/newsfirstlive-kannada/media/media_files/2025/10/16/kohli_rohith-2025-10-16-22-23-26.jpg)
ಟೀಮ್ ಇಂಡಿಯಾ ಆಟಗಾರರು ಸದ್ಯ ಆಸ್ಟ್ರೇಲಿಯಾದಲ್ಲಿ ಬಿಡು ಬಿಟ್ಟಿದ್ದು ಮೊದಲ ಏಕದಿನ ಪಂದ್ಯಕ್ಕಾಗಿ ಬಿರುಸಿನ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಶುಭ್​ಮನ್ ಗಿಲ್ ನೇತೃತ್ವದಲ್ಲಿ ಭಾರತ ತಂಡ, ಆಸಿಸ್ ವಿರುದ್ಧ ಅಖಾಡಕ್ಕೆ ಧುಮುಕಲಿದೆ. ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಸ್ಟಾರ್​ ಪ್ಲೇಯರ್ಸ್​ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ಅವರು ಪಾಕಿಸ್ತಾನದ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ನೀಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬರೋಬ್ಬರಿ 7 ತಿಂಗಳ ನಂತರ ಏಕದಿನ ಸರಣಿಗೆ ಮರಳಿರುವುದು ಅಭಿಮಾನಿಗಳ ವಲಯದಲ್ಲಿ ಹೊಸ ಹುರುಪು ತಂದಿದೆ. ಆಸ್ಟ್ರೇಲಿಯಾದ ಪರ್ತ್​ ಮೈದಾನದಲ್ಲಿ ಭಾರತದ ಆಟಗಾರು ಕಠಿಣ ಅಭ್ಯಾಸಕ್ಕೆ ಅಣಿಯಾಗಿದ್ದರು. ಈ ವೇಳೆ ವಾಪಸ್ ಬಸ್​ ಹತ್ತುವಾಗ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗೆ ರೋಹಿತ್ ಕೋಹ್ಲಿ ಆಟೋಗ್ರಾಫ್ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ಅಭ್ಯಾಸ ಮುಗಿಸಿ ಬಸ್​ ಹತ್ತುತ್ತಿರುತ್ತಾರೆ. ಈ ವೇಳೆ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿ, ವಿರಾಟ್ ಭಾಯ್..ವಿರಾಟ್ ಭಾಯ್.. ಪ್ಲೀಸ್​ ಆರ್​ಸಿಬಿ ಜೆರ್ಸಿ ಇದೆ ಎಂದು ಕರೆಯುತ್ತಾರೆ. ಇದಕ್ಕೆ ಸ್ಪಂದಿಸಿದ ಸ್ಟಾರ್​ ಕ್ರಿಕೆಟರ್ ಕೊಹ್ಲಿ, ಆರ್​ಸಿಬಿ ಜೆರ್ಸಿ ಹಾಗೂ ಟೀಮ್ ಇಂಡಿಯಾದ ಜೆರ್ಸಿ ಎರಡಕ್ಕೂ ತಮ್ಮ ಆಟೋಗ್ರಾಫ್ ಹಾಕಿದ್ದಾರೆ.
ಇದಾದ ಮೇಲೆ ಬಸ್​ನಲ್ಲಿದ್ದ ರೋಹಿತ್ ಶರ್ಮಾ ಅವರು ಮತ್ತೆ ಇಳಿದು ಬಂದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ಕೈಯಲ್ಲಿದ್ದ ಟೀಮ್ ಇಂಡಿಯಾದ ಜೆರ್ಸಿಗೆ ಆಟೋಗ್ರಾಫ್ ಹಾಕಿದ್ದಾರೆ. ಈ ವೇಳೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯ ಮೊಗದಲ್ಲಿ ಸಂತಸ ಮುಗಿಲು ಮುಟ್ಟಿತ್ತು ಎಂದು ಹೇಳಬಹುದು. ಆಟೋಗ್ರಾಫ್ ಪಡೆಯುತ್ತಿದ್ದಂತೆ ಲೆಜೆಂಡರಿ ಬ್ಯಾಟರ್​ಗಳಿಗೆ ಥ್ಯಾಂಕ್ಸ್​ ಭಾಯ್.. ಎಂದು ಹೇಳಿದ್ದಾರೆ.
ಇನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ಈ ಬಗ್ಗೆ ಮಾತನಾಡಿದ್ದು, ನಾನು ಪಾಕಿಸ್ತಾನದ ಕರಾಚಿ ನಿವಾಸಿ. ಆರ್​ಸಿಬಿ ಜೆರ್ಸಿ ಇದೆ ಅಂತ ನಾನೇ ಕೊಹ್ಲಿನ ಕರೆದೆ. ಈ ಮೊದಲು ಒಂದು ಬಾರಿ ಅವರನ್ನು ಮೀಟ್ ಮಾಡಿದ್ದೆ. ಅದೇ ಹಂಬಲ್ ಅವರ ಬಳಿ ಈಗಲೂ ಇದೆ. ರೋಹಿತ್ ಶರ್ಮಾ ಅಂತೂ ಬಸ್​ನಿಂದ ವಾಪಸ್ ಬಂದು ಆಟೋಗ್ರಾಫ್ ಕೊಟ್ಟಿದ್ದು ವ್ಹಾವ್​ ಅನಿಸಿತು. ಇಬ್ಬರು ಲೆಜೆಂಡರಿಗಳು ತಂಡಕ್ಕೆ ಮರಳಿದ್ದು ನನಗೆ ಸಖತ್ ಖುಷಿ ನೀಡುತ್ತಿದೆ. 3 ಮ್ಯಾಚ್​ಗಳನ್ನು ಇವರೇ ಗೆಲ್ಲುತ್ತಾರೆ. ಈ ಸರಣಿಯಲ್ಲಿ ಲೆಜೆಂಡರಿ ಬ್ಯಾಟರ್​ಗಳಿಂದ ಸೆಂಚುರಿ ನೋಡಬೇಕು ಎನ್ನುವ ಆಸೆ ಇದೆ. ರೋಹಿತ್ ಕೂಡ ಫುಲ್ ಫಿಟ್ ಆಗಿದ್ದಾರೆ ಎಂದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ಹೇಳಿದ್ದಾರೆ.
🚨 A lucky fan of Virat Kohli from Karachi got his RCB jersey signed by the star batter. @rohitjuglan@ThumsUpOfficial#ViratKohli#TeamIndia#AUSvsIND#CricketFanspic.twitter.com/gujRTYbwee
— RevSportz Global (@RevSportzGlobal) October 16, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