/newsfirstlive-kannada/media/media_files/2025/10/17/ind_vs_aus-1-2025-10-17-15-42-50.jpg)
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಸರಣಿಗೆ, ಒಂದೇ ಒಂದು ದಿನ ಮಾತ್ರ ಬಾಕಿ ಇದೆ. ಆಗಲೇ ಆಸ್ಟ್ರೇಲಿಯನ್ನರು, ತಮ್ಮ ಕೆಟ್ಟ ಚಾಳಿ ಪ್ರದರ್ಶಿಸಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂಗರೂ ಆಟಗಾರರ ಕೆಟ್ಟ ವರ್ತನೆ, ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಆಸಿಸ್​ ಆಟಗಾರರು ಮಾಡಿದ್ದೇನು?.
ಆಸ್ಟ್ರೇಲಿಯನ್ನರು ಅಂದ್ರೆ ನಮಗೆ ಮೊದಲು ನೆನಪಾಗೋದು, ಫೈಟರ್ಸ್​. ಆನ್​ಫೀಲ್ಡ್​​ನಲ್ಲಿ ಕೆಚ್ಚೆದೆಯ ಹೋರಾಟ ನಡೆಸೋ ಕಾಂಗರೂಗಳು, ಚಾಂಪಿಯನ್​​​​ ಆಟಗಾರರು ಅಂತ ಗುರುತಿಸಿಕೊಂಡಿದ್ದಾರೆ. ಆದ್ರೆ ಅದೇ ಆಸ್ಟ್ರೇಲಿಯನ್ನರಿಗೆ ಒಂದು ಕೆಟ್ಟ ಚಾಳಿ ಇದೆ. ಅದು ಯಾವುದೇ ಸರಣಿಗೂ ಮುನ್ನ ಎದುರಾಳಿಗಳನ್ನ ಕಿಚಾಯಿಸೋದು, ಅವಮಾನ ಮಾಡೋದು, ಮತ್ತು ಅವರ ಆತ್ಮವಿಶ್ವಾಸ ಕುಗ್ಗಿಸೋದು, ಆಸಿಸ್​​ ಆಟಗಾರರ ತಂತ್ರವಾಗಿಬಿಟ್ಟಿದೆ. ಇದೀಗ ಏಕದಿನ ಸರಣಿಗೂ ಮುನ್ನ ಕಾಂಗರೂಗಳು, ಕೆಟ್ಟ ವರ್ತನೆ ಪ್ರದರ್ಶಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯನ್ನರ 'ಬ್ಯಾಡ್ ಗೇಮ್'..!
ಆಸ್ಟ್ರೇಲಿಯನ್ನರು ಟೀಮ್ ಇಂಡಿಯಾ ಆಟಗಾರರನ್ನ, ವೀಡಿಯೋ ಒಂದರಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಕಾಂಗರೂಗಳು ನಮ್ಮ ಆಟಗಾರರನ್ನ ಅಣಕಿಸೋದಕ್ಕೆ, ಶೇಕ್​ಹ್ಯಾಂಡ್ ಕಾರಣವಾಗಿದೆ. ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಆಟಗಾರರು, ಪಾಕ್ ಆಟಗಾರರ ಜೊತೆ ಶೇಕ್​ಹ್ಯಾಂಡ್ ಮಾಡೋದನ್ನ ನಿರಾಕರಿಸಿದ್ರು. ಆದ್ರೆ ಆಸ್ಟ್ರೇಲಿಯನ್ನರು ಅದನ್ನೇ ಬಂಡವಾಳ ಮಾಡಿಕೊಂಡು, ಏಕದಿನ ಸರಣಿಗೂ ಮುನ್ನ ಬ್ಯಾಡ್​ ಗೇಮ್ ಆಡಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಅವಮಾನ..?
ನಿಜ ಹೇಳಬೇಕು ಅಂದ್ರೆ, ಆಸ್ಟ್ರೇಲಿಯಾ ಆಟಗಾರರ ವರ್ತನೆ, ಸರಿಯಲ್ಲ, ಮೊದಲೇ ಇಂಡೋ-ಪಾಕ್ ಆಟಗಾರರ ಶೇಕ್​​ಹ್ಯಾಂಡ್ ವಿಚಾರ, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದ್ರೆ ಕಾಂಗರೂಗಳು ಅದೇ ವಿಚಾರವನ್ನ ಮುಂದಿಟ್ಟುಕೊಂಡು, ವಿಡಿಯೋ ಮಾಡಿದ್ದು ನಿಜಕ್ಕೂ ಖಂಡನೀಯ. ಇದು ಟೀಮ್ ಇಂಡಿಯಾ ಆಟಗಾರರಿಗೆ ಮಾಡಿದ ಅವಮಾನ ಕೂಡ ಹೌದು.
ಭಾರತೀಯ ಆಟಗಾರರ ಬಗ್ಗೆ ಹಗುರವಾದ ಹೇಳಿಕೆ..!
