ಇಂದು ಮಹತ್ವದ ಸಚಿವ ಸಂಪುಟ ಸಭೆ -ಚರ್ಚಾ ವಿಷಯ ಏನು ಗೊತ್ತಾ?

ನಾಗಮೋಹನ್ ದಾಸ್ ವರದಿ (Nagamohan Das reservation report) ಜಾರಿ ಸಂಬಂಧ ಇಂದು ವಿಶೇಷ ಸಚಿವ ಸಂಪುಟ ಸಭೆ (Cabinet meeting) ನಡೆಯಲಿದೆ. ಇವತ್ತು ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.

author-image
Ganesh Kerekuli
Siddaramaiah meeting
Advertisment

ಬೆಂಗಳೂರು: ನಾಗಮೋಹನ್ ದಾಸ್ ವರದಿ (Nagamohan Das reservation report) ಜಾರಿ ಸಂಬಂಧ ಇಂದು ವಿಶೇಷ ಸಚಿವ ಸಂಪುಟ ಸಭೆ (Cabinet meeting) ನಡೆಯಲಿದೆ. ಇವತ್ತು ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. 

ಈ ಸಭೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿ ಸಂಬಂಧ ಸುದೀರ್ಘ ಚರ್ಚೆ ನಡೆಯಲಿದೆ. ದಲಿತ ಎಡಗೈ, ಬಲಗೈ ಸಮುದಾಯದ ಸಚಿವರಲ್ಲಿ ವರದಿ ಬಗ್ಗೆ ಒಮ್ಮತ ಮೂಡದಿರುವ ಹಿನ್ನೆಲೆಯಲ್ಲಿ ಚರ್ಚೆ ಆಗಲಿದೆ. ಮೊದಲು ಸಚಿವರ ಅಭಿಪ್ರಾಯವನ್ನು ಆಲಿಸಲಿರುವ ಸಿದ್ದರಾಮಯ್ಯ ನಂತರ ನಿರ್ಧಾರಕ್ಕೆ ಬರಲಿದ್ದಾರೆ. 

ಇದನ್ನೂ ಓದಿ: NDA ಉಪರಾಷ್ಟ್ರಪತಿ ಅಭ್ಯರ್ಥಿಗೆ ಪ್ರಹ್ಲಾದ್ ಜೋಷಿರ ದೆಹಲಿ ನಿವಾಸದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ

Internal Reservation (4)

ಈಗಾಗಲೇ ವರದಿಯಲ್ಲಿ ವೈಜ್ಞಾನಿಕ, ತರ್ಕಬದ್ಧ ಮಾನದಂಡ ಅನುಸರಿಸಿಲ್ಲ ಎಂಬ ಆಕ್ಷೇಪವಿದೆ. ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನ ಒಂದೇ ಕಾಲಂನಲ್ಲಿ ನಮೂದಿಸಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಅಸಮಾಧಾನ ಹಲವರದ್ದು. ಈವರೆಗೂ ರಾಜಕೀಯ ಪ್ರಾತಿನಿಧ್ಯವನ್ನೇ ಪಡೆಯದ 40ಕ್ಕೂ ಹೆಚ್ಚು ಸಮುದಾಯಗಳಿವೆ. ಆದರೂ ಅತಿ ಹಿಂದುಳಿದ ಸಮುದಾಯಗಳು ಎಂದು ಗುರುತಿಸದೇ ಅವನ್ನು ಗ್ರೂಪ್ ಸಿ ಪಟ್ಟಿಗೆ ಸೇರಿಸಲಾಗಿದೆ ಎಂಬ ಆಕ್ಷೇಪ ಕೂಡ ಇದೆ. 

ಜೊತೆಗೆ ಇನ್ನೂ ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ 50ಕ್ಕೂ ಹೆಚ್ಚು ಜಾತಿಗಳ ವಿಷಯದಲ್ಲೂ ಆಯೋಗ ತರ್ಕವಿಲ್ಲದೇ ಮಾನದಂಡಗಳನ್ನು ಅನುಸರಿಸಿದೆ ಎಂಬ ಬೇಸರವನ್ನು ಕೆಲವರು ಹೊರಹಾಕಿದ್ದಾರೆ. ಹಾಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಗೊಂದಲ ಬಗೆಹರಿಯಲಿದೆಯೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ. 

ಸರ್ಕಾರಕ್ಕೆ ವರದಿ ಸಲ್ಲಿಕೆ 

ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್​​ಎನ್ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶ ಸಮೀಕ್ಷೆ ನಡೆಸಿದ್ದ ನಾಗಮೋಹನ್ ದಾಸ್ ಆಯೋಗವು ಆಗಸ್ಟ್​ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. 

ಇದನ್ನೂ ಓದಿ: ಧರ್ಮಸ್ಥಳದಲ್ಲಿ SIT ತನಿಖೆ ಬಗ್ಗೆ ಡಾ.ಜಿ ಪರಮೇಶ್ವರ್ ಮಹತ್ವದ ಅಪ್​​ಡೇಟ್ಸ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Internal reservation cabinet meeting
Advertisment