Advertisment

ರಿಷಭ್ ಪಂತ್ ಸೇರಿ ಈ ಪ್ಲೇಯರ್​ಗಳಿಗೆ​ ಗೇಟ್​ ಪಾಸ್..​ IPL​ ತಂಡಗಳಲ್ಲಿ ದೊಡ್ಡ ಬದಲಾವಣೆ?

ಫ್ರಾಂಚೈಸಿಗಳು, ಮಿಲಿಯನ್ ಡಾಲರ್ ಟೂರ್ನಿಗೆ ಭರ್ಜರಿ ಸಿದ್ಧತೆಗಳನ್ನ ನಡೆಸಿಕೊಳ್ತಿವೆ. ಈಗಾಗಲೇ ಆಟಗಾರರ ಟ್ರೇಡಿಂಗ್, ಜೋರಾಗೆ ನಡೆಯುತ್ತಿದೆ. ಹರಾಜಿನ ದಿನಾಂಕ ಸಹ ಹತ್ತಿರವಾಗ್ತಿದಂತೆ, ಫ್ರಾಂಚೈಸಿ ಮಾಲೀಕರು ತೆರೆ ಹಿಂದೆ ಬಲಿಷ್ಠ ತಂಡ ಕಟ್ಟಲು, ಸಿಕ್ಕಾಪಟ್ಟೆ ಹೋಂವರ್ಕ್ ಮಾಡ್ತಿದ್ದಾರೆ.

author-image
Bhimappa
RISHABH_PANT
Advertisment

ಐಪಿಎಲ್ ಇದು ಕೇವಲ ಮಿಲಿಯನ್ ಡಾಲರ್ ಟೂರ್ನಿ ಮಾತ್ರಲ್ಲ, ಬ್ಯೂಸಿನೆಸ್​​​ಮೆನ್​ಗಳ ಪಾಲಿಗೆ, ಹಣ ಕೊಳ್ಳೆ ಹೊಡೆಯೋ ಅದೃಷ್ಟದ ಟೂರ್ನಿ. ಇಲ್ಲಿ ಸೂಪರ್​ಸ್ಟಾರ್ ಆಟಗಾರರಿಗಿಂತ, ಪರ್ಫಾಮ್ ಮಾಡೋ ಆಟಗಾರರಿಗೇ ಬೆಲೆ ಜಾಸ್ತಿ. ಇಲ್ಲಿ ಹೀರೋ ಝೀರೋ ಆಗಬಹುದು, ಝೀರೋ ಹೀರೋ ಕೂಡ ಆಗಬಹುದು. ಈ ಮಾತು ನಾವ್ ಯಾಕೆ ಹೇಳ್ತಿದ್ದೀವಿ ಗೊತ್ತಾ?. 

Advertisment

ಐಪಿಎಲ್ ಸೀಸನ್-19ಕ್ಕೆ, ಕೆಲವೇ ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಆಗಲೇ ಫ್ರಾಂಚೈಸಿಗಳು, ಮಿಲಿಯನ್ ಡಾಲರ್ ಟೂರ್ನಿಗೆ ಭರ್ಜರಿ ಸಿದ್ಧತೆಗಳನ್ನ ನಡೆಸಿಕೊಳ್ತಿವೆ. ಈಗಾಗಲೇ ಆಟಗಾರರ ಟ್ರೇಡಿಂಗ್, ಜೋರಾಗೆ ನಡೆಯುತ್ತಿದೆ. ಹರಾಜಿನ ದಿನಾಂಕ ಸಹ ಹತ್ತಿರವಾಗ್ತಿದಂತೆ, ಫ್ರಾಂಚೈಸಿ ಮಾಲೀಕರು ತೆರೆ ಹಿಂದೆ ಬಲಿಷ್ಠ ತಂಡ ಕಟ್ಟಲು, ಸಿಕ್ಕಾಪಟ್ಟೆ ಹೋಂವರ್ಕ್ ಮಾಡ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಲ ಶಾಕಿಂಗ್ ಸುದ್ದಿಗಳು, ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.  

ತಂಡಕ್ಕೆ ನಂಬಿಕಸ್ಥರೆ ಭಾರ.. ಐದು ಬಿಗ್​ ಸ್ಟಾರ್ಸ್ ಅಟ್ಟರ್ ಫ್ಲಾಪ್, ಇವರೇ ವಿಲನ್..!

ಲಕ್ನೋ ತಂಡದಿಂದ ರಿಷಭ್ ಪಂತ್ ಔಟ್..?

ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್​ ಮತ್ತೆ ಹರಾಜಿಗೆ ಹೋಗ್ತಾರೆ ಅನ್ನೋ ಚರ್ಚೆ, ಕ್ರಿಕೆಟ್ ವಲಯದಲ್ಲಿ ನಡೆಯುತ್ತಿದೆ. ಎಲ್​ಎಸ್​​ಜಿ ಮಾಲೀಕರ ಒತ್ತಡದಿಂದ, ಪಂತ್ ಪರ್ಫಾಮೆನ್ಸ್ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಪಂತ್, ಹೊಸ ಫ್ರಾಂಚೈಸಿಯ ಹುಡುಕಾಟದಲ್ಲಿದ್ದಾರೆ.

ಕಳೆದ 2 ವರ್ಷಗಳಲ್ಲಿ ​​​​ ಪಂತ್ ಸಾಧನೆ    

2024ರಲ್ಲಿ ಪಂತ್, 13 ಇನ್ನಿಂಗ್ಸ್​ಗಳಿಂದ 446 ರನ್​ ಕಲೆಹಾಕಿದ್ದರು. 155.40 ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದ ಪಂತ್, 40.55 ಸರಾಸರಿ ಹೊಂದಿದ್ದರು. ಇನ್ನು 2025ರಲ್ಲಿ ಪಂತ್ 13 ಇನ್ನಿಂಗ್ಸ್​ಗಳನ್ನ ಆಡಿ, 269 ರನ್​​​​​​​​​​ಗಳಿಸಿದರು. 133ರ ಸ್ಟ್ರೈಕ್​ರೇಟ್​​​​ನಲ್ಲಿ ರನ್​​ ಕಲೆಹಾಕಿದ್ದ ಪಂತ್, 24.45 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.

Advertisment

T20 ಕ್ರಿಕೆಟ್​​ನ ದಿ ಬೆಸ್ಟ್ ಸ್ಪಿನ್ನರ್ ಅಂತಾನೇ ಗುರುತಿಸಿಕೊಂಡಿರೋ​​​​ ರಶೀದ್ ಖಾನ್​ಗೂ, ಟೆನ್ಶನ್ ತಪ್ಪಿಲ್ಲ.

ಗುಜರಾತ್ ಟೈಟನ್ಸ್​ಗೆ ಬೇಡವಾದರೂ ರಷೀದ್ ಖಾನ್..?

ಗುಜರಾತ್ ಟೈಟನ್ಸ್​ಗೆ ಎಂಟ್ರಿಗೆ ಕೊಟ್ಟಾಗ ರಶೀದ್, ಸಕ್ಸಸ್ ಕಂಡಿದ್ದರು. ಆದ್ರೆ ಕಳೆದ ಎರಡು ವರ್ಷಗಳಲ್ಲಿ ರಶೀದ್, ತಂಡದಲ್ಲಿ ಇದ್ದರೂ ಇಲ್ಲದಂತಾಗಿದೆ. ಬ್ಯಾಡ್ ಫಾರ್ಮ್​​ನಿಂದ ರಶೀದ್, ಸಿಕ್ಕಾಪಟ್ಟೆ ಎಕ್ಸ್​ಪೆನ್ಸಿವ್ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬರುವ ಐಪಿಎಲ್ ಸೀಸನ್​​ಗೂ ಮುನ್ನ ಟೈಟನ್ಸ್,​ ರಶೀದ್​ರನ್ನ ರಿಲೀಸ್ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.  

ಕಳೆದ 2 ವರ್ಷಗಳಲ್ಲಿ ​​​​ ರಶೀದ್ ಸಾಧನೆ    

ಐಪಿಎಲ್ ಸೀಸನ್ 17ರಲ್ಲಿ ಈ ಅಘ್ಘಾನ್ ಸ್ಪಿನ್ನರ್, 12 ಪಂದ್ಯಗಳಲ್ಲಿ 10 ವಿಕೆಟ್​ ಕಬಳಿಸಿದ್ದರು. 8.40 ಎಕಾನಮಿಯಲ್ಲಿ ರಶೀದ್, ರನ್​ ನೀಡಿದ್ರು. ಇನ್ನು ಕಳೆದ ಐಪಿಎಲ್​ನಲ್ಲಿ ರಶೀದ್ 15 ಪಂದ್ಯಗಳನ್ನ ಆಡಿ 9 ವಿಕೆಟ್ ಪಡೆದಿದ್ರು. 9.35 ಲೆಗ್​​​​​ಸ್ಪಿನ್ನರ್​ನ ದುಬಾರಿ ಎಕಾನಮಿ. 

