/newsfirstlive-kannada/media/media_files/2025/10/10/siddaramaiah-2025-10-10-22-56-19.jpg)
ಸಿಎಂ ಸಿದ್ದರಾಮಯ್ಯ ನೀಡಿದ ಅದೊಂದು ಸುಳಿವು ಹಸ್ತಪಡೆಯಲ್ಲಿ ಕ್ರಾಂತಿ ಗೀತೆ ಹಾಡುವಂತೆ ಮಾಡಿದೆ. ಎರಡೂವರೆ ವರ್ಷದ ಹೊಸ್ತಿಲಲ್ಲೇ ಸಂಪುಟ ಪುನಾರಚನೆ ಗುಸುಗುಸು, ಸಂಚನ ಸೃಷ್ಟಿಸಿದೆ. ಹಾಲಿ ಸಚಿವರಿಗೆ ಟೆನ್ಷಕ್​ ಹೆಚ್ಚಿಸಿದ್ರೆ, ಹೊಸಬರಲ್ಲಿ ಆಸೆ ಚುಗುರೊಡೆಯುವಂತೆ ಮಾಡಿದೆ. ಆದ್ರೆ ನವೆಂಬರ್​ ಕ್ರಾಂತಿಯನ್ನೇ ಸರ್ಕಾರದ ವಿರುದ್ಧ ಅಸ್ತ್ರ ಮಾಡಿಕೊಳ್ಳಲು ಕೇಸರಿ ಪಡೆ ದಲಿತ ಸಿಎಂ ಕಡ್ಡಿಯನ್ನು ಗೀರಿದೆ.
ರಾಜ್ಯ ಕಾಂಗ್ರೆಸ್​ನಲ್ಲಿ ನವೆಂಬರ್​ ಕ್ರಾಂತಿಯ ಕಹಳೆ ಮೊಳಗಿದೆ. ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚಣೆ ಸುಳಿವು ಕೊಟ್ಟಿದ್ದು. ಸಚಿವರಿಗೆ ಡಿನ್ನರ್​ ಆಯೋಜನೆ ಮಾಡಿರೋದು ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದೆ. ಇದರ ನಡುವೆ ಸಿದ್ದು ಬಣದ ಮೂವರು ಸಚಿವರ ರಹಸ್ಯ ಸಭೆ. ಕಾಂಗ್ರೆಸ್​ ಪಾಳಯದಲ್ಲಿ ಕ್ರಾಂತಿಯ ಸದ್ದನ್ನು ಮತ್ತಷ್ಟು ಜೋರಾಗುವಂತೆ ಮಾಡಿದೆ.
ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳಬೇಕು
ಸಂಪುಟ ಸರ್ಜರಿಯ ಸುಳಿವು ನೀಡಿ, ಸೋಮವಾರ ಎಲ್ಲ ಸಚಿವರಿಗೂ ಸಿಎಂ ಡಿನ್ನರ್​ ಮೀಟಿಂಗ್​ ಆಹ್ವಾನ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದು ಬಣದ ಮೂವರು ಸಚಿವರಾದ ಸತೀಶ್​ ಜಾರಕಿಹೊಳಿ, ಹೆಚ್​.ಸಿ.ಮಹದೇವಪ್ಪ, ಡಾ.ಜಿ ಪರಮೇಶ್ವರ್ ಬೆಳಗ್ಗೆ ದಿಢೀರ್​ ರಹಸ್ಯ ಮಾತುಕತೆ ನಡೆಸಿದ್ದು, ಕುತೂಹಲ ಹೆಚ್ಚಿಸಿದೆ. ಆದ್ರೆ ಗೃಹಸಚಿವ ಪರಮೇಶ್ವರ್​ ಅದೊಂದು ಕ್ಯಾಶುಯಲ್​ ಮೀಟಿಂಗ್​ ಅಷ್ಟೇ. ಡಿನ್ನರ್​ ಮೀಟಿಂಗ್​​ ಕೂಡ ವಿಶೇಷತೆ ಏನೂ ಇಲ್ಲ. ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳ್ಬೇಕೆಂದು ಜಾರಿಕೊಂಡಿದ್ದಾರೆ. ಇನ್ನು ಸಂತೋಷ್​ ಲಾಡ್​ ಕೂಡ ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ ರಚನೆ ಸಹಜ ಪ್ರತಿಕ್ರಿಯೆ. ಹೈ ನಾಯಕರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಸಂಪುಟ ಪುನರಚನೆ, ಯಾರನ್ನು ತೆಗೆದುಕೊಳ್ಳುತ್ತಾರೆ, ಯಾರನ್ನು ಕೈ ಬಿಡುತ್ತಾರೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಡಿನ್ನರ್ ಕರೆಯುವುದಕ್ಕೆ ಏನು ವಿಶೇಷತೆ ಹೇಳಿ. ಊಟ ಹಾಕಿದ್ದಾರೆ ಅಷ್ಟೇ. ಅಜೆಂಡಾ ಏನು ಇಲ್ಲ.
