾಗಿದೆ.
ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೂ ಸಚಿವೆ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಈ ಬಾರಿ ಹಲವು ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಗುಜರಾತ್ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಾಥಮಿಕ, ಪ್ರೌಢ ಮತ್ತು ವಯಸ್ಕ ಶಿಕ್ಷಣ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್​ಗೆ ಅವಮಾನ.. ಆಸಿಸ್​ ಆಟಗಾರರು ಮಾಡಿದ್ದೇನು?
ರಿವಾಬಾ ಜಡೇಜಾ ರಾಜಕೀಯಕ್ಕೆ ಬರುವ ಮೊದಲು ರಜಪೂತ ಕರ್ಣಿ ಸೇನೆಯಲ್ಲಿದ್ದರು. 2019ರಲ್ಲಿ ಬಿಜೆಪಿ ಸೇರಿ 2022ರಲ್ಲಿ ಶಾಸಕಿಯಾಗಿ ಆಯ್ಕೆ ಆದರು. ಮಾತೃಶಕ್ತಿ ಟ್ರಸ್ಟ್ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ರಿವಾಬಾ, ಚಿಕ್ಕ ವಯಸ್ಸಿನಲ್ಲೇ ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಸದ್ಯ ಇವರು ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು ಈಘ ಸಂಪುಟದಲ್ಲಿ ಸಚಿವೆ ಸ್ಥಾನ ನೀಡಲಾಗಿದೆ.
ರಿವಾಬಾ ಅವರು 1990ರ ನ.2 ರಂದು ರಾಜ್​ಕೋಟ್​ನಲ್ಲಿ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರು ಸರ್ಕಾರಿ ಹುದ್ದೆ ಕನಸು ಕಂಡಿದ್ದರು. ಬದುಕಿನಲ್ಲಿ ಸಮಾಜ ಸೇವೆ ಮತ್ತು ರಾಜಕೀಯದ ಆಸಕ್ತಿ ಅವರನ್ನು ರಾಜಕಾರಣದತ್ತ ಕರೆದೊಯ್ಯುತು. ಮೊದಲೇ ರಿವಾಬಾ ಕುಟುಂಬ ರಾಜ್​ಕೋಟ್​ನಲ್ಲಿ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯ ಆಗಿತ್ತು. ರಿವಾಬಾ ಮಾವ ಹರಿಸಿಂಗ್ ಸೋಲಂಕಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಆಗಿದ್ದರು. ಹೀಗಾಗಿ ರಿವಾಬಾ ರಾಜಕಾರಣದಲ್ಲಿ ಬೇಗನೇ ಬೆಣವಣಿಗೆ ಕಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