Advertisment

ಸಚಿನ್, ಕಿಂಗ್ ಕೊಹ್ಲಿ ರೆಕಾರ್ಡ್​ ಬ್ರೇಕ್ ಮಾಡಿದ ಜೈಸ್ವಾಲ್.. ಈ ದಾಖಲೆ ಮಾಡಿದ ಮೊದಲ ಭಾರತೀಯ!

ಕ್ರಿಕೆಟ್​ ಇತಿಹಾಸದಲ್ಲಿ ಡಾನ್ ಬ್ರಾಡ್ಮನ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್ ಹಾಗೂ ಜಾವೇದ್ ಮಿಯಾಂದಾದ್ ಅವರಂತಹ ಸಾಲಿನಲ್ಲಿ ಜೈಸ್ವಾಲ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

author-image
Bhimappa
Yashasvi_Jaiswal_Bat
Advertisment

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಟೆಸ್ಟ್​ನ ಮೊದಲ ದಿನದಾಟದಲ್ಲೇ 150 ರನ್ ಬಾರಿಸೋ ಮೂಲಕ ಲೆಜೆಂಡರಿ ಬ್ಯಾಟರ್​ಗಳ ಸ್ಥಾನದಲ್ಲಿ ನಿಂತಿದ್ದಾರೆ. 

Advertisment

ಯಶಸ್ವಿ ಜೈಸ್ವಾಲ್ ಅವರು ಓಪನರ್ ಆಗಿ 5ನೇ ಬಾರಿಗೆ 150 ಪ್ಲಸ್​ ರನ್​ಗಳನ್ನು ಟೆಸ್ಟ್​ನ ಮೊದಲ ದಿನವೇ ಬಾರಿಸಿದ್ದಾರೆ. ಅದು 24 ವರ್ಷದ ಒಳಗಿನ ಯುವ ಆಟಗಾರನಾಗಿ ಎನ್ನುವುದು ಗಮನಾರ್ಹ. ಕ್ರಿಕೆಟ್​ ಇತಿಹಾಸದಲ್ಲಿ ಡಾನ್ ಬ್ರಾಡ್ಮನ್ ಅವರು ಇದೇ ವಯಸ್ಸಿನಲ್ಲಿ 8 ಬಾರಿ 150 ಪ್ಲಸ್​ ರನ್ ಬಾರಿಸಿದ್ದರು. ಇದೀಗ ಸಚಿನ್ ತೆಂಡೂಲ್ಕರ್, ಗ್ರೇಮ್ ಸ್ಮಿತ್ ಹಾಗೂ ಮಿಯಾಂದಾದ್ ಅವರನ್ನು ಹಿಂದಿಕ್ಕುವ ಮೂಲಕ ಜೈಸ್ವಾಲ್ ಮೊದಲ ಭಾರತೀಯ ಎಂಬ ಖ್ಯಾತಿ ಪಡೆದಿದ್ದಾರೆ. 

ಇದನ್ನೂ ಓದಿ: ಖ್ಯಾತ ಬಾಡಿ ಬಿಲ್ಡರ್, Tiger​- 3 ಸಿನಿಮಾದಲ್ಲಿ ನಟಿಸಿದ್ದ ವರಿಂದರ್ ಸಿಂಗ್ ಇನ್ನಿಲ್ಲ.. ಏನಾಗಿತ್ತು?

Yashasvi_Jaiswal_New

ಕ್ರಿಕೆಟ್​ ಇತಿಹಾಸದಲ್ಲಿ ಡಾನ್ ಬ್ರಾಡ್ಮನ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್ ಹಾಗೂ ಜಾವೇದ್ ಮಿಯಾಂದಾದ್ ಅವರಂತಹ ಸಾಲಿನಲ್ಲಿ ಜೈಸ್ವಾಲ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಓಪನರ್​ಗಳಾಗಿ ದಾಖಲೆ ಬರೆದಿದ್ದ ಹೆಡ್​ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಅವರ ದಾಖಲೆಯನ್ನು ಜೈಸ್ವಾಲ್ ಉಡೀಸ್ ಮಾಡಿದ್ದಾರೆ. 

Advertisment

ಇನ್ನುಳಿದಂತೆ ವಿರೇಂದ್ರ ಸೆಹ್ವಾಗ್ 14 ಬಾರಿ ಹಾಗೂ ಸುನಿಲ್ ಗವಾಸ್ಕರ್ ಅವರು 11 ಬಾರಿ 150 ಪ್ಲಸ್ ರನ್​ಗಳನ್ನು ಗಳಿಸಿದ್ದಾರೆ. ಜೈಸ್ವಾಲ್ ಅವರು ಟೆಸ್ಟ್​ನ ಮೊದಲ ದಿನವೇ 150 ಪ್ಲಸ್​ ರನ್​ಗಳನ್ನು ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಈ ಮೊದಲು ಇಂಗ್ಲೆಂಡ್​ ಜೊತೆ 179, 151 (ವಿಶಾಖಪಟ್ಟಣಂ), ಶ್ರೀಲಂಕಾ ಜೊತೆ 156 ರನ್ ಗಳಿಸಿದ್ದಾರೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs WI Yashasvi Jaiswal
Advertisment
Advertisment
Advertisment