ರೊಚ್ಚಿಗೆದ್ದ ಐಂದ್ರಿತಾ ರೈ..! ಶಾಸಕ ಮುನಿರತ್ನಗೆ ಟ್ಯಾಗ್ ಮಾಡಿ ಆಕ್ರೋಶ

ಬೆಂಗಳೂರಿನ ಗೋಳು ಕೇಳೋರೇ ಇಲ್ಲ. ಗ್ರೇಟರ್ ಬೆಂಗಳೂರು ಸಿಬ್ಬಂದಿ ಆಗಾಗ ಮಾಡುವ ಯಡವಟ್ಟುಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ನಟಿ ಐಂದ್ರಿತಾ ರೈ ರೊಚ್ಚಿಗೆದ್ದಿದ್ದಾರೆ..

author-image
Ganesh Kerekuli
Aindrita roy
Advertisment

ಬೆಂಗಳೂರು: ಜಿಬಿಎ ಸಿಬ್ಬಂದಿ ಕೆಲಸಕ್ಕೆ ನಟಿ ಐಂದ್ರಿತಾ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಐಂದ್ರಿತಾ ರೈ ಬೆಂಗಳೂರಿನ ಆರ್ ಆರ್ ನಗರದ ಐಡಿಯಲ್ ಹೋಮ್ ಲೇಔಟ್​ನಲ್ಲಿ ವಾಸವಾಗಿದ್ದಾರೆ.

ಜಿಬಿಎ ಸಿಬ್ಬಂದಿ ಲೇಔಟ್​ನ ಸುತ್ತಮುತ್ತ ಕಸ ಕ್ಲೀನ್ ಮಾಡಿ ಕಸ ಸುಟ್ಟಿದ್ದಾರೆ. ಸುಟ್ಟ ಕಸದ ಹೊಗೆಯಿಂದ ಮನೆಯಲ್ಲಿ ಇರೋಕೆ ಆಗ್ತಿಲ್ಲ. ಕಸ ಸುಟ್ಟ ಹೊಗೆ ಮನೆಯೊಳಗೆ ಬರ್ತಿದೆ. ರೆಸಿಡೆನ್ಶಿಯಲ್ ಜಾಗದಲ್ಲಿ ಈ ರೀತಿ ಯಾಕೆ ಮಾಡ್ತಿದ್ದಾರೆ.

ಜಿಬಿಎ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು ನೋ ರೆಸ್ಪಾನ್ಸ್. ಜಿಬಿಎ ಹೆಲ್ಫ್ ಲೈನ್ ಗೆ ಕಾಲ್ ಮಾಡಿದ್ರೆ ನಂಬರ್ ಸ್ಥಗಿತವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಹಾಯ ಮಾಡಿ ಎಂದು ವಿಡಿಯೋ ಮಾಡಿ ಶಾಸಕ ಮುನಿರತ್ನರನ್ನ ಟ್ಯಾಗ್ ಮಾಡಿ  ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪವಿತ್ರ ಗೌಡಗೆ ಬಿಗ್ ಶಾಕ್.. ಆ ಬೇಡಿಕೆಗೆ ಸೊಪ್ಪು ಹಾಕದ ದರ್ಶನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MLA Munirathna Aindrita Ray
Advertisment