Advertisment

ಇಂದು ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದಲ್ಲೇ RSS ಪಥ ಸಂಚಲನ.. ಆದ್ರೆ ಅನುಮತಿ?

2019ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿದ್ದ ಬಿಜೆಪಿ ಈಗ ಪುತ್ರನನ್ನ ಖೆಡ್ಡಾಗೆ ಕೆಡವಲು ಪ್ಲಾನ್​​​ ರೂಪಿಸ್ತಿದೆ. ಈ ಸಂಘರ್ಷವನ್ನ ಸಂಘ ಮತ್ತು ಬಿಜೆಪಿ ಸವಾಲಾಗಿ ಪರಿಗಣಿಸಿದೆ. ಇತ್ತ ಇಂದು ತಹಶೀಲ್ದಾರ್​ ಅನುಮತಿ ನೀಡ್ತಾರಾ? ಇಲ್ವಾ?

author-image
Bhimappa
PRIYANK_KHARGE_RSS
Advertisment

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆರ್​ಎಸ್​ಎಸ್​ ನಡುವೆ ಸಂಘರ್ಷ ತಾರಕಕ್ಕೆರಿದೆ. ಶತಮಾನೋತ್ಸವದ ಸಂಭ್ರಮದಲ್ಲಿದ್ದ ಸಂಘಕ್ಕೆ ಖರ್ಗೆ ಹೊತ್ತಿಸಿದ ನಿರ್ಬಂಧದ ಕಿಡಿ ಕೆಂಡವಾಗುವಂತೆ ಮಾಡಿದೆ. ಇಂದು ಪ್ರಿಯಾಂಕ್ ಕ್ಷೇತ್ರದಲ್ಲೇ ಸ್ವಯಂ ಸೇವಕರು ಪಥಸಂಚಲನ ನಡೆಸೋ ಮೂಲಕ ಈ ಸಮರವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ಯುವ ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಚಿತ್ತಾಪುರದತ್ತ ನಾಡಿನ ಚಿತ್ತ ನೆಟ್ಟಿದೆ.

Advertisment

ಆರ್​ಎಸ್​ಎಸ್​ ವರ್ಸಸ್​ ಪ್ರಿಯಾಂಕ್​ ಖರ್ಗೆ. ಆರ್​ಎಸ್​ಎಸ್​ ವರ್ಸಸ್​ ಕಾಂಗ್ರೆಸ್ ಸರ್ಕಾರ. ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘಕ್ಕೆ ರಾಜ್ಯದಲ್ಲಿ ಅಂಕುಶ ಹೇರುವ ಯತ್ನ ಭರ್ಜರಿಯಾಗೇ ನಡೆದಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್​ಎಸ್​ಎಸ್​ ಚಟುವಟಿಕೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೆ ಸಂಘ ಪರಿವಾರ ಕೆಂಡವಾಗಿದೆ. ಎಲ್ಲಿ ಕಳೆದಿದೆಯೋ ಅಲ್ಲೇ ಹುಡುಕಬೇಕು ಅನ್ನುವಂತೆ ಪ್ರಿಯಾಂಕ್ ಖರ್ಗೆ ಕಿಡಿ ಹೊತ್ತಿಸಿದ ಕಲಬುರಗಿಯಲ್ಲೇ ಪಥ ಸಂಚಲನಕ್ಕೆ ಆರ್​ಎಸ್​ಎಸ್​ ಮುಂದಾಗಿದ್ದು ಸಂಚಲನ ಸೃಷ್ಟಿಸಿದೆ. 

Priyank_Kharge

ಇಂದು ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ  

ಆರ್‌ಎಸ್‌ಎಸ್‌ ವಿರುದ್ಧ ಸಮರ ಸಾರಿರುವ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಇಂದು ಇಡೀ ನಾಡಿನ ಗಮನ ಕೇಂದ್ರಿಕರಿಸಿದೆ. ಇಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಡೆಸೋ ಮೂಲಕ ಖರ್ಗೆಗೆ ಟಕ್ಕರ್ ಕೊಡೋಕೆ ಮುಂದಾಗಿದೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಚಿತ್ತಾಪುರದಲ್ಲಿ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ.

