Advertisment

ಇಂದು IND vs AUS ಮೊದಲ ಏಕದಿನ ಪಂದ್ಯ.. ಪರ್ತ್​​ನಲ್ಲಿ ಸಾರಥಿ ಯಾರ್ ಆಗ್ತಾರೆ?

ಮುಂದಿನ 2027ರ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ನಾಯಕತ್ವವನ್ನು ಯುವ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಬಿಸಿಸಿಐ ವಹಿಸಿದೆ. ಆದರೂ ತಂಡದಲ್ಲಿ ರೋಹಿತ್, ಕೊಹ್ಲಿ ಸ್ಥಾನಕ್ಕೆ ಯಾವುದೇ ಧಕ್ಕೆ ಏನು ಬರುವುದಿಲ್ಲ. ಏಕೆಂದರೆ ಇಬ್ಬರು ಅನುಭವಿ ಆಟಗಾರರು.

author-image
Bhimappa
KOHLI_ROHITH (1)
Advertisment

ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ನಡುವಿನ ಮೊದಲ ಏಕದಿನ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಎರಡು ತಂಡಗಳು ಭರ್ಜರಿ ಅಭ್ಯಾಸ ನಡೆಸಿದ್ದು ಯಾವ ಟೀಮ್ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತದೆ ಎಂದು ಜಡ್ಜ್​ ಮಾಡೋದು ಕಷ್ಟ. ಏಕೆಂದರೆ ಎರಡು ತಂಡಗಳಲ್ಲಿ ಆಟಗಾರರು ಅಷ್ಟೇ ಆಕ್ರಮಣಕಾರಿ ಪ್ರದರ್ಶನ ನೀಡಬಲ್ಲರು.

Advertisment

ಹೊಸ ಕ್ಯಾಪ್ಟನ್​ ಶುಭ್​ಮನ್​ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯುತ್ತಿದರೆ ಅತ್ತ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ಸಾರಥ್ಯದಲ್ಲಿ ಮುನ್ನಡೆಯಲಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರು ವಿಕೆಟ್​ ಕೀಪರ್ ಜವಾಬ್ದಾರಿ ಜೊತೆಗೆ ಬ್ಯಾಟಿಂಗ್ ಕೂಡ ಮಾಡಲಿದ್ದಾರೆ. ಭಾರತದ ಬ್ಯಾಟಿಂಗ್​ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೆಲವು ತಿಂಗಳ ಬಳಿಕ ತಂಡಕ್ಕೆ ಮರಳಿರುವುದು ಅಭಿಮಾನಿಗಳಲ್ಲಿ ಹೊಸ ಅಲೆ ತಂದಿದೆ. 

ಈ ಮೊದಲು ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿಗಳನ್ನು ಆಡುತ್ತಿತ್ತು. ಆದರೆ ಮುಂದಿನ 2027ರ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ನಾಯಕತ್ವವನ್ನು ಯುವ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಬಿಸಿಸಿಐ ವಹಿಸಿದೆ. ಆದರೂ ತಂಡದಲ್ಲಿ ರೋಹಿತ್, ಕೊಹ್ಲಿ ಸ್ಥಾನಕ್ಕೆ ಯಾವುದೇ ಧಕ್ಕೆ ಏನು ಬರುವುದಿಲ್ಲ. ಏಕೆಂದರೆ ಇಬ್ಬರು ಅನುಭವಿ ಆಟಗಾರರು. ಇತರರೊಂದಿಗೆ ಬೇಗ ಹೊಂದಿಕೊಳ್ಳುವ ಸ್ವಭಾವದವರು ಆಗಿದ್ದಾರೆ.

ಇದನ್ನೂ ಓದಿ:ಕೊಹ್ಲಿನ ಬಿಡದ ಫ್ಯಾನ್ಸ್​.. ವಿರಾಟ್​ ಗ್ಲಾಮರ್​ಗೆ ಮಾಜಿ ಕ್ರೀಡಾ ಸಚಿವೆ ಕ್ಲೀನ್​ ಬೋಲ್ಡ್​!

Advertisment

GILL_ROHITH_SHARMA

ಇನ್ನು ಆಸ್ಟ್ರೇಲಿಯಾ ತಂಡವನ್ನು ಇಷ್ಟು ದಿನ ಮುನ್ನಡೆಸಿದ್ದ ನಾಯಕ ಪ್ಯಾಟ್​ ಕಮಿನ್ಸ್​ ಭಾರತದ ಜೊತೆಗಿನ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಕಮಿನ್ಸ್​ ಬದಲಿಗೆ ಕ್ಯಾಪ್ಟನ್ಸಿಯನ್ನು ಮಿಚೆಲ್ ಮಾರ್ಷ್​ಗೆ ವಹಿಸಲಾಗಿದೆ. ಪ್ಯಾಟ್ ಕಮಿನ್ಸ್​ ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಇಡೀ ಸರಣಿಯಿಂದಲೇ ರೂಲ್ಡ್​ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೋಶ್​ ಫಿಲಿಪ್​ ವಿಕೆಟ್​ ಕೀಪರ್ ಆಗಿದ್ದಾರೆ. 

ಇಂದಿನ ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಪರ್ತ್​​​ನ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ಪಂದ್ಯ ಶುರುವಾಗಲಿದೆ. ಈಗಾಗಲೇ ಆಟಗಾರರು ಮೈದಾನದಲ್ಲಿ ವಾಮ್​ಅಪ್​ ಮಾಡುತ್ತಿದ್ದಾರೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Rohit Sharma-Virat Kohli Virat Kohli IND vs AUS
Advertisment
Advertisment
Advertisment