/newsfirstlive-kannada/media/media_files/2025/10/25/cm_siddaramaiah_st_somashekar-2025-10-25-07-52-12.jpg)
ರಾಜ್ಯ ರಾಜಕೀಯದಲ್ಲಿ ಸದ್ಯ ಕ್ರಾಂತಿಯದ್ದೇ ಸದ್ದು. ಆ ಸದ್ದು ನವಂಬರ್​​ನಲ್ಲಿ ಇನ್ನೇನು ಜೋರಾಗ್ಬೇಕು ಅನ್ನೋ ಹೊತ್ತಲ್ಲೇ ಸಿಎಂ ಪುತ್ರ ಯತೀಂದ್ರ ಕೊಟ್ಟ ಡೋಸ್ ಹಸ್ತಪಾಳಯನ್ನು ಶೇಕ್​ ಮಾಡಿಬಿಟ್ಟಿದೆ. ಜೊತೆಗೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಬಣದ ನಾಯಕರ, ಶಾಸಕರ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ತಮ್ಮ ಮಗನ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಹಾಗಲ್ಲ, ಹೀಗೆ ಅಂತ ಸಮರ್ಥನೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನು ಯತೀಂದ್ರನನ್ನ ಕೇಳಿದೆ. ಸೈದ್ದಾಂತಿಕವಾಗಿ ಮಾತ್ರ ಅಂತ ಹೇಳಿದ್ದೇನೆ ಅಂದರು. ಇಂಥವರೇ ಸಿಎಂ ಆಗಬೇಕು ಅಂತ ಹೇಳಿಲ್ಲ ಎಂದು ಪುತ್ರನ ಮಾತಿಗೆ ಸಮಜಾಯಿಷಿ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/10/24/cm-siddu-and-mb-patil-n-dks-2025-10-24-17-52-19.jpg)
ಯತೀಂದ್ರನ ನಾನು ಏನಂತ ಹೇಳಿದೆ ಅಂತ ಕೇಳಿದೆ. ಅದಕ್ಕೆ ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಎಂದು ಹೇಳಿದ. ಇಂತವರೇ ಸಿಎಂ ಆಗಬೇಕು ಎಂದು ಹೇಳಿಲ್ಲ ಎಂದು ಹೇಳಿದ.
ಸಿದ್ದರಾಮಯ್ಯ, ಸಿಎಂ
ಡಿಸಿಎಂ ಡಿಕೆಶಿ ಬಣದ ವಿರುದ್ಧ ಮಾಜಿ ಸಚಿವ ರಾಜಣ್ಣ ನಿಗಿನಿಗಿ
ಸಿಎಂ ಪುತ್ರ ಯತೀಂದ್ರನ ಉತ್ತರಾಧಿಕಾರಿ ಹೇಳಿಕೆಗೆ ಮಾಜಿ ಸಚಿವ ಕೆ.ಎನ್​.ರಾಜಣ್ಣ ಸಹಮತ ವ್ಯಕ್ತಪಡಿಸಿದ್ದು, ಅವರು ಹೇಳಿರೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಹಾಗೂ ಡಿಕೆ ಶಿವಕುಮಾರ್ ಬಣಕ್ಕೂ ಟಾಂಗ್​ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯರ ನಂತರ ಅಹಿಂದ ಚಳುವಳಿಯನ್ನ ಮುಂದುವರೆಸಿಕೊಂಡು ಹೋಗುವುದಕ್ಕೆ ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ. ಸತೀಶ್ ಜಾರಕಿಹೊಳಿ ನಾಯಕತ್ವ ವಹಿಸಬೇಕು ಎಂದು ಹೇಳಿರುವುದರಲ್ಲಿ ತಪ್ಪು ಏನಿದೆ?. ಆ ಮಾತಿಗೆ ನನ್ನದು ಸಹಮತ ಇದೆ. ಮೇದಾವಿಗಳ ತೀರ್ಮಾನ ನಡೆಯಲಿ.
