ವಿಧಾನಸಭಾ ಕಲಾಪದಲ್ಲೂ ರಾಜಣ್ಣ ರಾಜೀನಾಮೆ ಪ್ರತಿಧ್ವನಿ.. ಚರ್ಚೆ ವೇಳೆ ಸಿಕ್ತಾ ಸ್ಪಷ್ಟತೆ..?

ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ವಿಚಾರ ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿದೆ. ಮಧ್ಯಾಹ್ನದ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಅವರು ರಾಜಣ್ಣ ರಾಜೀನಾಮೆ ವಿಚಾರನ್ನು ಪ್ರಸ್ತಾಪಿಸಿದರು. ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ ನೀಡಿದ್ದಾರೋ ಇಲ್ಲವೋ..? ಎಂದು ಆಗ್ರಹಿಸಿದರು.

author-image
Ganesh
KN Rajanna (3)

ಸದನ ಕಲಾಪದಲ್ಲಿ ರಾಜಣ್ಣ ಮಾತು

Advertisment

ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ (KN Rajanna resignation) ವಿಚಾರ ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿದೆ. ಮಧ್ಯಾಹ್ನದ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಅವರು ರಾಜಣ್ಣ ರಾಜೀನಾಮೆ ವಿಚಾರನ್ನು ಪ್ರಸ್ತಾಪಿಸಿದರು. ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ ನೀಡಿದ್ದಾರೋ ಇಲ್ಲವೋ..? ನೀಡಿದ್ದರೆ ಯಾಕೆ ಎಂದು ಸ್ಪಷ್ಟಪಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದರು. 

ಇದನ್ನೂ ಓದಿ: BREAKING ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ!

ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ.. ರಾಜಣ್ಣ ರಾಜೀನಾಮೆ ಬಗ್ಗೆ ಕಾನೂನು ಸಚಿವರು ಹೇಳಿಕೆ ನೀಡಬೇಕು. ಇಲ್ಲವೇ ರಾಜಣ್ಣನವರೇ ಸ್ಪಷ್ಟಪಡಿಸಬೇಕು ಎಂದರು. ಅದಕ್ಕೆ ಹೆಚ್​ಕೆ ಪಾಟೀಲ್ ತಿರುಗೇಟು ನೀಡಿ.. ಮುಖ್ಯಮಂತ್ರಿಗಳು ಸದನದಲ್ಲಿ ಇಲ್ಲದಿದ್ದಾಗ ಇದು ಅಪ್ರಸ್ತುತ. ಮುಖ್ಯಮಂತ್ರಿ ಬಂದ ಮೇಲೆ ಅದನ್ನು ಸ್ಪಷ್ಟಪಡಿಸುತ್ತಾರೆ. ರಾಜಣ್ಣ ರಾಜೀನಾಮೆ ಕೊಟ್ಟಿದ್ದೇನೆ, ಕೊಟ್ಟಿಲ್ಲ ಎಂದು ಸದನದಲ್ಲಿ ಹೇಳುವುದು ಸರಿಯಲ್ಲ ಎಂದರು.

ಈಗ ರಾಜಣ್ಣ ಸದನದಲ್ಲಿ ಇದ್ದಾರೆ. ರಾಜೀನಾಮೆ ಬಗ್ಗೆ ಸ್ಪಷ್ಟಪಡಿಸಿ ಎಂದ ಸುನಿಲ್ ಕುಮಾರ್ ಆಗ್ರಹಿಸಿದರು. ದಲಿತ ಸಚಿವರಿಗೆ ಅನ್ಯಾಯ ಮಾಡಬೇಡಿ ಎಂದು ಮತ್ತೊಬ್ಬ ಬಿಜೆಪಿ ಸದಸ್ಯ ಆಗ್ರಹಿಸಿದರು. ಮಿನಿಸ್ಟರ್ ಆಗಿ ರಾಜಣ್ಣ ಕುಳಿತಿದ್ದಾರೋ, ಮಿನಿಸ್ಟರ್ ಅಲ್ಲದೇ ಕುಳಿತಿದ್ದಾರೋ ಎಂದು ಸ್ಪಷ್ಟಪಡಿಸಲಿ ಅಂತಾ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ರಾಜಣ್ಣ ಮೌನವಾಗಿದ್ದರು.

kn rajanna(6)

ರಾಜಣ್ಣ ರಾಜೀನಾಮೆ..

ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ 2ನೇ ವಿಕೆಟ್ ಪತನವಾದಂತೆ ಆಗಿದೆ. ಈ ಹಿಂದೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕರ್ನಾಟಕದಲ್ಲಿ  ಮತದಾರರ ಪಟ್ಟಿಯಲ್ಲಿ ಲೋಪದೋಷವಾಗಿರುವ ಬಗ್ಗೆ ಕೆ.ಎನ್.ರಾಜಣ್ಣ ಮಾತನಾಡಿದ್ದರು. 2024ರ ಲೋಕಸಭಾ ಚುನಾವಣೆ ನಡೆದಾಗ, ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವೇ ಇತ್ತು. ನಾವೇ ಮತದಾರರ ಪಟ್ಟಿಯ ಬಗ್ಗೆ  ನೋಡಿಕೊಳ್ಳಬೇಕಾಗಿತ್ತು. ಇದರಲ್ಲಿ ನಮ್ಮ ತಪ್ಪು ಕೂಡ ಇದೆ. ವೋಟಿಂಗ್ ಲಿಸ್ಟ್ ತಯಾರಾಗಿದ್ದೇ ನಮ್ಮ ಸರ್ಕಾರದ ಅವಧಿಯಲ್ಲಿ. ಮತದಾರರ ಪಟ್ಟಿಯಲ್ಲಿ ಆಕ್ರಮ ನಡೆದಿರೋದು ನಿಜ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಮಹದೇವಪುರ ಅಸೆಂಬ್ಲಿಯಲ್ಲಿ ನಮ್ಮ ಲೋಪ ಕೂಡ ಇದೆ. ಲೋಕಸಭೆ ಚುನಾವಣೆ ವೇಳೆ ನಾವೇ ಅಧಿಕಾರದಲ್ಲಿದ್ದೇವು ಎಂದು ಸಹಕಾರ ಸಚಿವ ಕೆ. ಎನ್.ರಾಜಣ್ಣ ಮಾತನಾಡಿದ್ದರು. ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ದೂರು ನೀಡಿದ್ದರು. 

ಇದನ್ನೂ ಓದಿ:ರಾಜಣ್ಣ ನುಡಿದ ಸತ್ಯ ಕಾಂಗ್ರೆಸ್​ಗೆ ಮೆಣಸಿನಕಾಯಿ ಇಟ್ಟಂಗೆ ಆಗಿದೆ -ಅಶೋಕ್ ವ್ಯಂಗ್ಯ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KN Rajanna K N Rajanna resignation R Ashok on Rajanna resignation
Advertisment