/newsfirstlive-kannada/media/media_files/2025/12/19/darshan-and-pavitra-gowda-3-2025-12-19-10-36-51.jpg)
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗೆಳತಿ ಪವಿತ್ರ ಗೌಡ (Darshan and Pavitra Gowda) ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಟ್ರಯಲ್ ಶುರುವಾಗಿದ್ದು, ಆರೋಪಿಗಳಿಗೆ ಭಯ ಶುರುವಾಗಿದೆ.
ದರ್ಶನ್ ಮತ್ತು ಪವಿತ್ರ ಗೌಡ ಒಂದೇ ಜೈಲಿನಲ್ಲಿದ್ದಾರೆ. ಹೀಗಿದ್ದೂ, ಪರಸ್ಪರ ಭೇಟಿ ಸಾಧ್ಯವಾಗುತ್ತಿಲ್ಲ. ಕಾನೂನಿನಲ್ಲಿರುವ ಅವಕಾಶ ಪಡೆದುಕೊಂಡು ಪವಿತ್ರ ಗೌಡ, ದರ್ಶನ್ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ದರ್ಶನ್ ಸೊಪ್ಪು ಹಾಕಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬೆನ್ನಲ್ಲೇ ಇಬ್ಬರ ಮಧ್ಯೆ ಮನಸ್ಥಾಪ ಉಂಟಾಗಿದ್ಯಾ ಎಂಬ ಚರ್ಚೆ ಗುಲ್ಲೆದ್ದಿದೆ.
/filters:format(webp)/newsfirstlive-kannada/media/media_files/2025/11/04/darshan-and-pavitra-gowda-1-2025-11-04-18-23-54.jpg)
ಅಸಲಿಗೆ ಆಗಿದ್ದೇನು..?
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಭೇಟಿಗೆ ಪವಿತ್ರಗೌಡ ಯತ್ನಿಸಿದ್ದಾರಂತೆ. ಆದರೆ ಪವಿತ್ರಗೌಡ ಭೇಟಿ ಮಾಡಲು ದರ್ಶನ್ ನಯವಾಗಿಯೇ ನಿರಾಕರಿಸಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ಭೇಟಿ ವೇಳೆ ದರ್ಶನ್ ಭೇಟಿಗೆ ಪವಿತ್ರಗೌಡ ಅವಕಾಶ ಕೇಳಿದ್ದಾರೆ.
ಅದಕ್ಕೆ ಅಲೋಕ್ ಕುಮಾರ್, ಕಾನೂನಿನಲ್ಲಿ ಅವಕಾಶ ನೋಡಿಕೊಂಡು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಅದನ್ನೇ ನೆಪವಾಗಿಟ್ಟುಕೊಂಡು ಮರಳಿ ಯತ್ನವ ಮಾಡು ಅನ್ನುವಂತೆ ಪವಿತ್ರಗೌಡ ಪ್ರಯತ್ನಿಸಿದ್ದಾರೆ. ಆದ್ರೆ ಪವಿತ್ರಗೌಡ ಆಸೆಗೆ ದರ್ಶನ್ ನೀರಸ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರ ಗೌಡರ ಭೇಟಿ ಮಾಡಲು ದರ್ಶನ್ ನಿರಾಕರಿಸಿದ್ದಾರೆ ಎನ್ನಲಾಗಿದೆ.
ತನ್ನನ್ನು ನೋಡಲು ಬಂದಿದ್ದವ್ರ ಬಳಿ ಪವಿತ್ರ ಗೌಡ ಕಾನೂನು ಹೋರಾಟದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕೇಸ್ ಸಂಬಂಧ ಟ್ರಯಲ್ ಶುರುವಾಗಿದೆ, ಮಾತಾಡಬೇಕು ಎಂದು ದರ್ಶನ್​​ಗೆ ತಿಳಿಸಿದ್ದಾಳೆ. ಆದರೆ ಪವಿತ್ರಗೌಡ ಭೇಟಿಗೆ ದರ್ಶನ್ ಒಪ್ಪಿಲ್ಲ ಎನ್ನಲಾಗಿದೆ.
ಇದನ್ನು ಓದಿ: 2033ರವರೆಗೂ ಮತ್ತೊಂದು ವಿಮಾನ ನಿಲ್ದಾಣ ಸಾಧ್ಯವಿಲ್ಲ -ಬೆಂಗಳೂರು ಕನಸಿಗೆ ಕೇಂದ್ರ ತಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us