/newsfirstlive-kannada/media/media_files/2025/11/29/siddaramaiah-dk-shivakumar-2025-11-29-08-23-31.jpg)
ಬಿಜೆಪಿಯ ವೋಟ್ ಚೋರಿ ವಿರುದ್ಧ ಇಂದು ದೆಹಲಿಯಲ್ಲಿ ಕಾಂಗ್ರೆಸ್​ ಪ್ರತಿಭಟನೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಆಳಂದ ಸೇರಿ ಹಲವೆಡೆ ವೋಟ್ ಚೋರಿ ಆಗಿದೆ ಅಂತ ರಾಹುಲ್ ಗಾಂಧಿ ಆರೋಪ ಮಾಡಿದ್ರು.
ದಾಖಲೆ ಸಮೇತ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವೋಟ್ ಚೋರಿ ಆರೋಪ ಮಾಡಿದ್ದರು. ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನೇತೃತ್ವದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರದಂತೆ ರಾಜ್ಯದ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಮತಗಳ್ಳತನ ವಿಚಾರ ಕೇವಲ ಕರ್ನಾಟಕದ್ದಲ್ಲ. ಹರಿಯಾಣ, ಬಿಹಾರ, ಮಹಾರಾಷ್ಟ್ರದಲ್ಲೂ ವೋಟ್ ಚೋರಿ ಆಗಿದೆ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ದೇಶ, ರಾಜ್ಯದ ಜನರಿಗೆ ಮತಗಳ್ಳತನ ವಿಷಯ ತಿಳಿಸಬೇಕು. ಪ್ರಜಾಪ್ರಭುತ್ವ ಉಳಿಸಬೇಕಿರೋದ್ರಿಂದ ಪ್ರತಿಭಟನೆ ಮಾಡ್ತಿದ್ದೇವೆ ಅಂತ ಗುಡುಗಿದ್ದಾರೆ.
ಇದನ್ನೂ ಓದಿ:EXCLUSIVE: ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್, ಖಡಕ್ ಮಾತು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us