Advertisment

ಗಂಭೀರ್ ಮಾಡಿರುವ ಕಿರಿಕ್ ಒಂದಾ, ಎರಡಾ.. ಹೆಡ್​ ಕೋಚ್​ ಕಂಡ್ರೆ ಟೀಮ್ ಇಂಡಿಯಾಗೆ ಭಯನಾ?

ಬಾಲಾಜಿ ಬೌಲಿಂಗ್​ನಲ್ಲಿ ಔಟಾಗಿ ಪೆವಿಲಿಯನ್ನತ್ತ ಹೋಗ್ತಿದ್ದ ಕೊಹ್ಲಿಯನ್ನ, ಗಂಭೀರ್ ಸುಖಾಸುಮ್ಮನೆ ಕೆಣಕಿದ್ರು. ಈ ವೇಳೆ ಇಬ್ಬರ ನಡುವೆ ಮಾತಿಮ ಸಮರ ನಡೆಯಿತು.​​​ 2023, ಐಪಿಎಲ್ ಸೀಸನ್-16ರ ವೇಳೆಯೂ ಗಂಭೀರ್-ಕೊಹ್ಲಿ, ಆನ್​ಫೀಲ್ಡ್​ನಲ್ಲೇ ಶತೃಗಳಂತೆ ಕಿತ್ತಾಡಿಕೊಂಡಿದ್ರು.

author-image
Bhimappa
gautam_gambhir
Advertisment

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಇದೀಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ವೈಟ್​​ಬಾಲ್ ಕ್ರಿಕೆಟ್​​ನ ಮೋಸ್ಟ್ ಸಕ್ಸಸ್​​ಫುಲ್ ಕೋಚ್ ಎನಿಸಿಕೊಂಡಿರೋ ಗೌತಿ, ಆನ್​ಫೀಲ್ಡ್ ಮತ್ತು ಆಫ್​ ದ ಫೀಲ್ಡ್​ನಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣರಾಗಿದ್ದಾರೆ. ಅಷ್ಟಕ್ಕೂ ಗಂಭೀರ್​ರನ್ನ ಮಿಸ್ಟರ್ ಕಾಂಟ್ರವರ್ಸಿ ಅಂತಿರೋದ್ಯಾಕೆ..? ಗಂಭೀರ್​ ಮಾಡಿಕೊಂಡಿರೋ ವಿವಾದಗಳೇನು?.

Advertisment

ಗಂಭೀರ್ ನೋಡೋಕೆ ಕೂಲ್ ಌಂಡ್ ಕಾಮ್. ಯಾರತ್ರಾನೂ ಹೆಚ್ಚು ಮಾತನಾಡೊಲ್ಲ. ಸೈಲೆಂಟ್ ಆಗಿ ಕಾಣೋ ಈತ, ಸಿಡಿದೆದ್ರೆ ಫುಲ್ ವೈಲೆಂಟ್. ಇನ್ನು ಈತ ಸದಾ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿ, ಹೆಡ್​​ಲೈನ್​​​​ನಲ್ಲಿ ಇರ್ತಾರೆ. ​​ಆಟಗಾರನಾಗಿ ಈತ, ಸಾಕಷ್ಟು ವಿವಾದಗಳಿಗೆ ಕಾರಣರಾಗಿದ್ರು. ಇದೀಗ ಕೋಚ್ ಆದ್ಮೇಲೂ ಈತ, ಕಾಂಟ್ರವರ್ಸಿಗಳಿಂದ ದೂರ ಉಳಿದಿಲ್ಲ. ನಾವ್ ಮಾತನಾಡ್ತಿರೋದು, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಬಗ್ಗೇನೆ.

gautam_gambhir_PAK

ಗಂಭೀರ್ V/S ಗ್ರೌಂಡ್ಸ್​ಮೆನ್

ಅದು 2025ರ ಓವಲ್ ಟೆಸ್ಟ್ ಪಂದ್ಯ. ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಓವಲ್​ ಪಿಚ್ INSPECTIONಗೆ ತೆರಳಿದ್ರು. ಈ ವೇಳೆ ಪಿಚ್​​​ ಸಮೀಪ ತೆರಳಿದ್ದ ಗಂಭೀರ್​ರನ್ನ, ಗ್ರೌಂಡ್ಸ್​ಮನ್ ತಡೆದಿದ್ರು. ಇದ್ರಿಂದ ರೊಚ್ಚಿಗೆದ್ದ ಗಂಭೀರ್, ಹೆಡ್ ಗ್ರೌಂಡ್ಸ್​ಮೆನ್​​​​​ಗೆ ಹಿಗ್ಗಾಮುಗ್ಗಾ ಬೈದ್ರು. 

