/newsfirstlive-kannada/media/media_files/2025/10/15/rohit_sharma_gill-2025-10-15-20-09-55.jpg)
ನಯಾ ಕ್ಯಾಪ್ಟನ್ ಶುಭ್​ಮನ್ ಗಿಲ್​ ನೇತೃತ್ವದಲ್ಲಿ ಟೀಮ್ ಇಂಡಿಯಾದ ಎಲ್ಲ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಲೆಜೆಂಡರಿ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಬಿಸಿಸಿಐ ಶುಭ್​ಮನ್​ ಗಿಲ್ ಅವರಿಗೆ ವಹಿಸಿದೆ. ಸದ್ಯ ಈ ಇಬ್ಬರು ಆಟಗಾರರು ಏರ್​ಪೋರ್ಟ್​ನಲ್ಲಿ ಮುಖಾಮುಖಿ ಆಗಿದ್ದು ಎಲ್ಲವನ್ನು ಮರೆತು ಹಿಟ್​ಮ್ಯಾನ್​ ರೋಹಿತ್ ಶರ್ಮಾ, ಶುಭ್​ಮನ್​ ಗಿಲ್ ಜೊತೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ತಂಡದ ಎಲ್ಲ ಆಟಗಾರರು ದೆಹಲಿ ಏರ್​ಪೋರ್ಟ್​ನಿಂದ ಆಸ್ಟ್ರೇಲಿಯಾಕ್ಕೆ ವಿಮಾನದ ಮೂಲಕ ತೆರಳಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯ ನಂತರ ಮೊದಲ ಬಾರಿಗೆ ಕೊಹ್ಲಿ ಮತ್ತು ರೋಹಿತ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಏರ್​ಪೋರ್ಟ್​ನಲ್ಲಿ ಬ್ಯಾಗ್ ಸಮೇತ ರೋಹಿತ್ ಶರ್ಮಾ ನಿಂತುಕೊಂಡಿರುವಾಗ ಶುಭ್​ಮನ್ ಗಿಲ್ ಅವರೇ ಬಂದು ಮಾತನಾಡಿಸಿದ್ದಾರೆ. ಈ ವೇಳೆ ಸಹಜ ಗುಣದಿಂದಲೇ ರಿಯಾಕ್ಟ್ ಆದ ರೋಹಿತ್ ಶರ್ಮಾ, ಹಾಯ್ ಬ್ರದರ್.. ಹೇಗಿದ್ದೀಯಾ.. ಎಂದು ಗಿಲ್​ರನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಬಸ್​ ಬಳಿಗೆ ಹೋಗುವಾಗಲೂ ರೋಹಿತ್ ಶರ್ಮಾ ಕೈ ಮಾಡಿದರು. ಬಸ್ ಒಳಗೆ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್​ ಗಿಲ್ ಇಬ್ಬರು ಪರಸ್ಪರ ಶುಭಾಶಯ ಕೋರಿದರು.
ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ಮೂರು ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಯಲ್ಲಿ ಮಾತ್ರ ಭಾಗಿಯಾಗಲಿದ್ದಾರೆ. ಅಕ್ಟೋಬರ್​ 19 ರಂದು ಮೊದಲ ಏಕದಿನ ಪಂದ್ಯ ನಡೆದರೆ, ಅಕ್ಟೋಬರ್​ 23, 25 ರಂದು ಎರಡು ಮತ್ತು ಮೂರನೇ ಒಡಿಐ ಮ್ಯಾಚ್​ಗಳು ನಡೆಯಲಿವೆ. ಇನ್ನು ಟ್ವಿ20 ಸರಣಿ ಅಕ್ಟೋಬರ್​ 29 ರಿಂದ ನವೆಂಬರ್​ 8ರ ವರೆಗೆ ನಡೆಯಲಿವೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಆಟಗಾರರು ಎಂದರೆ ಕ್ಯಾಪ್ಟನ್ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಸಿದ್ಧ್ ಕೃಷ್ಣ. ಇವರೆಲ್ಲರೂ ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದಾರೆ.
𝙀𝙣 𝙧𝙤𝙪𝙩𝙚 𝘿𝙤𝙬𝙣 𝙐𝙣𝙙𝙚𝙧 ✈️
— BCCI (@BCCI) October 15, 2025
Of familiar faces and special reunions as #TeamIndia depart for the Australia challenge 😍#AUSvINDpic.twitter.com/ElV3OtV3Lj
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