‘Time will answer’ ಸಿಎಂ ಕನಸಿನ ಬಗ್ಗೆ ಡಿಕೆ ಶಿವಕುಮಾರ್ ಏನಂದ್ರು..?

ಮತ್ತೆ ರಾಜ್ಯದಲ್ಲಿ ಸಿಎಂ ಕುರ್ಚಿಯ ವಿಚಾರ ಚರ್ಚೆಯಲ್ಲಿದೆ. ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಮಾತನ್ನಾಡಿರುವ ಡಿಕೆ ಶಿವಕುಮಾರ್, ನಾನು ಸಿಎಂ ಆಗಬೇಕೆಂಬ ಆಸೆ ಎಲ್ಲರಿಗೂ ಇದೆ ಎಂದಿದ್ದಾರೆ.

author-image
Ganesh Kerekuli
DK Shivakumar Siddaramaiah
Advertisment

ಬೆಂಗಳೂರು: ಮತ್ತೆ ರಾಜ್ಯದಲ್ಲಿ ಸಿಎಂ ಕುರ್ಚಿಯ ವಿಚಾರ ಚರ್ಚೆಯಲ್ಲಿದೆ. ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಮಾತನ್ನಾಡಿರುವ ಡಿಕೆ ಶಿವಕುಮಾರ್, ನಾನು ಸಿಎಂ ಆಗಬೇಕೆಂಬ ಆಸೆ ಎಲ್ಲರಿಗೂ ಇದೆ. 

ಜನರಿಗೆ, ಶಾಸಕರಿಗೆ ನಾನು ಸಿಎಂ ಆಗಬೇಕು ಅಂತ ಆಸೆ ಇದೆ. ಆದರೆ ನಮ್ಮ ಪಕ್ಷ ಏನು ಹೇಳುತ್ತೋ ಅದೇ ಆಗೋದು, ಆಗುತ್ತೆ. ಟೈಮ್ ವಿಲ್ ಆನ್ಸರ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಎಂದಿದ್ದಾರೆ. ಇದೇ ವೇಲೆ ​ಪರಂ ಸಿಎಂ ಆಗಬೇಕು ಅಂತ ಅಭಿಮಾನಿಗಳ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರವರ ಫ್ಯಾನ್ಸ್​ ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಬಜೆಟ್ ಬಳಿಕ ಸಿಎಂ ಆಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಡಿಕೆ ಶಿವಕುಮಾರ್, ಟೈಮ್ ವಿಲ್ ಆನ್ಸರ್ ಎಂದಿದ್ದಾರೆ.

ಇದನ್ನೂ ಓದಿ: ಬಿಗ್ ರಿಲೀಫ್! ರಷ್ಯಾ ತೈಲ ವಿವಾದದ ಶೇ. 25ರಷ್ಟು ಸುಂಕ ತೆರವು.. ಒಟ್ಟು ಶೇ. 50ರಿಂದ 18ಕ್ಕೆ ಅಮೆರಿಕನ್ ಸುಂಕ ಇಳಿಕೆ..!

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು..?

ಸಿಎಂ ಬದಲಾವಣೆ ಇಲ್ಲ ಎಂದು ಮತ್ತೆ  ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಬೀದರ್‌‌ನಲ್ಲಿ ಹೇಳಿದ್ದಾರೆ. ತೀರ್ಮಾನ ಮಾಡೋದು ಹೈಕಮಾಂಡ್, ಸದ್ಯಕ್ಕೆ ಏನೂ ಹೇಳಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲೀಡರ್‌ಶಿಪ್‌ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಮುಂದುವರಿಯಲ್ಲ ಅನ್ನೋಕೆ ಕಾರಣಗಳಿಲ್ಲ. ಹಾಗಾಗಿ ಅವರೇ ಮುಂದುವರೆಯುತ್ತಾರೆ ಎಂದಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CM SIDDARAMAIAH DK Shivakumar
Advertisment