ಡಾ.ಜಿ.ಪರಮೇಶ್ವರ್, ಗೃಹಸಚಿವ
ಸಚಿವ ಸ್ಥಾನಕ್ಕೆ ಟವೆಲ್​ ಹಾಕಿದ್ರಾ ಸಿಎಂ ಕಾನೂನು ಸಲಹೆಗಾರ?
ಸಂಪುಟ ಪುನಾರಚನೆಯಾದ್ರೆ 12ಕ್ಕೂ ಹೆಚ್ಚು ಸಚಿವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಮಣೆ ಹಾಕ್ಬಹುದು ಎಂಬ ಚರ್ಚೆಯೂ ಕಾಂಗ್ರೆಸ್​ನಲ್ಲಿ ನಡೀತಿದೆ. ಇದರಿಂದ ಹೊಸಬರ ಮನದಲ್ಲಿ ಸಚಿವ ಸ್ಥಾನದ ಆಸೆ ಚಿಗುರೊಡೆದಿದೆ. ಸಂಪುಟ ಪುನಾರಚನೆಯಾದ್ರೆ ಈ ಬಾರಿ ಕೊಡಗು ಜಿಲ್ಲೆಗೂ ಸ್ಥಾನ ಕೇಳ್ತೇವೆ ಎನ್ನುವ ಮೂಲಕ, ಸಿಎಂ ಕಾನೂನು ಸಲಹೆಗಾರ ಎ.ಎಸ್​ ಪೊನ್ನಣ್ನ ಪರೋಕ್ಷವಾಗಿ ಮನದೊಳಗಿನ ಆಸೆ ಬಿಚ್ಚಿಟ್ಟಿದ್ದಾರೆ.
ಸಚಿವ ಸ್ಥಾನ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಪುನರ್ ರಚನೆ ಪ್ರಾರಂಭ ಆಗಿದ್ದಾಗ ಕೇಳಬೇಕು. ನಮ್ಮ ಜಿಲ್ಲಾಧ್ಯಕ್ಷರು ಇಲ್ಲೇ ಇದ್ದಾರೆ. ಅವರೇ ಕೇಳಬೇಕು.
ಎಎಸ್​ ಪೊನ್ನಣ್ಣ, ಸಿಎಂ ಕಾನೂನು ಸಲಹೆಗಾರ
ಇದನ್ನೂ ಓದಿ: ಸಚಿನ್, ಕಿಂಗ್ ಕೊಹ್ಲಿ ರೆಕಾರ್ಡ್​ ಬ್ರೇಕ್ ಮಾಡಿದ ಜೈಸ್ವಾಲ್.. ಈ ದಾಖಲೆ ಮಾಡಿದ ಮೊದಲ ಭಾರತೀಯ!
ಕಮಲ ಪಡೆಗೆ ಅಸ್ತ್ರವಾದ ಕಾಂಗ್ರೆಸ್​ ನವೆಂಬರ್​ ಕಾಂತ್ರಿ
ಸಿಎಂ ಸಿದ್ದು ನಡೆಯಿಂದ ಕಾಂಗ್ರೆಸ್​ನಲ್ಲಿ ನವೆಂಬರ್​ ಕಾಂತ್ರಿಯ ಸದ್ದು ಕ್ಷಣಕ್ಷಣಕ್ಕೂ ಜೋರಾಗ್ತಿದೆ. ಆದ್ರೆ ಬಿಜೆಪಿಗೆ ಇದೇ ಅಸ್ತ್ರವಾಗಿದೆ. ಸಿದ್ದು ಬಣದ ಆಪ್ತ ಸಚಿವರು ನಡೆಸಿದ ರಹಸ್ಯ ಸಭೆಗೆ ದಲಿತ ಸಿಎಂ ಚರ್ಚೆಯ ಲೇಪನ ಮಾಡುವ ಮೂಲಕ ಛಲವಾದಿ ನಾರಾಯಣಸ್ವಾಮಿ, ಕ್ರಾಂತಿ ಕಿಡಿ ಜೋರಾಗಲು ತುಪ್ಪ ಸುರಿದಿದ್ದಾರೆ.
ಯಾಱರ ಅನಿಸಿಕೆ ಅದೇನೇನು ಇದ್ಯೋ.. ಆದ್ರೆ ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಸುಳಿವು ಸಂಚಲನವನ್ನೇ ಸೃಷ್ಟಿಸಿದೆ. ಈ ಎಲ್ಲ ಗೊಂದಲಕ್ಕೂ ಮುಂದಿನ ತಿಂಗಳು ಉತ್ತರ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