Advertisment

ಚೆನ್ನೈ ಸೂಪರ್​ಕಿಂಗ್ಸ್​ನ ಯಂಗ್ ಸೆನ್ಸೇಷನಲ್ ಪೇಸರ್, ಮತೀಶ ಪತಿರಣ ಹಣೆಬರಹ ಕೂಡ ಬಹುಷಃ ಚೆನ್ನಾಗಿಲ್ಲ ಅನ್ನಿಸುತ್ತದೆ.

ಸೂಪರ್​ಕಿಂಗ್ಸ್​ ಡೆನ್​​ನಲ್ಲಿ ಪತಿರಣಗೆ ಜಾಗ ಇಲ್ಲ..?

ಒಂದೆಡೆ ಸಾಧಾರಣ ಪ್ರದರ್ಶನ ಮತ್ತೊಂದೆಡೆ ಇಂಜುರಿ ಸಮಸ್ಯೆ, ಸಿಎಸ್​​ಕೆ ವೇಗಿಯನ್ನ ಬಿಟ್ಟು ಬಿಡದೆ ಕಾಡಿದೆ. ಪತಿರಣ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ, ಸಿಎಸ್​​ಕೆ ಫ್ರಾಂಚೈಸಿಗೆ ಮುಳುವಾಗಿ ಪರಿಣಮಿಸಿದೆ. ಏಷ್ಯಾಕಪ್​​ನಲ್ಲೂ ಪತಿರಣ, ಲಂಕಾ ತಂಡದಲ್ಲಿ ಕಾಣಿಸಿಕೊಳ್ಳದ ಕಾರಣ, ಚೆನ್ನೈ ಫ್ರಾಂಚೈಸಿ ಈ ಯುವ ವೇಗಿಯನ್ನ ಬಿಟ್ಟು ಮುಂದೆ ಸಾಗಲು ಹೊರಟಿದೆ.  

ಇದನ್ನೂ ಓದಿ: ದ್ವೇಷ ಮರೆತು ಮಾತಾಡಿದ ರೋಹಿತ್ ಶರ್ಮಾ.. ಹೊಸ ಕ್ಯಾಪ್ಟನ್​ ಗಿಲ್​ನ ಅಪ್ಪಿದ ಹಿಟ್​ಮ್ಯಾನ್!

Advertisment

ಕ್ಯಾಪ್ಟನ್ ಆದ ಮೇಲೆ ರಿಷಭ್ ಪಂತ್ ಬ್ಯಾಟಿಂಗ್ ಖದರ್ ಮಾಯ.. ಫ್ರಾಂಚೈಸಿಯಲ್ಲಿ ಏನಾಗ್ತಿದೆ?

ಕಳೆದ 2 ವರ್ಷಗಳಲ್ಲಿ ​​​​ ಪತಿರಣ ಸಾಧನೆ    

2024, ಪತಿರಣ ಪಾಲಿಗೆ ಲಕ್ಕಿಯಾಗಿತ್ತು. ಆ ಸೀಸನ್​ನಲ್ಲಿ ಪತಿರಣ 6 ಪಂದ್ಯಗಳಿಂದ 13 ವಿಕೆಟ್ ಬೇಟೆಯಾಡಿದರು. ಕೇವಲ 7.68ರ ಎಕಾನಮಿಯಲ್ಲಿ ರನ್​ ನೀಡಿದರು. ಆದ್ರೆ 2025ರ ಸೀಸನ್​​ನಲ್ಲಿ ಪತಿರಣ, 12 ಪಂದ್ಯಗಳಿಂದ ಪಡೆದಿದ್ದು 13 ವಿಕೆಟ್ ಮಾತ್ರ. 10ಕ್ಕಿಂತ ಹೆಚ್ಚು ರನ್​ ನೀಡಿ, ದುಬಾರಿ ಬೌಲರ್ ಎನಿಸಿಕೊಂಡಿದ್ದರು. 

ಫ್ರಾಂಚೈಸಿ ಮಾಲೀಕರು, ಮುಂಬರುವ ಐಪಿಎಲ್ ಸೀಸನ್​​ನಲ್ಲಿ ಕೋರ್​​ ಟೀಮ್​ ಉಳಿಸಿಕೊಳ್ಳಲು ಮುಂದಾಗಿರೋದು ನಿಜ. ಆದ್ರೆ ಕೆಲ ಸೂಪರ್​ಸ್ಟಾರ್ ಆಟಗಾರರನ್ನ ತಂಡದಿಂದ ರಿಲೀಸ್ ಮಾಡಲು ಮುಂದಾಗಿರೋದು, ಅಷ್ಟೇ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IPL 2026 auction IPL Rishabh Pant
Advertisment
Advertisment
Advertisment