2033ರವರೆಗೂ ಮತ್ತೊಂದು ವಿಮಾನ ನಿಲ್ದಾಣ ಸಾಧ್ಯವಿಲ್ಲ -ಬೆಂಗಳೂರು ಕನಸಿಗೆ ಕೇಂದ್ರ ತಣ್ಣೀರು

ಬೆಂಗಳೂರಿನಲ್ಲಿ ಮತ್ತೊಂದು ಏರ್ಪೋರ್ಟ್ ಕನಸಿಗೆ ತಣ್ಣೀರು ಬಿದ್ದಿದೆ. KIALಗೆ 25 ವರ್ಷ ಆಗೋವರೆಗೆ ಹೊಸ ನಿಲ್ದಾಣ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೆಂಗಳೂರಿನಲ್ಲಿ 2ನೇ ಏರ್​ಪೋರ್ಟ್ ವಿಚಾರವಾಗಿ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ, ನಾಗರಿಕ ವಿಮಾನಯಾನ ಸಚಿವಾಲಯ ಉತ್ತರ ನೀಡಿದೆ.

author-image
Ganesh Kerekuli
bengaluru airport (2)
Advertisment

ಬೆಂಗಳೂರಿನಲ್ಲಿ ಮತ್ತೊಂದು ಏರ್ಪೋರ್ಟ್ ಕನಸಿಗೆ ತಣ್ಣೀರು ಬಿದ್ದಿದೆ. KIALಗೆ 25 ವರ್ಷ ಆಗೋವರೆಗೆ ಹೊಸ ನಿಲ್ದಾಣ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಬೆಂಗಳೂರಿನಲ್ಲಿ 2ನೇ ಏರ್​ಪೋರ್ಟ್ ವಿಚಾರವಾಗಿ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ, ನಾಗರಿಕ ವಿಮಾನಯಾನ ಸಚಿವಾಲಯ ಉತ್ತರ ನೀಡಿದೆ. ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕಾಗಿ AAI ಮೂರು ಸ್ಥಳಗಳನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ; ಬೈಕ್ ಸವಾರ ನಿಧನ

KIAL ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದಂತೆ, KIALಗೆ 25 ವರ್ಷ ಆಗೋವರೆಗೆ ಹೊಸ ನಿಲ್ದಾಣ ಸಾಧ್ಯವಿಲ್ಲ ಅಂತ ತಿಳಿಸಿದೆ. ಹೀಗಾಗಿ ಮುಂದಿನ 2033ರವರೆಗೆ ನೂತನ ನಿಲ್ದಾಣ ಸಾಧ್ಯವಿಲ್ಲ. CA ನಿಬಂಧನೆಗಳ ಪ್ರಕಾರ BIAL ನಿಂದ ಒಪ್ಪಿಗೆ ಅಗತ್ಯವಿರುತ್ತದೆ ಅಂತ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಸದ್ಯಕ್ಕಿಲ್ಲ ಹೊಸ ಏರ್ಪೋರ್ಟ್‌

  • ಬೆಂಗಳೂರಿನಲ್ಲಿ ಮತ್ತೊಂದು ಏರ್ಪೋರ್ಟ್ ಕನಸಿಗೆ ತಣ್ಣೀರು
  • KIALಗೆ 25 ವರ್ಷ ಆಗೋವರೆಗೆ ಹೊಸ ನಿಲ್ದಾಣ ಸಾಧ್ಯವಿಲ್ಲ
  • ಸಂಸದ ಪಿಸಿ ಮೋಹನ್ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರ
  • ಈ ಬಗ್ಗೆ KIAL ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದ
  • KIALನ 150 ಕಿ.ಮೀ ವೈಮಾನಿಕ ವ್ಯಾಪ್ತಿಯಲ್ಲಿ ಅವಕಾಶವಿಲ್ಲ
  • ಕರ್ನಾಟಕ ಕೋರಿಕೆ ಮೇರೆಗೆ ಈಗಾಗ್ಲೇ 3 ಸ್ಥಳಗಳ ಅಧ್ಯಯನ
  • ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವರದಿ ಸಲ್ಲಿಕೆ
  • ಹೀಗಾಗಿ ಮುಂದಿನ 2033ರವರೆಗೆ ನೂತನ ನಿಲ್ದಾಣ ಸಾಧ್ಯವಿಲ್ಲ
  • CA ನಿಬಂಧನೆಗಳ ಪ್ರಕಾರ BIAL ನಿಂದ ಒಪ್ಪಿಗೆ ಅಗತ್ಯವಿರುತ್ತದೆ

ಇದನ್ನೂ ಓದಿ: IND vs SA ಫೈನಲ್.. ಟೀಂ ಇಂಡಿಯಾಗೆ ಸ್ಟಾರ್​ ಬೌಲರ್​ ಕಂಬ್ಯಾಕ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Airport Bangalore 2nd Airport Place selection
Advertisment