Advertisment

ಕೊಹ್ಲಿನ ಬಿಡದ ಫ್ಯಾನ್ಸ್​.. ವಿರಾಟ್​ ಗ್ಲಾಮರ್​ಗೆ ಮಾಜಿ ಕ್ರೀಡಾ ಸಚಿವೆ ಕ್ಲೀನ್​ ಬೋಲ್ಡ್​!

ಬರೋಬ್ಬರಿ 4 ತಿಂಗಳ ಬಳಿಕ ವಿರಾಟ್​ ಕೊಹ್ಲಿ ಫೀಲ್ಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿಯ ಕಮ್​ಬ್ಯಾಕ್ ವಿಶ್ವಾದ್ಯಂತ​ ಕ್ರಿಕೆಟ್​ ಅಭಿಮಾನಿಗಳನ್ನ ಬಡಿದೆಬ್ಬಿಸಿದೆ. ಆಸ್ಟ್ರೇಲಿಯಾದಲ್ಲಂತೂ ಕೊಹ್ಲಿ ಮೇನಿಯಾ ಆರಂಭವಾಗಿದೆ. ವಿರಾಟ್​​ ಕೊಹ್ಲಿಯ ಅಭ್ಯಾಸವನ್ನ ನೋಡೋಕೆ ಫ್ಯಾನ್ಸ್​ ಮುಗಿಬೀಳ್ತಿದ್ದಾರೆ.

author-image
Bhimappa
VIRAT_KOHLI_AUS
Advertisment

ಬರೋಬ್ಬರಿ 4 ತಿಂಗಳ ಬಳಿಕ ವಿಶ್ವ ಕ್ರಿಕೆಟ್​ ಲೋಕದ ಸುಲ್ತಾನ ರನ್​ಭೂಮಿಗೆ ಇಳಿಯೋಕೆ ಸಜ್ಜಾಗಿದ್ದಾರೆ. ಕಾಂಗರೂ ನಾಡಲ್ಲೀಗ ಕಿಂಗ್​ ಕೊಹ್ಲಿಯದ್ದೇ ಕ್ರೇಜ್​​. ಮ್ಯಾಚ್​ ನೋಡೋಕೆ ಬಂದಂತೆ ಫ್ಯಾನ್ಸ್​ ಪ್ರಾಕ್ಟಿಸ್​​ ಸೆಷನ್​ ನೋಡೋಕೆ ಬರ್ತಿದ್ದಾರೆ. ಕಾಂಗರೂ ನಾಡಲ್ಲಿ ವಿರಾಟ್​ ಕೊಹ್ಲಿಯ ಮೇನಿಯಾ ಶುರುವಾಗಿದೆ. 

Advertisment

ಕ್ರಿಕೆಟ್​ ಲೋಕದ ಸುಲ್ತಾನ ಕಿಂಗ್​ ಕೊಹ್ಲಿಯ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜಾಗಿದೆ. ಐಪಿಎಲ್​ ಅಂತ್ಯದ ಬಳಿಕ ಫೀಲ್ಡ್​ನಿಂದ ದೂರ ಉಳಿದಿದ್ದ ವಿರಾಟ್​ ಕೊಹ್ಲಿ ರಣಾಂಗಣಕ್ಕೆ ವಾಪಾಸ್ಸಾಗಲು ಸಜ್ಜಾಗಿದ್ದಾರೆ. ಪರ್ತ್​​​​ ಸ್ಟೇಡಿಯಂನಲ್ಲಿ ಭರ್ಜರಿ ಸಿದ್ಧತೆ ನಡೆಸ್ತಿರೋ ಡೆಲ್ಲಿ ಡ್ಯಾಶರ್​ ಕಾಂಗರೂಗಳ ಬೇಟೆಯಾಡಲು ತುದಿಗಾಲಲ್ಲಿ ನಿಂತಿದ್ದಾರೆ. 

VIRAT_KOHLI (2)

ಕಾಂಗರೂ ನಾಡಲ್ಲಿ ವಿರಾಟ್​​ ಕೊಹ್ಲಿ ಮೇನಿಯಾ.!

