/newsfirstlive-kannada/media/media_files/2025/10/19/bgm_dcc_bank-2025-10-19-07-44-30.jpg)
ಬೆಳಗಾವಿ ಕುಂದಾಗೆ ಎಷ್ಟೋ ಫೇಮಸ್ಸೋ ಅಷ್ಟೇ ಫೇಮಸ್ಸು ಅಲ್ಲಿನ ರಣ ರಣ ರಾಜಕೀಯಕ್ಕೆ. ಜಾರಕಿಹೊಳಿ, ಜೊಲ್ಲೆ, ಕತ್ತಿ ಹೀಗೆ ಹಲವು ಕುಟುಂಬಗಳ ನಡುವೆ ಯಾವಾಗಲೂ ಜಿದ್ದಾಜಿದ್ದಿ ಇರುತ್ತದೆ. ಇಂದು ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಚುನಾವಣೆಗೆ ಸಕಲ ರೀತಿಯೂ ಅಖಾಡ ಹದಗೊಂಡಿದೆ.
ಕುಂದಾನಗರಿ ಬೆಳಗಾವಿ ಅಂದ್ರೆ ರಾಜಕೀಯ ಮನೆತನಗಳ ಸಮರ. ಅದರಲ್ಲೂ ಕತ್ತಿ- ಜಾರಕಿಹೊಳಿ ಕುಟುಂಬದ ಮಧ್ಯೆ ರಾಜಕೀಯ ಜಿದ್ದಾಜಿದ್ದಿ ತೀರಾ ಸಾಮಾನ್ಯ. ಒಬ್ಬರಿಗೊಬ್ಬರು ಕತ್ತಿ ಮಸಿಯುತ್ತಾ ಆಗಾಗ್ಗೆ ಕದನದಲ್ಲಿ ಕೆಲವರು ಜಾರಿ ಬೀಳುತ್ತಲೇ ಇರ್ತಾರೆ. ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತೊಮ್ಮೆ ಬದ್ಧವೈರಿಗಳ ಕದನಕ್ಕೆ ಅಣಿಯಾಗಿದೆ.
ಏಳು ತಾಲೂಕಿನ ಸ್ಥಾನಗಳಿಗೆ ಭಾರೀ ಜಿದ್ದಾಜಿದ್ದಿ
ಡಿಸಿಸಿ ಬ್ಯಾಂಕ್​.. ಬೆಳಗಾವಿಯಲ್ಲಿ ಇದರ ಪ್ರತಿಷ್ಠೆ ಎಷ್ಟು ಅಂತ ಬರಿ ಜಿಲ್ಲೆಗಲ್ಲ, ರಾಜ್ಯಕ್ಕೆ ಗೊತ್ತು. ಲೇವಾದೇವಿದಾರರ ಕಪಿಮುಷ್ಠಿಯಿಂದ ಜಿಲ್ಲೆಯ ರೈತರನ್ನು ಮುಕ್ತಗೊಳಿಸಿದ ಬ್ಯಾಂಕ್ ಅಂದ್ರೆ ಬೆಳಗಾವಿ ಡಿಸಿಸಿ ಬ್ಯಾಂಕ್. ಇದೀಗ ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್​​ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಬೆಳಗಾವಿಯ ಪ್ರಬಲ ರಾಜಕೀಯ ಕುಟುಂಬಗಳ ಜಿದ್ದಾಜಿದ್ದಿನಿಂದ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದ ಗಮನ ಸೆಳೆದಿದ್ದು, ಗೆಲುವಿಗಾಗಿ ರೆಸಾರ್ಟ್ ರಾಜಕಾರಣವೂ ನಡೀತಿದೆ.
ಇಂದು ಡಿಸಿಸಿ ಬ್ಯಾಂಕ್ ಚುನಾವಣೆ!
- ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
- ಬೆಳಗಾವಿಯ 7 ತಾಲೂಕಿನ ನಿರ್ದೇಶಕರ ಸ್ಥಾನಗಳಿಗೆ ಮತದಾನ
- ಬಿ.ಕೆ ಮಾಡೆಲ್ ಸ್ಕೂಲ್‌ನಲ್ಲಿ ಮತದಾನ, ಇವತ್ತೇ ಮತ ಎಣಿಕೆ
- ಅರ್ಹ ಮತದಾರರಿಂದ ಡಿಸಿಸಿ ಬ್ಯಾಂಕ್‌ಗೆ ಮತದಾನ ನಡೆಯಲಿದೆ
- ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ಡಿಸಿಸಿಗೆ ಮತದಾನ
- ಸಂಜೆ 4 ಗಂಟೆಯಿಂದ ಮತ ಎಣಿಕೆ, ಇವತ್ತೇ ಫಲಿತಾಂಶ ಪ್ರಕಟ
- ಗೌಪ್ಯ ಮತದಾನ, ಮತ ಬಹಿರಂಗಪಡಿಸಿದ್ರೆ ಆ ಮತ ಅನರ್ಹ
- ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿರೋ ಮತದಾನ, ಮತ ಎಣಿಕೆ
ಇದನ್ನೂ ಓದಿ:ಇಂದು IND vs AUS ಮೊದಲ ಏಕದಿನ ಪಂದ್ಯ.. ಪರ್ತ್​​ನಲ್ಲಿ ಸಾರಥಿ ಯಾರ್ ಆಗ್ತಾರೆ?
ರಮೇಶ್ ಕತ್ತಿಗೆ ರಿಲೀಫ್.. ವೈರಿಗಳ ವಿರುದ್ಧ ವಾಕ್ಸಮರ!
ಇನ್ನು ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಪ್ರತಿನಿಧಿಸುವ ಸದಸ್ಯನ ಹೆಸರನ್ನ ಮತದಾರರ ಲಿಸ್ಟ್‌ನಿಂದ ಕೈಬಿಡಲಾಗಿತ್ತು. ಈ ವಿವಾದ ಧಾರವಾಡ ಹೈಕೋರ್ಟ್ ಪೀಠದ ಮೆಟ್ಟಿಲೇರಿತ್ತು. ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯನ್ನ ಮುಂದೂಡಿಕೆ ಮಾಡಲಾಗಿತ್ತು. ಆದ್ರೆ ನಿನ್ನೆ ರಮೇಶ್ ಕತ್ತಿ ಬಣಕ್ಕೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹುಕ್ಕೇರಿ ತಾಲೂಕಿನ ನಿರ್ದೇಶಕ ಚುನಾವಣೆಗೆ ಧಾರವಾಡ ಹೈಕೋರ್ಟ್ ಅಸ್ತು ಎಂದಿದೆ. ಇದು ನಮಗೆ ಸಿಕ್ಕಿರೋ ಮೊದಲ ಜಯ ಅಂತ ರಮೇಶ್ ಕತ್ತಿ ಬಣ್ಣಿಸಿದ್ದಾರೆ. ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಎಕೆ 47 ಗನ್ ಆರೋಪ ಮಾಡಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೆಸಾರ್ಟ್ ರಾಜಕೀಯವೂ ನಡೆದಿದೆ. ಗೋವಾ, ಮಹಾರಾಷ್ಟ್ರ, ಉತ್ತರ ಭಾರತದ ಧಾರ್ಮಿಕ ಸ್ಥಳಗಳಿಗೆ ಮತದಾರರನ್ನ ಸ್ಥಳಾಂತರಿಸಿರೋ ಆರೋಪ ಕೇಳಿಬಂದಿದೆ. ಇದೆಲ್ಲದರ ಮಧ್ಯೆ ಬೆಳಗಾವಿಯ ಕುಟುಂಬ ರಾಜಕಾರಣದಲ್ಲಿ ಯಾರ ಕೈ ಮೇಲಾಗಲಿದೆ ಅನ್ನೋದಕ್ಕೆ ಸಂಜೆವರೆಗೂ ಕಾಯಲೇಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