/newsfirstlive-kannada/media/media_files/2025/10/23/priyank_kharge-2025-10-23-08-26-14.jpg)
ಇದು ಕಾಂಗ್ರೆಸ್- ಕೇಸರಿ ಪಡೆ ನಡುವಿನ ಸಂಘರ್ಷ. ಚಿತ್ತಾಪುರದಲ್ಲಿ ಪಥಸಂಚಲನ ವಿಚಾರ ಚಿತ್ತ ಚಂಚಲ ಮಾಡಿದೆ. ಒಂದ್ಕಡೆ ಆರ್​ಎಸ್​ಎಸ್ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ಕೋರಿದೆ. ಮತ್ತೊಂದೆಡೆ ಅಂದೇ ನಮಗೂ ಅನುಮತಿ ನೀಡಿ ಅಂತ ದಲಿತ ಸಂಘಟನೆ ಮನವಿ ಮಾಡಿದೆ. ಚಿತ್ತಾಪುರದಲ್ಲಿ ದಲಿತ ಸಂಘಟನೆಗಳು ವರ್ಸಸ್ ಆರ್​ಎಸ್​ಎಸ್​ ಎಂಬ ಬೆಳವಣಿಗೆ ಸೃಷ್ಟಿಯಾಗಿದೆ.
ಚಿತ್ತಾಪುರದಲ್ಲಿ ಆರ್​ಎಸ್​ಎಸ್ ಪಥಸಂಚಲನ ವಿವಾದ ತೀವ್ರ!
ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2ರ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಮುಂದುವರಿದಿದೆ. ಸಚಿವ ಪ್ರಿಯಾಂಕ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಆರ್​ಎಸ್​ಎಸ್ ಪಥ ಸಂಚಲನಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ದಲಿತ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಹೀಗಾಗಿ ಆರ್​ಎಸ್​ಎಸ್ ವರ್ಸಸ್​ ದಲಿತ ಸಂಘಟನೆಗಳ ಮಧ್ಯೆ ಪಥ ಸಂಚಲನ ಸಮರ ಶುರುವಾಗಿದ್ದು, ಜಿಲ್ಲಾಡಳಿತದ ತೀರ್ಮಾನವೇ ಈಗ ಕುತೂಹಲಕ್ಕೆ ಕಾರಣವಾಗಿದೆ.
/filters:format(webp)/newsfirstlive-kannada/media/media_files/2025/10/19/siddaramaiah-4-2025-10-19-20-03-23.jpg)
ಈಗಾಗಲೇ ಕೋರ್ಟ್​ ಸೂಚನೆಯಂತೆ, ನವೆಂಬರ್ 2ರಂದು ಪಥಸಂಚಲನ ನಡೆಸಲು ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಹಾಗೂ ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಕೋರ್ಟ್​ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು. ಈ ಮಧ್ಯೆ ನವೆಂಬರ್ 2ರಂದೇ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಆರ್​ಎಸ್​ಎಸ್ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಪ್ರಿಯಾಂಕ್​ ಖರ್ಗೆ, ವಾತಾವರಣ ಚೆನ್ನಾಗಿದ್ರೆ ಪರೇಡ್ ಮಾಡಲಿ, ಸರಿಯಿಲ್ಲ ಅಂದ್ರೆ ಹೇಗೆ ಮಾಡೋಕೆ ಸಾಧ್ಯ?. ಯಾವುದೇ ಸಂಘಟನೆಗಳು ಕಾರ್ಯಕ್ರಮ ಮಾಡಿದ್ರೆ ಮಾಹಿತಿ ಕೊಡಬೇಕು, ನಾವು ಇಷ್ಟು ಜನ ಹೋಗ್ತೇವೆ ಅಂತ ಲೈನ್ ಒನ್ ಲೈನ್ ಟು ಕೊಡಬೇಕು ಎಂದಿದ್ದಾರೆ.
‘ನಾವು ಮೊದಲಿನಿಂದಲೂ ಟಾರ್ಗೆಟ್’
ಅವರ ಕಡೆಯ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 251 ಕಡೆ ಕಾನೂನು ಬಾಹಿರವಾಗಿ ಮಾಡಬೇಕು ಅಂತ ಏನು ಇದೆ?. ಅಕ್ಟೋಬರ್ 19ಕ್ಕೆ ಪಥಸಂಚಲನ ಆಗಿಲ್ಲ. 500, 600 ಜನ ದೊಣ್ಣೆ ತೆಗೆದುಕೊಂಡು ಹೋದರೆ ಯಾರಾದರೂ ಒಪ್ಪುತ್ತಾರಾ?. ಅನುಮತಿ ಕೇಳಬೇಕಾ, ಮಾಹಿತಿ ಕೊಡಬೇಕಾ?.