ಗಂಭೀರ್ V/S ವಿರಾಟ್ ಕೊಹ್ಲಿ

2013 ಐಪಿಎಲ್ ಪಂದ್ಯದ ವೇಳೆ ಕೆಕೆಆರ್ ನಾಯಕನಾಗಿದ್ದ ಗಂಭೀರ್, ವಿರಾಟ್ ಕೊಹ್ಲಿ ವಿರುದ್ಧ ತಿರುಗಿ ಬಿದ್ದಿದ್ರು. ವೇಗಿ ಎಲ್.ಬಾಲಾಜಿ ಬೌಲಿಂಗ್​ನಲ್ಲಿ ಔಟಾಗಿ ಪೆವಿಲಿಯನ್ನತ್ತ ಹೋಗ್ತಿದ್ದ ಕೊಹ್ಲಿಯನ್ನ, ಗಂಭೀರ್ ಸುಖಾಸುಮ್ಮನೆ ಕೆಣಕಿದ್ರು. ಈ ವೇಳೆ ಇಬ್ಬರ ನಡುವೆ ಮಾತಿಮ ಸಮರ ನಡೆಯಿತು.​​​ 2023, ಐಪಿಎಲ್ ಸೀಸನ್-16ರ ವೇಳೆಯೂ ಗಂಭೀರ್-ಕೊಹ್ಲಿ, ಆನ್​ಫೀಲ್ಡ್​ನಲ್ಲೇ ಶತೃಗಳಂತೆ ಕಿತ್ತಾಡಿಕೊಂಡಿದ್ರು. ಎರಡೂ ಬಾರಿ ಗಂಭೀರ್, ಕೊಹ್ಲಿ ಜೊತೆಗೆ ಕಾಲುಕೆರೆದು ಜಗಳಕ್ಕೆ ಬಂದಿದ್ದರು. 

Advertisment

ಗಂಭೀರ್ V/S ಮನೋಜ್ ತಿವಾರಿ

2015 ಬೆಂಗಾಲ್ ವರ್ಸಸ್ ಡೆಲ್ಲಿ ರಣಜಿ ಪಂದ್ಯದ ವೇಳೆ, ಗೌತಮ್ ಗಂಭೀರ್ ಮತ್ತು ಮನೋಜ್ ತಿವಾರಿ ಆನ್​ಫೀಲ್ಡ್​ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ರು. ಸ್ಪಿನ್ನರ್ ಬೌಲಿಂಗ್​​ ಹಾಕಬಹುದು ಅಂತ ತಿವಾರಿ, ಕ್ಯಾಪ್ ಹಾಕಿಕೊಂಡು ಬ್ಯಾಟಿಂಗ್​ಗೆ ಇಳಿದಿದ್ರು. ಆದ್ರೆ ಬೌಲಿಂಗ್​ ಮಾಡಲು ಪೇಸರ್ ಬಂದಾಗ ತಿವಾರಿ, ಡ್ರೆಸಿಂಗ್​ ರೂಮ್​ಗೆ ಹೆಲ್ಮೆಟ್​​​ ತರಲು ಸೂಚಿಸಿದ್ರು. ತಿವಾರಿ ನಡೆಯಿಂದ ಆಕ್ರೋಶಗೊಂಡ ಗಂಭೀರ್, ಸ್ಪಾಟ್​​ನಲ್ಲೇ ಜಗಳಕ್ಕೆ ನಿಂತುಬಿಟ್ರು.  

