/newsfirstlive-kannada/media/media_files/2025/12/19/siddaramaiah-session-2025-12-19-11-34-22.jpg)
ಬೆಳಗಾವಿ: ನನ್ನ ಪ್ರಕಾರ ಹೈಕಮಾಂಡ್, ನನ್ನ ಪರವಾಗಿಯೇ ಇರೋದು. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳಿದರೆ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ಎರಡೂವರೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಇವತ್ತು ಪ್ರಶ್ನೆಗಳಿಗೆ ಉತ್ತರಿಸುತ್ತ ಸುದೀರ್ಘ ಭಾಷಣ ಮಾಡಿದರು. ಆಗ ಬಿಜೆಪಿ ನಾಯಕರು ಮಧ್ಯ ಪ್ರವೇಶ ಮಾಡಿ, ಪೀಠಿಕೆಯನ್ನೇ ಇಷ್ಟು ಹೊತ್ತು ಹಾಕಿದ್ರೆ ಹೇಗೆ? ವಿಷಯಕ್ಕೆ ಬನ್ನಿ ಎಂದು ವಿಪಕ್ಷ ನಾಯಕ ಅಶೋಕ್ ಕಾಲೆಳೆದರು. ಅದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಮತ್ತೊಬ್ಬ ಸದಸ್ಯ ಸುನೀಲ್ ಕುಮಾರ್, ಏನು ಮುನ್ನಡೆ 25 ಪೇಜ್ ಆಯ್ತು ಅಂದರೆ ಶಾರೀರಿಕವಾಗಿ ನಿಶಕ್ತಿಯೂ ಇಲ್ಲದಂತೆ ಆಯ್ತು ಎಂದರು.
ಸುನೀಲ್ ಮಾತಿಗೆ ಸ್ಪಷ್ಟನೆಕೊಟ್ಟ ಸಿದ್ದರಾಮಯ್ಯ, ಶಾರೀರಿಕವಾಗಿ ನಿಶ್ಯಕ್ತಿ ಇದೆ. ಆದರೆ ರಾಜಕೀಯ ನಿಶ್ಯಕ್ತಿ ಇಲ್ಲ. ಪ್ರತಿಪಕ್ಷ ಸದಸ್ಯರ ಮುಂದೆ ಮತ್ತೆ ಪುನರುಚ್ಚಾರ ಮಾಡಿದ ಸಿದ್ದರಾಮಯ್ಯ, ಐದು ವರ್ಷ ಮುಗಿಸಿದ್ದೇನೆ, ಎರಡನೇ ಬಾರಿ ನಾನು ಸಿಎಂ ಇದ್ದೇನೆ. ಹೈಕಮಾಂಡ್​ನವರು ನನ್ನ ಪರವಾಗಿಯೇ ಇರೋದು. ಹೀಗಾಗಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ತೇನೆ ಎಂದಿದ್ದಾರೆ.
ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ. ಈ ಹಿಂದೆ ನಾನು ಐದು ವರ್ಷಗಳ ಕಾಲ ಸಿಎಂ ಆಗಿದ್ದೆ. ಈಗ ಎರಡನೇ ಬಾರಿಗೆ ಸಿಎಂ ಆಗಿದ್ದೇನೆ. ಹೈಕಮಾಂಡ್ ನನ್ನ ಪರವಾಗಿಯೇ ಇದೆ. ಹೀಗಾಗಿ ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ರೊಚ್ಚಿಗೆದ್ದ ಐಂದ್ರಿತಾ ರೈ..! ಶಾಸಕ ಮುನಿರತ್ನಗೆ ಟ್ಯಾಗ್ ಮಾಡಿ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us