RSS ಪಥ ಸಂಚಲನಕ್ಕೆ ಈವರೆಗೂ ಸಿಗದ ಅನುಮತಿ

ಇನ್ನು ಈಗಾಗಲೇ ಸರ್ಕಾರಿ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ ಅಂತ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲೇ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ ತಹಶೀಲ್ದಾರ್ ಬಳಿ ಅನುಮತಿ ಕೇಳಿದೆ. ಆದರೆ ಇನ್ನೂ ಅನುಮತಿ ನೀಡಿಲ್ಲ ಎನ್ನಲಾಗಿದೆ. ಅಲ್ಲದೆ ಅನುಮತಿ ಕೇಳಿದ ಆರ್‌ಎಸ್‌ಎಸ್‌ಗೆ ತಹಶೀಲ್ದಾರ್ 12 ಅಂಶಗಳ ವಿವರಣೆ ಕೇಳಿದ್ದಾರೆ.

Advertisment

‘ಸಂಘ’ರ್ಷಕ್ಕಿಳಿದ ಪ್ರಿಯಾಂಕ್​​!

  • ಪಥ ಸಂಚಲನದಲ್ಲಿ ಲಾಠಿ ಆಯುಧಗಳು ಬಳಕೆ ಬಗ್ಗೆ ಉಲ್ಲೇಖಿಸಿಲ್ಲ
  • ಆರ್​​ಎಸ್​ಎಸ್​​ನ ನೋಂದಣಿಯ ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ
  • ಪಥ ಸಂಚಲನದ ಮೂಲ ಉದ್ದೇಶ ಬಗ್ಗೆ ಮಾಹಿತಿ ನೀಡಿರುವುದಿಲ್ಲ
  • ಹೀಗೆ 11 ಅಂಶಗಳ ವಿವರಣೆಯನ್ನ ಕೇಳಿದ ಚಿತ್ತಾಪುರ ತಹಶೀಲ್ದಾರ್
  • ತಹಶೀಲ್ದಾರ್ ಕೇಳಿದ 11 ಅಂಶಗಳಿಗೆ ವಿವರಣೆ ಸಿದ್ಧಪಡಿಸಿದ ಪ್ರಮುಖರು
  • ಸಂಘದ ಪಥ ಸಂಚಲನದಲ್ಲಿ ಸಂಪೂರ್ಣ ಗಣವೇಷ ಹೊಂದಿರುತ್ತದೆ
  • ಗಣವೇಷ ಇರುವುದರಿಂದ ದಂಡದೊಂದಿಗೆ ಮಾತ್ರ ಪಥಸಂಚಲನ 
  • ಸಾಮಾಜಿಕ ಸಂಘಟನೆ ಆಗಿದ್ದರಿಂದ ನೋಂದಣಿ ಆಗಿರುವುದಿಲ್ಲ
  • ತಹಶೀಲ್ದಾರ್ ಕೇಳಿರುವ ಎಲ್ಲಾ ಅಂಶಗಳಿಗೆ ಸಂಘ ವಿವರಣೆ

ಇದನ್ನೂ ಓದಿ:DCC Bank Election; ಇವತ್ತೇ ವೋಟಿಂಗ್, ಕೌಂಟಿಂಗ್, ರಿಸಲ್ಟ್​.. ಯಾರಿಗೆ ಒಲಿಯುತ್ತಾಳೆ ವಿಜಯಲಕ್ಷ್ಮಿ?

RSS

ಇಂದು ಖರ್ಗೆ ಗುಹೆ ಕಲಬುರಗಿಗೆ ನುಗ್ಗಿ ಪಥಸಂಚಲನಕ್ಕೆ ಕೇಸರಿ ಪಡೆ ಮುಂದಾಗಿದೆ. 2019ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿದ್ದ ಬಿಜೆಪಿ ಈಗ ಪುತ್ರನನ್ನ ಖೆಡ್ಡಾಗೆ ಕೆಡವಲು ಪ್ಲಾನ್​​​ ರೂಪಿಸ್ತಿದೆ. ಈ ಸಂಘರ್ಷವನ್ನ ಸಂಘ ಮತ್ತು ಬಿಜೆಪಿ ಸವಾಲಾಗಿ ಪರಿಗಣಿಸಿದೆ. ಇತ್ತ ಇಂದು ತಹಶೀಲ್ದಾರ್​ ಅನುಮತಿ ನೀಡ್ತಾರಾ? ಇಲ್ವಾ? ಅನ್ನೋ ಕುತೂಹಲ ಕೆರಳಿಸಿದೆ. ಈ ಮಧ್ಯೆ ಪಥ ಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಪಥಸಂಚಲನಕ್ಕೆ ಆರ್‌ಎಸ್‌ಎಸ್‌ ಭರ್ಜರಿ ಸಿದ್ಧತೆ ಮಾಡಿದ್ದು ಮುಂಜಾಗ್ರತಾ ಕ್ರಮವಾಗಿ ಚಿತ್ತಾಪುರ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RSS ban RSS
Advertisment
Advertisment
Advertisment