ಇನ್ನು ಈ ವೀಡಿಯೋದಲ್ಲಿ ಆಸ್ಟ್ರೇಲಿಯನ್ನರು, ಭಾರತೀಯರ ಸಂಸ್ಕೃತಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಭಾರತೀಯರಿಗೆ ಶೇಕ್​ಹ್ಯಾಂಡ್ ಮಾಡೋ ಸಂಸ್ಕೃತಿ ಇಲ್ಲ. ಹಾಗಾಗಿ ಇವರಿಗೆ ವಿಭಿನ್ನ ರೀತಿಯಲ್ಲಿ ಸ್ವಾಗತ ಮಾಡಬೇಕು ಅಂತ, ಅಪಹಾಸ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರನ್ನ ಒಂದೇ ಒಂದು ಬಾಲ್ ಆಡೋಕೂ ಮುನ್ನ, ಬಿಸಾಡಬೇಕು ಅಂತ ಕಿಂಡಲ್ ಮಾಡಿದ್ದಾರೆ.
ರೊಚ್ಚಿಗೆದ್ದ ಅಭಿಮಾನಿಗಳು, ವೀಡಿಯೋ ಡಿಲೀಟ್..!
ಆಸ್ಟ್ರೇಲಿಯನ್ನರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದಂತೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಕಮೆಂಟ್ ಬಾಕ್ಸ್​ನಲ್ಲಿ ಕಾಂಗರೂಗಳ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ. ಅಭಿಮಾನಿಗಳು ರೊಚ್ಚಿಗೇಳುತ್ತಿದಂತೆ ಎಚ್ಚೆತ್ತುಕೊಂಡ ಕಾಂಗರೂಗಳು, ಆ ವೀಡಿಯೋವನ್ನ ಡಿಲೀಟ್ ಮಾಡಿದ್ದಾರೆ.
ಆಸ್ಟ್ರೇಲಿಯನ್ನರ ಕಿತಾಪತಿ ಇದೇ ಮೊದಲಲ್ಲ..!
ಕೈಯಲ್ಲಾದವನು ಮೈಯೆಲ್ಲಾ ಪರಚಿಕೊಂಡನಂತೆ ಅನ್ನೋ ಗಾದೆ ಇದೆ. ಇದು ಆಸ್ಟ್ರೇಲಿಯನ್ನರಿಗೆ ಸಖತ್ ಆಗಿ ಸೂಟ್ ಆಗುತ್ತದೆ. ಬಲಿಷ್ಟ ಟೀಮ್ ಇಂಡಿಯಾವನ್ನ ಸೋಲಿಸೋದು ಕಾಂಗರೂಗಳಿಗೆ, ಅಷ್ಟು ಸುಲಭವಲ್ಲ. ಹಾಗಾಗಿ ಸರಣಿಗೂ ಮುನ್ನ ಆಸ್ಟ್ರೇಲಿಯನ್ನರು ಹೀಗೆ ಕಿತಾಪತಿ ಮಾಡ್ತಾರೆ. ಎದುರಾಳಿಗಳನ್ನ ಮಾತಿನಿಂದಲೇ ಕುಗ್ಗಿಸೋ ಪ್ರಯತ್ನ ಮಾಡ್ತಾರೆ. ಇದೇ ಅವರ ಗೆಲುವಿನ ತಂತ್ರವಾಗಿಬಿಟ್ಟಿದೆ.
ಆಸಿಸ್ ಆಟಗಾರರು ಸಾಚಾ ಅಲ್ಲ..!
ಆಸ್ಟ್ರೇಲಿಯಾ ಆಟಗಾರರಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟ್​​ ಇದೆ. ಹಾಗಂತ ಅವರೇನು ಸಾಚಾ ಅಲ್ಲ, ಈ ಹಿಂದೆ ಆಸಿಸ್​​ನ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಬೆನ್​​​​ಕ್ರಾಫ್ಟ್ ಸ್ಯಾಂಡ್ ಪೇಪರ್​​​​​​​​​ಗೇಟ್​​ ವಿವಾದಲ್ಲಿ​ ಸಿಲುಕಿ, ಚೀಮಾರಿ ಹಾಕಿಸಿಕೊಂಡಿದ್ರು. ಆಸಿಸ್ ಅಭಿಮಾನಿಗಳು ಕೂಡ ಪ್ರವಾಸಿ ಆಟಗಾರರನ್ನ ಸುಖಾಸುಮ್ಮನೆ ಕೆಣಕಿ, ಟೀಕೆಗೆ ಗುರಿಯಾಗಿದ್ರು. ಇವೆಲ್ಲವನ್ನು ಗಮನಿಸಿದ್ರೆ ಆಸ್ಟ್ರೇಲಿಯನ್ನರು ಕೇವಲ ಚಾಂಪಿಯನ್​ ಪ್ಲೇಯರ್ಸ್​ ಅಷ್ಟೇ ಅಲ್ಲ, ಬ್ಯಾಡ್​​ ಬಾಯ್ಸ್​ ಅನ್ನೋದು ಗೊತ್ತಾಗುತ್ತದೆ. ​​​​
ಏನೇ ಇರಲಿ, ಆಸ್ಟ್ರೇಲಿಯನ್ನರಿಗೆ ಟೀಮ್ ಇಂಡಿಯಾ ಆಟಗಾರರು, ಫೀಲ್ಡ್​​ನಲ್ಲೇ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡ್ತಾರೆ. ಆ ದಿನಗಳು ತುಂಬಾ ದೂರ ಏನಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