/newsfirstlive-kannada/media/media_files/2025/11/01/cm_siddaramaiah-3-2025-11-01-11-03-39.jpg)
ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್​​ ಗ್ರೀನ್​ ಸಿಗ್ನಲ್​ ಬೆನ್ನಲ್ಲೇ, ಹಲವು ಸಚಿವರಿಗೆ ಢವಢವ ಶುರುವಾಗಿದೆ. ಎರಡು ವರ್ಷಗಳ ಸಚಿವ ಸ್ಥಾನ ಪೂರೈಸಿರುವ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕೊಕ್ ನೀಡುವ ಸಾಧ್ಯತೆಯಿದೆ.
ಜೊತೆಗೆ ಹೊಸ ಮುಖಗಳಿಗೆ ಅವಕಾಶ ನೀಡುವ ಚಿಂತನೆ ಮಾಡಲಾಗ್ತಿದೆ. ನಾಳೆ ಮತ್ತೆ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೀವಾಲಾ ಜೊತೆಗೆ ಚರ್ಚಿಸಿ ಸಂಪುಟದಿಂದ ಕೈಬಿಡುವವರ ಪಟ್ಟಿಯನ್ನ ಅಂತಿಮಗೊಳಿಸಲಿದ್ದಾರೆ. ಮಾಹಿತಿ ಪ್ರಕಾರ ಸಚಿವ ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್, ಡಿ.ಸುಧಾಕರ್, ಲಕ್ಷ್ಮೀಹೆಬ್ಬಾಳ್ಕರ್, ಎನ್.ಎಸ್.ಬೋಸರಾಜು, ಮಧುಬಂಗಾರಪ್ಪ ಸೇರಿದಂತೆ ಹಲವರಿಗೆ ಕೊಕ್​ ಕೊಡುವ ಸಾಧ್ಯತೆಯಿದೆ.
ಡಿಕೆಶಿ ನಡೆ ಕುತೂಹಲ
ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಅವರಿಗೆ ವರಿಷ್ಠರು ಅಭಯ ನೀಡಿದ್ದು ನಾಯಕತ್ವ ಬದಲಾವಣೆ ವಿಚಾರಕ್ಕೆ ಸದ್ಯ ಬ್ರೇಕ್ ಹಾಕಲಾಗಿದೆ. ಈಗ ಡಿಸಿಎಂ ಶಿವಕುಮಾರ್ ಅವರ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಅರವಿಂದ್ ರೆಡ್ಡಿ ಆರೋಪಕ್ಕೆ ಬಿಗ್​ಬಾಸ್​ ಬ್ಯೂಟಿ ಖಡಕ್ ರಿಯಾಕ್ಷನ್..!
ಸಿಎಂ ಆಪ್ತರನ್ನ ವಿಶ್ವಾಸಕ್ಕೆ ಪಡೆಯುವ ಕಸರತ್ತು ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಲೆಕ್ಕಾಚಾರಗಳು ನಡೆದಿದ್ದು, ಜಿಲ್ಲಾ, ತಾಲೂಕು, ಜಿಬಿಎ ಚುನಾವಣೆಗಳಿಗೆ ತಯಾರಿ ನಡೆಸಲಾಗುತ್ತಿದೆ. ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಸಿಎಂ ಜೊತೆ ಉತ್ತಮ ಬಾಂಧವ್ಯವನ್ನು ಡಿಕೆಶಿ ಮುಂದುವರೆಸೋ ಮೂಲಕ 2028ರ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗುವ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us