ಕೆ.ಎನ್​.ರಾಜಣ್ಣ, ಮಾಜಿ ಸಚಿವ
ಇದನ್ನೂ ಓದಿ: ಬಸ್​ಗೆ ಬೆಂಕಿ ಬಿದ್ದು 22 ಜನ ಸಜೀವ ದಹನ ಘಟನೆ.. 6 ಪ್ರಯಾಣಿಕರ ಪ್ರಾಣ ಉಳಿಸಿದ ನವೀನ್!
/filters:format(webp)/newsfirstlive-kannada/media/media_files/2025/10/22/yathindra-siddaramaiah-1-2025-10-22-16-48-49.jpg)
ಯತೀಂದ್ರ ಬಾಂಬ್​ ಬೆನ್ನಲ್ಲೇ ‘ಕುರ್ಚಿ’ ಕದನದ ಕ್ಲೈಮ್ಯಾಕ್ಸ್ ಫಿಕ್ಸ್​!
ಯತೀಂದ್ರ ಹೇಳಿಕೆ ದೊಡ್ಡ ಸಂಚಲನ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಸಿಎಂ, ಡಿಕೆ ಶಿವಕುಮಾರ್ ಮಧ್ಯೆ ನಡೀತಿರೋ ಕುರ್ಚಿ ಫೈಟ್​​ಗೆ ಮುಹೂರ್ತವಂತೂ ಫಿಕ್ಸ್​ ಆಗಿರೋ ಬಿಗ್​ ಎಕ್ಸ್​​ಕ್ಲೂಸಿವ್​ ಸುದ್ದಿ ನ್ಯೂಸ್​​ಫಸ್ಟ್​​ಗೆ ಸಿಕ್ಕಿದೆ. ಬಿಹಾರ ಎಲೆಕ್ಷನ್​ ಬಳಿಕ ರಾಜ್ಯದಲ್ಲಿ ಬದಲಾವಣೆ ಫಿಕ್ಸ್​ ಎನ್ನಲಾಗ್ತಿದ್ದು, ನ.15ರಿಂದ 20ರೊಳಗೆ ಸಿಎಂ, ಡಿ.ಕೆ ಶಿವಕುಮಾರ್ ಭವಿಷ್ಯ ನಿರ್ಧಾರ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನವೆಂಬರ್​ 15ರಂದು ದೆಹಲಿಯತ್ತ ಸಿಎಂ ಸಿದ್ದರಾಮಯ್ಯ ದೌಡಾಯಿಸಲಿದ್ದು, ಸಂಪುಟ ವಿಸ್ತರಣೆಯೋ? ಪುನರ್ ​ರಚನೆಯೋ.. ಸಿಎಂ ಸ್ಥಾನದ ಬದಲಾವಣೆಯೋ ಅನ್ನೋದು ನಿರ್ಧಾರವಾಗಲಿದೆ. ಸದ್ಯ ಸಿಎಂ, ಡಿ.ಕೆ ಶಿವಕುಮಾರ್ ಬಣದ ನಾಯಕರಲ್ಲಿ ಚಟುವಟಿಕೆ ಗರಿಗೆದರಿದೆ.
ನವೆಂಬರ್​​ ಹತ್ತಿರವಾಗ್ತಿದ್ದಂತೆ ರಾಜ್ಯ ಕಾಂಗ್ರೆಸ್​ನಲ್ಲಿ ಕ್ರಾಂತಿಯ ಕಿಡಿ ಜ್ವಾಲೆಯಾಗಿ ಪ್ರಜ್ವಲಿಸುವ ಲಕ್ಷಣ ಗೋಚರಿಸಿದ್ದು, ಇದನ್ನು ಕಾಂಗ್ರೆಸ್​ ಹೈಕಮಾಂಡ್​ ಯಾವ ರೀತಿ ತಣ್ಣಗಾಗಿಸುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us