ಪ್ರಿಯಾಂಕ್ ಖರ್ಗೆ, ಸಚಿವ
ನ್ಯಾಯ ಸಿಗುವ ವಿಶ್ವಾಸವಿದೆ ಎಂದ ಮಾಜಿ ಡಿಸಿಎಂ
ನ.2ರಂದು ಪಥಸಂಚಲನ ವಿಚಾರಕ್ಕೆ ಪ್ರತಿಕ್ರಿಯಿಸಿರೋ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಸರ್ಕಾರದ ಮುಂದೆ ಹೋಗ್ತೀವಿ. ಸಂವಿಧಾನದಲ್ಲಿ ಅವಕಾಶ ಇದೆ. ನಮ್ಮ ಹಕ್ಕಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ನ.2ರಂದು ಪಥಸಂಚಲನ ಮಾಡಬೇಕು ಎಂದು ನ್ಯಾಯಾಲಯದ ತಿಳಿಸಿದ್ದಾರೆ. ಇದು ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ಆಗುತ್ತಿದೆ. ಕೋರ್ಟ್​ ತಿಳಿಸಿದ್ದನ್ನ ಸರ್ಕಾರದ ಬಳಿ ಹೋಗಿ ನಾವು ಮನವಿ ಮಾಡುತ್ತೇವೆ. ಇದು ಉದ್ದೇಶ ಪೂರ್ವಕವಾಗಿ ಅಡಚಣೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ನ್ಯಾಯ ಸಿಗಲಿಲ್ಲ ಎಂದರೆ ಕೋರ್ಟ್​ ಮೊರೆ ಹೋಗುತ್ತೇವೆ. ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇದೆ.
ಡಾ.ಸಿಎನ್.ಅಶ್ವತ್ಥ್ ನಾರಾಯಣ್, ಮಾಜಿ ಡಿಸಿಎಂ
ಇದನ್ನೂ ಓದಿ: ರಾಜ್ಯದ 12 ಪ್ರಮುಖ ನದಿಗಳ ನೀರು ಕಲುಷಿತ! : ಕಾವೇರಿ ನದಿ ನೀರು ಕುಡಿಯಲು ಯೋಗ್ಯವಲ್ಲ!
/filters:format(webp)/newsfirstlive-kannada/media/media_files/2025/10/23/ashwath_narayana_rss-2025-10-23-08-27-19.jpg)
‘ವ್ಯಕ್ತಿ ಸ್ವಾತಂತ್ರ್ಯವಿದೆ.. ನಿರ್ಬಂಧ ಹೇರೋದು ಸಂವಿಧಾನ ವಿರೋಧಿ’
ಇತ್ತ ಮಂತ್ರಾಲಯದ ರಾಯರ ಮಠದ ಸುಬುದೇಂದ್ರ ತೀರ್ಥ ಸ್ವಾಮೀಜಿ ಆರ್​​ಎಸ್​ಎಸ್​ ಪರ ಬ್ಯಾಟ್ ಬೀಸಿದ್ದಾರೆ. ಆರ್​ಎಸ್​ಎಸ್​​ ರಾಜಕೀಯ ಪಕ್ಷವಲ್ಲ, ದೇಶ ಸಂಘಟನೆ. ಆರ್​ಎಸ್​ಎಸ್​​ನಲ್ಲಿ ಭಾಗಿಯಾಗೋದು ಅವರವರ ವ್ಯಕ್ತಿ ಸ್ವಾತಂತ್ರ್ಯ. ನಿರ್ಬಂಧ ಹೇರೋದು ಸಂವಿಧಾನ ವಿರೋಧಿ ಎಂದಿದ್ದಾರೆ.
ಪಥಸಂಚಲನ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಕೊಟ್ಟಿದೆ. ಈ ಮಧ್ಯೆ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ಸಿಗುತ್ತಾ, ಇಲ್ವಾ ಅನ್ನೋದನ್ನ ಜಿಲ್ಲಾಡಳಿತವೇ ನಿರ್ಧರಿಸಲಿದೆ. ಒಂದ್ವೇಳೆ ಸರ್ಕಾರ ಪಥಸಂಚಲನಕ್ಕೆ ಅನುವು ಮಾಡಿ ಕೊಡದೆ ಹೋದರೆ ನ್ಯಾಯಲಯವೇ ಪಥಸಂಚಲನ ವಿಚಾರದಲ್ಲಿ ಅಂತಿಮ ನಿರ್ಣಯ ಘೋಷಣೆ ಮಾಡಲಿದೆ. ಹಾಗಾಗಿ ಅಕ್ಟೋಬರ್ 24ರ ನ್ಯಾಯಾಲಯದ ವಿಚಾರಣೆಯ ಮೇಲೆ ಇದೀಗ ಎಲ್ಲರ ಚಿತ್ತ ಕೂಡ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us