ಗಂಭೀರ್ V/S ಶಾಹೀದ್ ಅಫ್ರಿದಿ, ಕಮ್ರಾನ್ ಅಕ್ಮಲ್

2007, ಕಾನ್ಪುರ ಏಕದಿನ ಪಂದ್ಯದಲ್ಲಿ, ಗೌತಮ್ ಗಂಭೀರ್ ಮತ್ತು ಪಾಕ್​​​ ಆಲ್​ರೌಂಡರ್ ಶಾಹೀದ್ ಅಫ್ರೀದಿ ನಡುವೆ ಬಿಗ್ ಫೈಟ್ ನಡೆಯಿತು. ತನ್ನ ಬೌಲಿಂಗ್​ನಲ್ಲಿ ಬೌಂಡರಿ ಸಿಡಿಸಿದ ಗಂಭೀರ್​​ರನ್ನ ಅಫ್ರೀದಿ, ಸ್ಲೆಡ್ಜ್ ಮಾಡಿದ್ರು. ಆಗ ಗಂಭೀರ್, ತನ್ನದೇ ಸ್ಟೈಲ್​ನಲ್ಲಿ ಉತ್ತರ ನೀಡಿದ್ರು. 

ಇದನ್ನೂ ಓದಿ: ರಿಷಭ್ ಪಂತ್ ಸೇರಿ ಈ ಪ್ಲೇಯರ್​ಗಳಿಗೆ​ ಗೇಟ್​ ಪಾಸ್..​ IPL​ ತಂಡಗಳಲ್ಲಿ ದೊಡ್ಡ ಬದಲಾವಣೆ?

Advertisment

gautam_gambhir_KOHLI

ಇದಷ್ಟೇ ಅಲ್ಲ..! 2010 ಏಷ್ಯಾಕಪ್ ಟೂರ್ನಿಯ ವೇಳೆ, ಗಂಭೀರ್ ಮತ್ತು ಪಾಕ್​​ ವಿಕೆಟ್​​ ಕೀಪರ್ ಕಮ್ರಾನ್ ಅಕ್ಮಲ್ ನಡುವೆಯೂ, ದೊಡ್ಡ ವಿವಾದವೆ ನಡೆದು ಹೋಗಿತ್ತು. ಸುಖಾಸುಮ್ಮನೆ ಅಪೀಲ್ ಮಾಡ್ತಿದ್ದ ಕಮ್ರಾನ್ ಅಕ್ಮಲ್​ಗೆ, ಗಂಭೀರ್ ಸರಿಯಾಗೇ ಬುದ್ದಿ ಕಲಿಸಿದ್ರು.

ಗಂಭೀರ್ V/S ಌಂಡ್ರೆ ನೆಲ್

2005, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದ ವೇಳೆ, ಗಂಭೀರ್ ಮತ್ತು ದಕ್ಷಿಣ ಆಫ್ರಿಕಾ ವೇಗಿ ಌಂಡ್ರೆ ನೆಲ್ ನಡುವೆ ಕಿರಿಕ್ ನಡೆದಿತ್ತು. ಬೌನ್ಸರ್​​​​ ಎಸೆದ ಬಾಲನ್ನ ಬೌಂಡ್ರಿಯತ್ತ ಬಾರಿಸಿದ ಗಂಭೀರ್​​​​​​​​ರನ್ನ ವೇಗಿ ನೆಲ್ ಕೆಕ್ಕರಿಸಿ ನೋಡುತ್ತಿದ್ರು. ಈ ವೇಳೆ ಅದೇ ಓವರ್​ನಲ್ಲಿ ಇನ್ನೊಂದು ಬೌಂಡರಿ ಸಿಡಿಸಿದಾಗ, ಇಬ್ಬರ ನಡುವೆ ಜಗಳ ಶುರುವಾಯ್ತು. ಗಂಭೀರ್ ನೋಡೋಕೆ ಶಾಂತ ಸ್ವಭಾವದ ವ್ಯಕ್ತಿ. ಆದ್ರೆ ಸಿಟ್ಟು ಬಂದ್ರೆ ರೌದ್ರಾವತಾರ ಎತ್ತುತ್ತಾರೆ. ಕದನದೋಳ್ ಗಂಭೀರ್​​ನ ಕೆಣಕಿ ಉಳಿದವರೆ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Gautam Gambhir India head coach Gautam Gambhir
Advertisment
Advertisment
Advertisment