ವಿಧಾನ ಪರಿಷತ್ ಕಲಾಪದಲ್ಲಿ ಇವತ್ತು ‘ಬಾಂಬೆ ಬಾಯ್ಸ್’ ಪುಸ್ತಕದ ಬಗ್ಗೆ ಚರ್ಚೆ ನಡೆಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ ವಿಚಾರ ಮಾತುಕತೆಯಲ್ಲಿರುವಾಗ ‘ಬಾಂಬೆ ಬಾಯ್ಸ್’ ಪುಸ್ತಕದ ಬಗ್ಗೆ ಪ್ರಸ್ತಾಪ ಆಯಿತು.
ಬಾಂಬೇ ಬಾಯ್ಸ್ ಬಗ್ಗೆ ಪ್ರಸ್ತಾಪ
ಯಾವ ಪಕ್ಷವೇ ಇರಲಿ. ವರಿಷ್ಠರನ್ನು ಟೀಕೆ ಮಾಡಿದರೆ ಅವರ ಕಥೆ ಮುಗಿದಂತೆ. ಕಾಂಗ್ರೆಸ್ ಸರ್ಕಾರವೂ ಹೌದಪ್ಪಗಳ ಸರ್ಕಾರ ಆಗಿದೆ. ಅಂದು ಸಮ್ಮಿಶ್ರ ಸರ್ಕಾರಕ್ಕೆ (2018) ಬಿಜೆಪಿ ಆಪರೇಷನ್ ಕಮಲ ಮಾಡಿತ್ತು. ಆಗ ನಮ್ಮನ್ನ ನೀವೇ ಬಾಂಬೇ ಬಾಯ್ಸ್ ಎಂದು ಕರೆದಿದ್ರಿ ಅಂತಾ ಹಳ್ಳಿ ಹಕ್ಕಿ ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಕೆ.ಎನ್.ರಾಜಣ್ಣ ವಜಾ ಹಿಂದೆ ತೆರೆಯ ಹಿಂದೆ ನಡೆದಿದ್ದೇನು? ಸಿದ್ದರಾಮಯ್ಯ ಮಾಡಿದ ಪ್ರಯತ್ನ ವಿಫಲವಾಗಿದ್ದೇಕೆ?
ಅದಕ್ಕೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ನ ಪುಟ್ಟಣ್ಣ, ನೀವು ‘ಬಾಂಬೆ ಬಾಯ್ಸ್’ ಪುಸ್ತಕವನ್ನು ಯಾವಾಗ ಪ್ರಕಟಿಸುತ್ತೀರಿ ಎಂದರು. ಅದಕ್ಕೆ ಉತ್ತರಿಸಿದ ಹೆಚ್.ವಿಶ್ವನಾಥ್.. ಈಗಾಗಲೇ ಪುಸ್ತಕವನ್ನು ಬರೆದಿಟ್ಟಿರುವೆ. ಮೂರು ಪಕ್ಷಗಳ ನಾಯಕರು ಬಿಡುಗಡೆ ಮಾಡಬೇಡಿ ಎಂದು ದಂಬಾಲು ಬಿದ್ದಿದ್ದಾರೆ ಎಂದರು.
ಆಗ ಎಂಬಿ ಪಾಟೀಲ್ ಮಧ್ಯ ಪ್ರವೇಶ ಮಾಡಿ.. ಒಳ್ಳೆಯ ಪ್ರಕಾಶನ ಹುಡುಕಿ ಕೊಡುತ್ತೇನೆ. ಕೃತಿ ಬಿಡುಗಡೆ ಮಾಡಿ. ಸಾಕಷ್ಟು ಕೃತಿ ಮಾರಾಟವಾಗುತ್ತವೆ ಎಂದು ನಗೆ ಚಟಾಕಿ ಹಾರಿಸಿದರು.
ಇದನ್ನೂ ಓದಿ:‘ನಿಮ್ಮನ್ನು ನಂಬಿ ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯ್ತಿರ್ತಾರೆ..’ KN ರಾಜಣ್ಣರಿಂದ ಬೆಂಬಲಿಗರಿಗೆ ಭಾವನಾತ್ಮಕ ನುಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