/newsfirstlive-kannada/media/media_files/2025/10/31/surya_kumar-1-2025-10-31-09-19-49.jpg)
ಇಂಡೋ-ಆಫ್ರಿಕಾ ಫೈನಲ್ ಟಿ-20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಹ್ಮದಾಬಾದ್​ನಲ್ಲಿ ನಡೆಯಲಿರೋ ಅಂತಿಮ ಟಿ-20 ಪಂದ್ಯ, ಸಿಕ್ಕಾಪಟ್ಟೆ ಮಹತ್ವ ಪಡೆದುಕೊಂಡಿದೆ. ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿದೆ. ಮತ್ತೊಂದೆಡೆ ಫೈನಲ್ ಟಿ-20 ಪಂದ್ಯವನ್ನ ಗೆದ್ದು ಆಫ್ರಿಕಾ, ಭಾರತ ಪ್ರವಾಸಕ್ಕೆ ಗುಡ್​​ಬೈ ಹೇಳುವ ವಿಶ್ವಾಸದಲ್ಲಿದೆ.
ಮತ್ತೊಂದೆಡೆ ಆಫ್ರಿಕನ್ನರೂ ಈ ಪಂದ್ಯವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪಂದ್ಯ ಗೆದ್ರೆ ಸರಣಿ ಸಮಬಲ, ಸೋತ್ರೆ ಸರಣಿ ಸೋಲು. ಹಾಗಾಗಿ ಇಂದು, ಎರಡು ಬಲಿಷ್ಟ ತಂಡಗಳ ನಡುವೆ ಗೆಲುವಿಗಾಗಿ ಬಿಗ್ ಫೈಟ್ ನಡೆಯಲಿದೆ. ಕ್ರಿಕೆಟ್ ಫ್ಯಾನ್ಸ್​ಗೆ ಫುಲ್ ಎಂಟರ್​ಟೈನ್ಮೆಂಟ್ ಸಿಗಲಿದೆ.
ಇದನ್ನೂ ಓದಿ: ಈ ಐದು ಆಟಗಾರರಿಗೆ ಮತ್ತೆ ಮರುಜೀವ ಕೊಟ್ಟ IPL; ಇದೇ ಲಾಸ್ಟ್ ಚಾನ್ಸ್..!
ಶುಭ್ಮನ್ ಗಿಲ್ ಬದಲು ಸಂಜು ಸ್ಯಾಮ್ಸನ್?
ಅಹ್ಮದಾಬಾದ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಒಂದೆರಡು ಬದಲಾವಣೆ ಪಕ್ಕಾ. ಗಾಯಗೊಂಡಿರುವ ಶುಭ್ಮನ್ ಗಿಲ್, ಈ ಪಂದ್ಯ ಆಡೋದು ಅನುಮಾನ ಎನ್ನಲಾಗ್ತಿದೆ. ಆದ್ರೆ ಪಂದ್ಯಕ್ಕೂ ಮುನ್ನ ಗಿಲ್ ಲಭ್ಯತೆ ಬಗ್ಗೆ ಚರ್ಚಿಸಲಾಗುವುದು. ಒಂದು ವೇಳೆ ಗಿಲ್ ಪಂದ್ಯದಿಂದ ಔಟ್ ಆದ್ರೆ, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್, ಗಿಲ್ ಸ್ಥಾನವನ್ನ ತುಂಬಲಿದ್ದಾರೆ.
ಇದನ್ನೂ ಓದಿ: 28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?
/filters:format(webp)/newsfirstlive-kannada/media/media_files/2025/12/12/team-india-12-2025-12-12-08-03-19.jpg)
ವೈಯಕ್ತಿಕ ಕಾರಣದಿಂದ ಧರ್ಮಶಾಲಾ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಜಸ್ಪ್ರೀತ್ ಬೂಮ್ರಾ, ಕೊನೆಯ ಟಿ-20 ಪಂದ್ಯಕ್ಕೆ, ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಬೂಮ್ರಾ ಎಂಟ್ರಿಯಿಂದ ಹರ್ಷಿತ್ ರಾಣಾ ಸ್ಥಾನ ಕಳೆದುಕೊಳ್ಳೋದು ಬಹುತೇಕ ಖಚಿತ. ಆದ್ರೆ ಕೋಚ್ ಗಂಭೀರ್​, ರಾಣಾರನ್ನ ಉಳಿಸಿಕೊಳ್ಳಲು ಯಾರಿಗೆ ಕೊಕ್ ನೀಡ್ತಾರೆ ಅನ್ನೋದೇ, ಗೊತ್ತಾಗ್ತಿಲ್ಲ.
ಈ ವರ್ಷ ಟೀಮ್ ಇಂಡಿಯಾ ಆಡೋ ಕೊನೆಯ ಟಿ-20 ಪಂದ್ಯ ಇದಾಗಲಿದೆ. ವರ್ಷ ಇಡೀ ಕಳಪೆ ಫಾರ್ಮ್​ಗೆ ಸಿಲುಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಾಯಕ ಸೂರ್ಯಕುಮಾರ್ ಯಾದವ್, ಅಟ್ಲೀಸ್ಟ್ ಇವತ್ತಾದ್ರೂ ಒಂದೊಳ್ಳೆ ಇನ್ನಿಂಗ್ಸ್ ಆಡಬೇಕಿದೆ. 2026 ಜನವರಿ ಮೊದಲ ವಾರದಲ್ಲಿ ನ್ಯೂಜಿಲೆಂಡ್ ಟಿ-20 ಸರಣಿ ಮತ್ತು ಟಿ-20 ವಿಶ್ವಕಪ್​​ಗೆ ತಂಡ ಪ್ರಕಟಿಸುವ ಸಾಧ್ಯತೆ ಇರೋದ್ರಿಂದ ಸ್ಕೈ ಇಂದು ಪರ್ಫಾಮ್ ಮಾಡಲೇಬೇಕಿದೆ.
ಇದನ್ನೂ ಓದಿ: ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!'
/filters:format(webp)/newsfirstlive-kannada/media/post_attachments/wp-content/uploads/2023/08/BUMRAH.jpg)
ಅಹ್ಮದಾಬಾದ್​​​​​​​ ಪಂದ್ಯದಲ್ಲಿ, ಟಾಸ್ ಗೆದ್ದೋರೇ ಬಾಸ್. ಈ ಪಂದ್ಯದಲ್ಲಿ ಟಾಸ್ ಅತ್ಯಂತ ಪ್ರಮುಖ ಪಾತ್ರವಹಿಸಿಲಿದೆ. ನೈಟ್ ಗೇಮ್ ಆಗಿರೋದ್ರಿಂದ ಟಾಸ್ ಗೆದ್ದು ಬ್ಯಾಟಿಂಗ್ ಮಾಡೋದೇ ಸೂಕ್ತ ನಿರ್ಧಾರ. ಈ ವರ್ಷ ಈ ಮೈದಾನದಲ್ಲಿ 7 ನೈಟ್​​ಗೇಮ್ಸ್ ಆಗಿದೆ. ಅದ್ರಲ್ಲಿ 6 ಬಾರಿ ತಂಡ ಸ್ಕೋರ್ ಡಿಫೆಂಡ್ ಮಾಡಿಕೊಂಡಿದೆ. ಉತ್ತಮ ಟಾರ್ಗೆಟ್ ಸೆಟ್ ಮಾಡೋ ತಂಡ ಗೆಲ್ಲೋದು ಫಿಕ್ಸ್.
ಸರಣಿ ಗೆಲ್ಲೋದೇ ಟೀಮ್ ಇಂಡಿಯಾ ಗುರಿ
ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನ ಗೆದ್ದು ಮಾನ ಉಳಿಸಿಕೊಂಡಿತ್ತು. ಇದೀಗ ಟಿ-20 ಸರಣಿಯನ್ನ ಗೆಲುವಿನ ಮೂಲಕ ಟೀಮ್ ಇಂಡಿಯಾ, ವರ್ಷಕ್ಕೆ ಗುಡ್​ಬೈ ಹೇಳಲು ಹೊರಟಿದೆ. ಅತ್ತ ಆಫ್ರಿಕಾ ಭಾರತ ಪ್ರವಾಸವನ್ನ ಅವಿಸ್ಮರಣಿಯವನ್ನಾಗಿಸಿಕೊಳ್ಳಲು ಈ ಪಂದ್ಯವನ್ನ ಗೆಲ್ಲಲೇಬೇಕಿದೆ. ಒಟ್ನಲ್ಲಿ, ಎರಡೂ ತಂಡಗಳಿಗೆ ಗೆಲುವು ಎಷ್ಟು ಇಂಪಾರ್ಟೆಂಟ್ ಅನ್ನೋದು ಗೊತ್ತಿದೆ. ಹಾಗಾಗಿ ಇವತ್ತು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಫೆಂಟಾಸ್ಟಿಕ್ ಫ್ರೈಡೆ ಆಗೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಕಂಬ್ಯಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us