ಬರೋಬ್ಬರಿ 4 ತಿಂಗಳ ಬಳಿಕ ವಿರಾಟ್​ ಕೊಹ್ಲಿ ಫೀಲ್ಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿಯ ಕಮ್​ಬ್ಯಾಕ್ ವಿಶ್ವಾದ್ಯಂತ​ ಕ್ರಿಕೆಟ್​ ಅಭಿಮಾನಿಗಳನ್ನ ಬಡಿದೆಬ್ಬಿಸಿದೆ. ಆಸ್ಟ್ರೇಲಿಯಾದಲ್ಲಂತೂ ಕೊಹ್ಲಿ ಮೇನಿಯಾ ಆರಂಭವಾಗಿದೆ. ವಿರಾಟ್​​ ಕೊಹ್ಲಿಯ ಅಭ್ಯಾಸವನ್ನ ನೋಡೋಕೆ ಫ್ಯಾನ್ಸ್​ ಮುಗಿಬೀಳ್ತಿದ್ದಾರೆ. ಪಂದ್ಯಕ್ಕೆ ಬಂದಂತೆ ಪ್ರಾಕ್ಟಿಸ್​ ಸೆಷನ್​ ನೋಡೋಕೆ ಅಭಿಮಾನಿಗಳು ಎದ್ದೂಬಿದ್ದೂ ಬರ್ತಿದ್ದಾರೆ. 

ಅಭಿಮಾನಿಗಳ ಜೊತೆ ಬೆರೆತ ವಿರಾಟ್​ ಕೊಹ್ಲಿ

ಪರ್ತ್​​ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸ್ತಿರೋ ಕೊಹ್ಲಿಯನ್ನ ನೋಡಲು ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಬಂದ ಕೆಲ ಲಕ್ಕಿ ಅಭಿಮಾನಿಗಳಿಗೆ ಕೊಹ್ಲಿ ದರ್ಶನದ ಜೊತೆಗೆ ಆಟೋಗ್ರಾಫ್​​ & ಪೋಟೋಗ್ರಾಫ್​ ಕೂಡ ಸಿಕ್ಕಿದೆ. ಅಭ್ಯಾಸದ ಬಳಿಕ ಫ್ಯಾನ್ಸ್​ ಬಳಿ ತೆರಳಿರೋ ಕೊಹ್ಲಿ ಆಟೋಗ್ರಾಫ್​ & ಫೋಟೋಗ್ರಾಫ್​ ನೀಡಿ ಖುಷಿ ಪಡಿಸಿದ್ದಾರೆ. 

Advertisment

ಆಟೋಗ್ರಾಫ್ ಪಡೆದ ಖುಷಿಯಲ್ಲಿ ಕುಣಿದಾಡಿದ ಬಾಲಕ.!

ಪರ್ತ್​​ ಮೈದಾನದ ಬಳಿಕ ಕೊಹ್ಲಿಯಿಂದ ಆಟೋಗ್ರಾಫ್​ ಪಡೆದ ಪುಟ್ಟ ಬಾಲಕನೊಬ್ಬ ಖುಷಿಯಲ್ಲಿ ಕುಣಿದಾಡಿದ್ದಾರೆ. ಕೊಹ್ಲಿಗಿರೋ ಅಭಿಮಾನಿಗಳು ಮತ್ತವರ ಅಭಿಮಾನದ ಕಥೆಯನ್ನ ಈ ಒಂದು ವೈರಲ್ ದೃಶ್ಯವೇ ಹೇಳ್ತಿದೆ. 

ಮೈದಾನದ ಬಳಿ ಮಾತ್ರವಲ್ಲ, ಕೊಹ್ಲಿ ಹೊರಗಡೆ ಕಾಲಿಟ್ರೆ ಸಾಕು, ಅಭಿಮಾನಿಗಳು ಫೋಟೋಗ್ರಫ್​, ಆಟೋಗ್ರಾಫ್​ಗಾಗಿ ಮುಗಿ ಬೀಳ್ತಿದ್ದಾರೆ. ಇದನೆಲ್ಲಾ ಕೂಲ್​ & ಕಾಮ್​ ಆಗೇ ನಿಭಾಯಿಸ್ತಾ ಇರೋ ಕೊಹ್ಲಿ, ಯಾರಿಗೂ ನಿರಾಸೆ ಉಂಟು ಮಾಡದೇ ಫ್ಯಾನ್ಸ್​ ಜೊತೆ ಬೆರಿತಿದ್ದಾರೆ.   

ಅಸ್ಟ್ರೇಲಿಯಾ ಕ್ರೀಡಾ ಸಚಿವೆಯೂ ಆಗಿದ್ರು ಕ್ಲೀನ್​ ಬೋಲ್ಡ್​.!

ಕೊಹ್ಲಿ ಯಾವಾಗ ಆಸ್ಟ್ರೇಲಿಯಾಗೆ ಎಂಟ್ರಿ ಕೊಟ್ರೂ, ಫ್ಯಾನ್ಸ್​​ ಫುಲ್​ ಖುಷ್​​ ಆಗ್ತಾರೆ. ಟೀಮ್​ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಅಂದ್ರೆ ಫ್ಯಾನ್ಸ್​​ ಫುಲ್​ ಥ್ರಿಲ್​ ಆಗಿರ್ತಾರೆ. ಇದಕ್ಕೆ ಕಾರಣ ವಿರಾಟ್​ ಕೊಹ್ಲಿ ಎಂಬ ಮಾಂತ್ರಿಕ. ಕೊಹ್ಲಿ ಆಟವೇ ಹಾಗೇ.. ಎಂತವರೂ ಕೂಡ ಮರುಳಾಗಿ ಬಿಡ್ತಾರೆ. ಆಸ್ಟ್ರೇಲಿಯಾದ ಮಾಜಿ ಕ್ರೀಡಾ ಸಚಿವೆ ಕೂಡ ಕೊಹ್ಲಿ ಆಟಕ್ಕೆ ಕ್ಲೀನ್​ ಬೋಲ್ಡ್​ ಆಗಿದ್ರು. 

Advertisment

‘ಇವರನ್ನ ಪರಿಚಯ ಮಾಡಿಸಲು ನನಗೆ ಹೆಚ್ಚು ಸಂತೋಷವಾಗ್ತಿದೆ. ಇವರ ಮೇಲೆ ನನಗೆ ಕ್ರಿಕೆಟ್​​ ಕ್ರಶ್​ ಆಗಿದೆ. ಮಿಸ್ಟರ್​. ವಿರಾಟ್​ ಕೊಹ್ಲಿ, ವಿಶ್ವದ ಬೆಸ್ಟ್​ ಬ್ಯಾಟ್ಸ್​​ಮನ್​ ಎಂದೇ ಎಲ್ಲರಿಗೂ ತಿಳಿದಿರುವವರು. ಆನ್​ಫೀಲ್ಡ್​ನಲ್ಲಿ ಅವರಲ್ಲಿರೊ ಫ್ಯಾಷನ್​, ನೋಡಲು ಅತ್ಯಾಕರ್ಷಕವಾಗಿರುತ್ತದೆ. ಈ ವಾರ ನೀವು ಸೋಲ್ತಿರಾ ಅನ್ನೋ ಆಲೋಚನೆ ಇದ್ರೂ ಕೂಡ.. ಮಿಸ್ಟರ್​ ಕೊಹ್ಲಿ’

ಬ್ರಿಜೆಟ್​​ ಮೆಕಂಝಿ, ಆಸ್ಟ್ರೇಲಿಯಾದ ಮಾಜಿ ಸಚಿವೆ

ಇದನ್ನೂ ಓದಿ: ಪಾಕ್ ಕ್ರಿಕೆಟ್​ ಅಭಿಮಾನಿ ಬಳಿ RCB, ಭಾರತದ ಜೆರ್ಸಿ.. ಆಟೋಗ್ರಾಫ್​ ಕೊಟ್ಟ ಕೊಹ್ಲಿ, ರೋಹಿತ್!

KOHLI_ROHITH

ಕೊಹ್ಲಿ ಪಾಲಿಗೆ ಇದೇ ಕೊನೆಯ ಆಸ್ಟ್ರೇಲಿಯಾ ಪ್ರವಾಸ.!

ವಿರಾಟ್​ ಕೊಹ್ಲಿಯ ಅಭ್ಯಾಸವನ್ನ ನೋಡಲು ಫ್ಯಾನ್ಸ್​ ಮುಗಿಬೀಳ್ತೊರದಕ್ಕೆ ಇದೂ ಒಂದು ಕಾರಣವಾಗಿದೆ. 2027ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಆಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಮತ್ತೆ ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಆಡೋದು ಅನುಮಾನವೇ. ಕೊಹ್ಲಿ ಪಾಲಿಗೆ ಇದೇ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಿದೆ. 

Advertisment

ಬಿಗ್​ ಮ್ಯಾಚ್, ಬಿಗ್​ ಟೀಮ್ಸ್​​​ ಅಂದ್ರೆ,  ಕಿಂಗ್​​​ ಕೊಹ್ಲಿಗೆ ಇನ್ನಿಲ್ಲದ ಪ್ರೀತಿ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ, ಆಸಿಸ್​ ತಂಡದ ವಿರುದ್ಧ ರನ್​ ಕೊಳ್ಳೆ ಹೊಡೆಯೋದು ವಿರಾಟ್​​ಗೆ ಫೇವರಿಟ್​​..! ರನ್​ಮಷೀನ್​ಗೆ ಹೇಗೆ ಆಸ್ಟ್ರೇಲಿಯಾ ವಿರುದ್ಧ ಆಡೋದು ಇಷ್ಟಾನೋ, ಆಸ್ಟ್ರೇಲಿಯಾ ಜನರಿಗೂ ವಿರಾಟನೇ ಫೇವರಿಟ್​​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Virat Kohli IND vs AUS
Advertisment
Advertisment
Advertisment